ಕರ್ನಾಟಕ ಉಸ್ತುವಾರಿ, 8 ಹಾಲಿ ಎಂಪಿಗಳಿಗೇ ಬಿಜೆಪಿ ಟಿಕೆಟ್‌ ಇಲ್ಲ!

Published : Oct 06, 2026, 08:51 AM IST
BJP Flag

ಸಾರಾಂಶ

ಉತ್ತರ ಪ್ರದೇಶದಿಂದ ಅ.16ರಂದು ನಡೆಯಲಿರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಸೋಮವಾರ ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಬಿ.ಎಲ್. ವರ್ಮಾ ಸೇರಿದಂತೆ ಎಲ್ಲಾ 8 ಹಾಲಿ ಸದಸ್ಯರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

 ಲಖನೌ: ಉತ್ತರ ಪ್ರದೇಶದಿಂದ ಅ.16ರಂದು ನಡೆಯಲಿರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಸೋಮವಾರ ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಹಾಲಿ ರಾಜ್ಯಸಭಾ ಸದಸ್ಯರಾದ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಕೇಂದ್ರ ಸಚಿವ ಬಿ.ಎಲ್. ವರ್ಮಾ ಸೇರಿದಂತೆ ಎಲ್ಲಾ 8 ಹಾಲಿ ಸದಸ್ಯರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಬದಲಾಗಿ ಅಷ್ಟೂ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.

ಜೊತೆಗೆ ಉತ್ತರಪ್ರದೇಶದಿಂದ ಟಿಕೆಟ್ ಪಡೆಯಬಹುದು ಎಂದು ಎಣಿಸಲಾಗಿದ್ದ ಕರ್ನಾಟಕ ಬಿಜೆಪಿಯ ನೂತನ ಉಸ್ತುವಾರಿ ಹರೀಶ್‌ ತ್ರಿವೇದಿ ಹಾಗೂ ಛತ್ತೀಸ್‌ಗಢದ ನೂತನ ಉಸ್ತುವಾರಿ ಸ್ಮೃತಿ ಇರಾನಿಗೂ ಕೂಡ ಟಿಕೆಟ್‌ ದೊರೆತಿಲ್ಲ.

ಉತ್ತರ ಪ್ರದೇಶದಿಂದ ಖಾಲಿಯಾಗುತ್ತಿರುವ ಒಟ್ಟು 10 ರಾಜ್ಯಸಭಾ ಸ್ಥಾನಗಳ ಪೈಕಿ ಬಿಜೆಪಿ 8 ಸ್ಥಾನಗಳಲ್ಲಿ ಸುಲಭವಾಗಿ ಗೆಲುವು ಸಾಧಿಸುವ ಬಲ ಹೊಂದಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ, ಪ್ರಾದೇಶಿಕ ಮತ್ತು ಜಾತಿ ಸಮೀಕರಣಗಳನ್ನು ಸರಿದೂಗಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪಟ್ಟಿಯಲ್ಲಿ ಇಬ್ಬರು ಮಹಿಳೆಯರು, ಮೂವರು ಒಬಿಸಿ, ಇಬ್ಬರು ಪರಿಶಿಷ್ಟ ಜಾತಿ, ಇಬ್ಬರು ಬ್ರಾಹ್ಮಣ ಹಾಗೂ ಒಬ್ಬರು ಠಾಕೂರ್ ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ನೀಡಲಾಗಿದೆ.

ಯಾರ್‍ಯಾರಿಗೆ ಸ್ಥಾನ?:

ಶೃತಿ ಗಂಗ್ವಾರ್‌, ರಾಧಾಕಾಂತ್ ಓಝಾ, ಪ್ರಕಾಶ್ ಪಾಲ್, ವಿದ್ಯಾಸಾಗರ್ ಸೋಂಕರ್, ಗೋಪಿ ಕೃಷ್ಣ ಪಾಂಡೆ, ಪ್ರಿಯಾಂಕಾ ಸಿಂಗ್ ರಾವತ್ ಮತ್ತು ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಉತ್ತರಪ್ರದೇಶದ 8 ರಾಜ್ಯಸಭೆ ಸೀಟಿಗೆ ಹೊಸ ಮುಖ

- ಅ.16ರಂದು ಉತ್ತರಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿ. 8 ಸ್ಥಾನಗಳು ಸುಲಭವಾಗಿ ಬಿಜೆಪಿಗೆ

- ಕೇಂದ್ರ ಸಚಿವರಾದ ಹರದೀಪ್‌ ಸಿಂಗ್‌ ಪುರಿ, ಬಿ.ಎಲ್‌. ವರ್ಮಾ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳೂ ಇದರಲ್ಲಿದ್ದವು

- ಆದರೆ ಇಬ್ಬರು ಸಚಿವರೂ ಸೇರಿ ಎಲ್ಲ 8 ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಣೆ ಮಾಡಿದ ಬಿಜೆಪಿ ರಾಷ್ಟ್ರೀಯ ವರಿಷ್ಠರು

- ಕರ್ನಾಟಕದ ನೂತನ ಬಿಜೆಪಿ ಉಸ್ತುವಾರಿ ಹರೀಶ್‌ ದ್ವಿವೇದಿ, ಮಾಜಿ ಸಚಿವೆ ಸ್ಮೃತಿ ಇರಾನಿ ರೇಸಲ್ಲಿದ್ದರೂ ಪರಿಗಣನೆ ಇಲ್ಲ

- 8 ಹೊಸ ಮುಖಗಳಿಗೆ ಮನ್ನಣೆ. ಇಬ್ಬರು ಕೇಂದ್ರ ಸಚಿವರಿಗೆ ಕೊಕ್‌ ನೀಡಿರುವುದರಿಂದ ಗರಿಗೆದರಿದ ಸಂಪುಟ ವಿಸ್ತರಣೆ ನಿರೀಕ್ಷೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಫಾರಂ 7 ಅಡಿ ಒಂದೂ ಮತ ಅಳಿಸಿಲ್ಲ: ಅನ್ಬು
ಪರಪ್ಪನ ಜೈಲ್‌ ಮಾಜಿ ಬಾಸ್‌ ನಕಲಿ ಬೇಲ್‌ ಕೇಸ್‌ನಲ್ಲಿ ಸೆರೆ!