ಭಾರತದ ಅತ್ಯಂತ ಕ್ರಿಯಾಶೀಲ ಕನ್ಸ್ಯೂಮರ್ ತಂತ್ರಜ್ಞಾನ ಬ್ರ್ಯಾಂಡ್‌ಗಳ ಪೈಕಿ ಒಂದಾದ ಪೋಕೊ ಎರಡು ವಿನೂತನವಾದ ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
ನಿಂಗರಾಜ.ಕೆ.ಯತ್ನಾಳ
ನವದೆಹಲಿ : ಭಾರತದ ಅತ್ಯಂತ ಕ್ರಿಯಾಶೀಲ ಕನ್ಸ್ಯೂಮರ್ ತಂತ್ರಜ್ಞಾನ ಬ್ರ್ಯಾಂಡ್‌ಗಳ ಪೈಕಿ ಒಂದಾದ ಪೋಕೊ ಎರಡು ವಿನೂತನವಾದ ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
ಪೋಕೊ ಎಮ್7 ಪ್ರೊ 5ಜಿ ಮತ್ತು ಪೋಕೊ ಸಿ75 5ಜಿ ಬಿಡುಗಡೆ ಮಾಡಿದ ಪೋಕೊ ಭಾರತದ ಮುಖ್ಯಸ್ಥ ಹಿಮಾಂಶು ಟಂಡನ್, ಪೋಕೊದಲ್ಲಿ ನಾವು ಸದಾ ಪ್ರತಿಯೊಬ್ಬರಿಗೂ ಬಲ ನೀಡುವಂತಹ ತಂತ್ರಜ್ಞಾನ ರೂಪಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ ಎಂದು ಹೇಳಿದ್ದಾರೆ.
ಎಮ್7 ಪ್ರೊ 5ಜಿ ಅಮೋಲ್ಡ್ ಡಿಸ್ಪ್ಲೇ, ಉತ್ತಮ ದರ್ಜೆಯ ಕ್ಯಾಮರಾ ಹೊಂದಿದ್ದು, ಸಿ75 5ಜಿ ಏಕೈಕ ಸೋನಿ ಸೆನ್ಸಾರ್ ಇರುವ ಕೈಗೆಟುಕುವ 5ಜಿ ಸ್ಮಾರ್ಟ್‌ಫೋನ್ ಆಗಿದೆ. ಈ ಬಿಡುಗಡೆಗಳೊಂದಿಗೆ ಪೋಕೊ ಅಭಿಮಾನಿಗಳಿಗೆ ಹೆಚ್ಚು ಆವಿಷ್ಕಾರ ಮತ್ತು ಹೆಚ್ಚು ಮೌಲ್ಯ ಒದಗಿಸಬೇಕೆನ್ನುವ ತನ್ನ ಧ್ಯೇಯೋದ್ದೇಶವನ್ನು ಪ್ರಾಮಾಣಿಕವಾಗಿ ಪೂರೈಸಿದೆ ಎಂದರು.
ಪೋಕೊ ಎಮ್7 ಪ್ರೊ 5ಜಿ ವಿಶೇಷತೆ:
6.67 ಗೊಲೆಡ್ ಎಫ್‌ಎಚ್‌ಡಿ+ ಸ್ಕ್ರೀನ್ ಮತ್ತು ಅಮೋಲ್ಡ್ ಡಿಸ್ಪ್ಲೇ ಇದ್ದು, 300% ವಾಲ್ಯೂಮ್ ಬೂಸ್ಟ್ ಒಳಗೊಂಡಿರುವ ಡಾಲ್ಬಿ ಸ್ಪೀಕರ್ ಅಳವಡಿಸಲಾಗಿದೆ. 50ಎಂಪಿ ಸೋನಿ ಲೆವಿಟಿ -600 ಕ್ಯಾಮೆರಾ ಹಾಗೂ ತೆಳುವಾದ 7.99 ಎಂಎಂ ಪ್ರೀಮಿಯಂ ಡ್ಯುಯಲ್-ಟೋನ್ ಫಿನಿಶ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಹಾಗೂ 45 ವ್ಯಾಟ್ ವೇಗದ 5110 ಎಂಎಎಚ್ ಬ್ಯಾಟರಿ ಇದೆ. ಈ ಮೊಬೈಲ್‌ಗಳು ಲೂನಾರ್ ಡಸ್ಟ್, ಲ್ಯಾವೆಂಡರ್ ಫ್ರಾಸ್ಟ್ ಮತ್ತು ಆಲಿವ್ ಟ್ವೈಲೈಟ್ ವರ್ಣಗಳಲ್ಲಿ ಲಭ್ಯವಿದೆ.
ಪೋಕೊ ಸಿ75 5ಜಿ ವಿಶೇಷತೆ
ಅತಿ ಕಡಿಮೆ ಬೆಲೆಯ ಸಿ75 5ಜಿ ನಲ್ಲಿ ಡ್ಯುಯಲ್ 5ಜಿ ಸಿಮ್ ಅಳವಡಿಸಬಹುದಾಗಿದ್ದು, 50ಎಂಪಿ ಸೋನಿ ಕ್ಯಾಮೆರಾ, 6.88 ಇಂಚಿನ ಎಫ್‌ಎಚ್‌ಡಿ+ ಸ್ಕ್ರೀನ್ ಮತ್ತು 18 ವ್ಯಾಟ್ ವೇಗದ 5160 ಎಂಎಎಚ್ ಬ್ಯಾಟರಿ ಹೊಂದಿದೆ. ಇದು ಕೂಡ ಎನ್‌ಚ್ಯಾಂಟೆಡ್ ಗ್ರೀನ್, ಆ್ಯಕ್ವಾ ಬ್ಲೂ ಮತ್ತು ಸಿಲ್ವರ್ ಸ್ಟಾರ್‌ಡಸ್ಟ್ ವರ್ಣಗಳಲ್ಲಿ ದೊರೆಯಲಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಈಗ ಫ್ಲಿಫ್‌ಕಾರ್ಟ್‌ನಲ್ಲಿ ಲಭ್ಯವಿದೆ.
ಪೋಕೊ ಎಮ್7 ಪ್ರೊ 5ಜಿಯು 6 ಜಿಬಿ ರ್‍ಯಾಮ್ 128 ಜಿಬಿ ಸ್ಟೋರೆಜ್ ಇರುವ ಸ್ಮಾರ್ಟ್‌ಫೋನ್ ₹13,999 ಬೆಲೆಗೆ ಸಿಕ್ಕರೆ, 8 ಜಿಬಿ ರ್‍ಯಾಮ್ 256 ಜಿಬಿ ಸ್ಟೋರೆಜ್ ಇರುವ ಸ್ಮಾರ್ಟ್‌ಫೋನ್ ₹15,999 ಬೆಲೆಗೆ ಲಭ್ಯವಿದೆ. ಪೋಕೊ ಸಿ75 5ಜಿ ಸ್ಮಾರ್ಟ್‌ಫೋನ್ 4 ಜಿಬಿ ರ್‍ಯಾಮ್, 64 ಸ್ಟೋರೆಜ್ ನಲ್ಲಿ ಲಭ್ಯವಿದ್ದು ಕೇವಲ ₹7,999 ಗೆ ಪಡೆದುಕೊಳ್ಳಬಹುದು.