ರಾಜ್ಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಹಬ್ಬ, ಬರ್ತ್‌ಡೆ ವಿಶೇಷ ಊಟಕ್ಕೆ ಅವಕಾಶ

Published : Aug 03, 2024, 09:16 AM IST
Mid Day Meal

ಸಾರಾಂಶ

ರಾಜ್ಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸಾರ್ವಜನಿಕರು ಅಥವಾ ಸಮುದಾಯದ ಸದಸ್ಯರು ಹಬ್ಬ, ಜಾತ್ರೆ, ಮದುವೆ, ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ‘ವಿಶೇಷ ಭೋಜನ’ ವ್ಯವಸ್ಥೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ

ಬೆಂಗಳೂರು  :  ರಾಜ್ಯ ಸರ್ಕಾರಿ, ಅನುದಾನಿತಶಾಲೆಗಳಲ್ಲಿ ಸಾರ್ವಜನಿಕರು ಅಥವಾ ಸಮುದಾಯದ ಸದಸ್ಯರು ಹಬ್ಬ, ಜಾತ್ರೆ, ಮದುವೆ, ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ‘ವಿಶೇಷ ಭೋಜನ’ ವ್ಯವಸ್ಥೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ.

ಕೇಂದ್ರ ಸರ್ಕಾರವು ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯಡಿ ಶಾಲೆಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಕಾರ್ಯಕ್ರಮವಾಗಿ ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೆಗಳು, ವ್ಯಾಪಾರ, ವಾಣಿಜ್ಯ ಸೇರಿದಂತೆ ಸಮುದಾಯದ ಯಾವುದೇ ಸದಸ್ಯರು ತಮ್ಮ ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕೋತ್ಸವ, ವಿದ್ಯಾರ್ಥಿಗಳು, ಶಿಕ್ಷಕರ ಜನ್ಮದಿನ, ರಾಷ್ಟ್ರೀಯ, ರಾಜ್ಯ ಹಬ್ಬಗಳು ಸೇರಿದಂತೆ ಇನ್ನಿತರೆ ವಿಶೇಷ ಸಂದರ್ಭಗಳಲ್ಲಿ ದಿನದ ಭೋಜನ ಕಾರ್ಯಕ್ರಮದಡಿ ಪೌಷ್ಟಿಕ ಮತ್ತು ಆರೋಗ್ಯಕರ ಊಟ/ಆಹಾರ ಪದಾರ್ಥಗಳನ್ನು ಒದಗಿಸಲು ಅನುಮತಿ ನೀಡಿದೆ. ಈ ಸಂಬಂಧ ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಎಲ್ಲ ಶಾಲೆಗಳಲ್ಲೂ ವಿಶೇಷ ಭೋಜನ ಆಯೋಜನೆ ಸಮಯದಲ್ಲಿ ಅವುಗಳನ್ನು ಪಾಲಿಸಬೇಕೆಂದು ಇಲಾಖೆ ಸೂಚಿಸಿದೆ.

ಭೋಜನದಲ್ಲಿ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡಬೇಕು. ಸ್ಥಳೀಯವಾಗಿ ಲಭ್ಯವಿರುವ ತರಕಾರಿಗಳು, ಕಾಳುಗಳು, ಸಿರಿಧಾನ್ಯಗಳು ವಿಶೇಷ ಭೋಜನದ ಮೆನುವಿನಲ್ಲಿ ಅಳವಡಿಸಬೇಕು. ಆಹಾರ ಧಾನ್ಯಗಳ ಸಂಗ್ರಹಣೆ, ಅಡುಗೆ ಮಾಡುವಾಗ/ಬಡಿಸುವಾಗ ಸ್ವಚ್ಛತೆ ಮತ್ತು ನೈರ್ಮಲ್ಯದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಂಕ್‌ಫುಡ್‌ಗೆ ಅವಕಾಶ ನೀಡಬಾರದು. ಋತುಮಾನದ ಹಣ್ಣುಗಳನ್ನು ನೀಡಬಹುದು.

ವಿದ್ಯಾರ್ಥಿಗಳಿಗೆ ಊಟವನ್ನು ಬಡಿಸುವ ಮೊದಲು ಶಿಕ್ಷಕರು/ಅಡುಗೆಯವರು ಊಟದ ರುಚಿ ನೋಡಬೇಕು ಎಂದು ಸೂಚಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ