ಕೆಮ್ಮು, ಸೀನಿನಿಂದ ಹರಡುತ್ತೆ ‘ಚೀನಿ ಎಚ್ಎಂಪಿವಿ ವೈರಸ್‌’ - ಆಗಾಗ್ಗೆ ಕೈ ತೊಳೆದುಕೊಳ್ಳಿ

Published : Jan 07, 2025, 01:19 PM IST
HMPV

ಸಾರಾಂಶ

ರಾಜ್ಯದಲ್ಲಿ ಎಚ್ಎಂಪಿವಿ ಸೋಂಕು ದೃಢಪಟ್ಟ ಬೆನ್ನಲ್ಲೇ ಎಚ್‌ಎಂಪಿವಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಲಹೆಗಳನ್ನು ನೀಡಿದೆ.

 , ಬೆಂಗಳೂರು : ರಾಜ್ಯದಲ್ಲಿ ಎಚ್ಎಂಪಿವಿ ಸೋಂಕು ದೃಢಪಟ್ಟ ಬೆನ್ನಲ್ಲೇ ಎಚ್‌ಎಂಪಿವಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಲಹೆಗಳನ್ನು ನೀಡಿದೆ.

ರಾಜ್ಯ ಸರ್ಕಾರವು 2023ರ ಡಿಸೆಂಬರ್‌ನಲ್ಲಿ ವರದಿಯಾಗಿದ್ದ ಇನ್‌ಫ್ಲ್ಯುಯೆಂಜಾ ಮಾದರಿ ಅನಾರೋಗ್ಯ (ಐಎಲ್‌ಐ) ಪ್ರಕರಣ ಹಾಗೂ 2024 ರ ಡಿಸೆಂಬರ್‌ ಪ್ರಕರಣಗಳನ್ನು ಪರಿಶೀಲಿಸಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ. ಆದರೂ, ಸುರಕ್ಷತೆಗಾಗಿ ಸಾಮಾನ್ಯ ಮುನ್ನೆಚ್ಚರಿಕಾ ಕ್ರಮ ಪಾಲಿಸುವಂತೆ ತಿಳಿಸಿದೆ.

ಸೋಂಕಿನ ಲಕ್ಷಣಗಳೇನು?:

ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಉಸಿರಾಟ ಸಮಸ್ಯೆಯು ಸೋಂಕಿನ ಪ್ರಮುಖ ಲಕ್ಷಣಗಳು. ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶ ಸೋಂಕು ಅಥವಾ ನ್ಯುಮೋನಿಯಾ ಸಹ ಉಂಟಾಗಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪುಟ್ಟ ಮಕ್ಕಳು ಹಾಗೂ ವೃದ್ಧರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.

ಸೋಂಕು ಹೇಗೆ ಹರಡುತ್ತದೆ?:

ವೈರಾಣು ಸೋಂಕಿತರು ಕೆಮ್ಮು, ಸೀನುವಾಗ ಬೀಳುವ ದ್ರಾವಣದ ಕಣಗಳಿಂದ (ಡ್ರಾಪ್ಲೆಟ್ಸ್‌) ಎಚ್‌ಎಂಪಿವಿ ಹರಡುತ್ತದೆ. ಜತೆಗೆ ಸೋಂಕಿತರ ನಿಕಟ ಸಂಪರ್ಕ, ವೈರಾಣು ಇರುವ ಜಾಗ ಮುಟ್ಟಿ ಪದೇ ಪದೇ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ.

ಏನು ಮಾಡಬೇಕು?

- ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಲ್ಲಿ ಮುಚ್ಚಿಕೊಳ್ಳಬೇಕು

-ಆಗಾಗ್ಗೆ ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು

-ಅನಗತ್ಯವಾಗಿ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು

- ಜ್ವರ, ನೆಗಡಿ ಇದ್ದರೆ ಜನದಟ್ಟಣೆ ಜಾಗಗಳಿಗೆ ಹೋಗಬಾರದು

-ಸೋಂಕಿತರು, ಅನಾರೋಗ್ಯ ಪೀಡಿತದೊಂದಿಗೆ ಸಂಪರ್ಕ ಮಾಡಬಾರದು

-ಪೌಷ್ಟಿಕ ಆಹಾರ ಸೇವಿಸಿ, ಹೆಚ್ಚು ನೀರು ಕುಡಿಯಬೇಕು

ಏನು ಮಾಡಬಾರದು?

- ಕರವಸ್ತ್ರ ಸ್ವಚ್ಛಗೊಳಿಸದೆ ಬಳಸುವುದು, ಟಿಶ್ಯೂ ಪೇಪರ್‌ ಪುನರ್‌ ಬಳಕೆ ಬೇಡ.

- ಸೋಂಕಿತರೊಂದಿಗೆ ಸಂಪರ್ಕ, ಅವರ ಬಳಸಿದ ವಸ್ತುಗಳ ವಿನಿಮಯ ಬೇಡ

- ಪದೇ ಪದೇ ಕಣ್ಣು, ಮೂಗು ಹಾಗೂ ಬಾಯಿ ಮುಟ್ಟಿಕೊಳ್ಳಬೇಡಿ

- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ

- ವೈದ್ಯರನ್ನು ಸಂಪರ್ಕಿಸದೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ
ಮಹಿಳೆಯರು ಸ್ವಾವಲಂಬಿಗಳಾದರೆ ದೇಶದ ಪ್ರಗತಿ ಸಾಧ್ಯ