ರಸ್ತೆ ಗುಂಡಿ ಬಗ್ಗೆ ಕಿರಣ್‌, ಡಿಕೆಶಿ ಮಧ್ಯೆ ಜಟಾಪಟಿ

Published : Oct 15, 2025, 04:35 AM IST
Kiran Majumdar

ಸಾರಾಂಶ

ರಾಜಧಾನಿ ರಸ್ತೆ ಗುಂಡಿ, ಕಸ ವಿಲೇವಾರಿ ಸಮಸ್ಯೆ ಬಗ್ಗೆ ಪುನಃ ಉದ್ಯಮಿಗಳು ಹಾಗೂ ಸರ್ಕಾರದ ಜಟಾಪಟಿ ನಡೆದಿದೆ. ಉದ್ಯಮಿ ಕಿರಣ್‌ ಮಜುಂದಾರ್ ಶಾ ರಸ್ತೆಗುಂಡಿ ಬಗ್ಗೆ ಕಿಡಿಕಾರಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

  ಬೆಂಗಳೂರು :  ರಾಜಧಾನಿ ರಸ್ತೆ ಗುಂಡಿ, ಕಸ ವಿಲೇವಾರಿ ಸಮಸ್ಯೆ ಬಗ್ಗೆ ಪುನಃ ಉದ್ಯಮಿಗಳು ಹಾಗೂ ಸರ್ಕಾರದ ಜಟಾಪಟಿ ನಡೆದಿದೆ. ಉದ್ಯಮಿ ಕಿರಣ್‌ ಮಜುಂದಾರ್ ಶಾ ರಸ್ತೆಗುಂಡಿ ಬಗ್ಗೆ ಕಿಡಿಕಾರಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

‘ಬೆಂಗಳೂರಲ್ಲಿ ರಸ್ತೆ ಸರಿಯಿಲ್ಲ. ಇಷ್ಟೊಂದು ಕಸ ಏಕಿದೆ? ಚೀನಾದಲ್ಲಿ ಹೀಗಿಲ್ಲ ಎಂದು ಬೆಂಗಳೂರಿಗೆ ಬಂದಿದ್ದ ಉದ್ಯಮಿಯೊಬ್ಬರು ನನಗೆ ಕೇಳಿದರು’ ಎಂದು ಸರ್ಕಾರವನ್ನು ಪ್ರಶ್ನಿಸಿ ಕಿರಣ್‌ ಟ್ವೀಟ್‌ ಮಾಡಿದ್ದರು. ಇದಕ್ಕೆ ಡಿಕೆಶಿ ಪ್ರತಿಕ್ರಿಯಿಸಿ, ‘ಬೆಂಗಳೂರು ಯಶ ಕಂಡಿರುವುದು ಸಾಮೂಹಿಕ ಯತ್ನದಿಂದಲೇ ಹೊರತು ನಿರಂತರ ಟೀಕೆಯಿಂದಲ್ಲ. ಬೆಂಗಳೂರಲ್ಲಿ ಸವಾಲಿವೆ. ಎದುರಿಸಿ ಕೆಲಸ ಮಾಡುತ್ತ ₹1100 ಕೋಟಿ ಖರ್ಚಲ್ಲಿ 10 ಸಾವಿರ ಗುಂಡಿ ಗುರುತಿಸಿ 5 ಸಾವಿರ ಗುಂಡಿ ಮುಚ್ಚಿಸಿದ್ದೇವೆ. ಬೆಂಗಳೂರನ್ನು ಒಡೆವ ಬದಲು ನಾವೆಲ್ಲ ಒಟ್ಟಾಗಿ ಕಟ್ಟೋಣ’ ಎಂದಿದ್ದಾರೆ.

ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ನಮ್ಮನ್ನು ಟೀಕಿಸುವವರು ಬಿಜೆಪಿ ರಾಜ್ಯಗಳ ಬಗ್ಗೆ ಟೀಕಿಸಿದರೆ ಜೈಲು ಸೇರಬೇಕಾದೀತು’ ಎಂದಿದ್ದಾರೆ

PREV
Read more Articles on

Recommended Stories

ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ
ನಿರೀಕ್ಷೆಯಂತೆ ನಡೆಯದ ಸಮೀಕ್ಷೆ: ಬೆಂಗಳೂರು ಮುಖ್ಯ ಆಯುಕ್ತರಿಗೆ ಸಿಎಸ್‌ ಪತ್ರ