ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ಉದ್ಘಾಟನೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೀಟ್‌ ಬೆಲ್ಟ್‌ ಧರಿಸದೆ ಕಾರು ಚಾಲನೆ: ಜನಾಕ್ರೋಶ

Published : Jul 21, 2024, 07:45 AM IST
dk shivakumar

ಸಾರಾಂಶ

ಇತ್ತೀಚೆಗೆ ನಗರದ ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ಉದ್ಘಾಟನೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೀಟ್‌ ಬೆಲ್ಟ್‌ ಧರಿಸದೆ ಕಾರು ಚಲಾಯಿಸಿದ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆದಿದೆ.

ಬೆಂಗಳೂರು : ಇತ್ತೀಚೆಗೆ ನಗರದ ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ಉದ್ಘಾಟನೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೀಟ್‌ ಬೆಲ್ಟ್‌ ಧರಿಸದೆ ಕಾರು ಚಲಾಯಿಸಿದ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆದಿದೆ.

ಕಾರು ಚಲಾಯಿಸುವ ವಿಡಿಯೋ ಹಂಚಿಕೊಂಡು ಡಿಸಿಎಂ ಶಿವಕುಮಾರ್‌ ಸೀಟ್‌ ಬೆಲ್ಟ್‌ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಡಿಕೆಶಿ ವಿರುದ್ಧ ನಗರ ಪೊಲೀಸ್‌ ಆಯುಕ್ತರಿಗೆ ದೂರು:

ಸಾಮಾಜಿಕ ಕಾರ್ಯಕರ್ತ ವಿಜಯ್‌ ಡೆನ್ನೀಸ್‌ ಎಂಬುವವರು ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಜು.17ರಂದು ಡಿ.ಕೆ.ಶಿವಕುಮಾರ್‌ ಸೀಟ್‌ ಬೆಲ್ಟ್‌ ಧರಿಸದೆ ಕಾರು ಚಲಾಯಿಸಿದ್ದಾರೆ. ಸಂಚಾರ ನಿಯಮದ ಅನ್ವಯ ಸೀಟ್‌ ಬೆಲ್ಟ್‌ ಧರಿಸದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನುಗಳು ಎಲ್ಲರಿಗೂ ಸಮಾನಗಿರಬೇಕು. ಹೀಗಾಗಿ ಸಂಚಾರ ನಿಯಮ ಉಲ್ಲಂಘಿಸಿರುವ ಡಿಸಿಎಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...