;Resize=(412,232))
ಬೆಂಗಳೂರು : ನಗರದ ವಿವಿಧೆಡೆ ಗುರುವಾರ ಕೆಲ ಕಾಲ ಮಳೆಯಾಗಿದ್ದು, ಅ.26ರವರೆಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ನಗರದ ಬಹುತೇಕ ಭಾಗಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ವೇಳೆ ಮಳೆ ಸುರಿದಿದೆ. ಪ್ರಮುಖವಾಗಿ ಥಣಿಸಂದ್ರದಲ್ಲಿ 23 ಮಿ.ಮೀ., ಬ್ಯಾಟರಾಯನಪರ 23 ಮಿ.ಮೀ., ಯಲಹಂಕ 20 ಮಿ.ಮೀ, ಶಾಕಾಂಬರಿ ನಗರ 20 ಮಿ.ಮೀ., ಜರಗನಹಳ್ಳಿ 20 ಮಿ.ಮೀ., ಗೋವಿಂದರಾಜನಗರ 19 ಮಿ.ಮೀ. ಹಾಗೂ ಕಾಮಾಕ್ಷಿಪಾಳ್ಯದಲ್ಲಿ 18 ಮಿ.ಮೀ. ಮಳೆಯಾಗಿದೆ.
ಮಳೆಯಿಂದಾಗಿ ಎಂದಿನಂತೆ ಏರ್ಪೋಟ್ ರಸ್ತೆ, ದೇವರಬೀಸನಹಳ್ಳಿ ರಿಂಗ್ ರಸ್ತೆ, ಕ್ವೀನ್ಸ್ ರಸ್ತೆ, ಮೆಜೆಸ್ಟಿಕ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ನಗರದ ಕ್ವೀನ್ಸ್ ರಸ್ತೆಯಲ್ಲಿ ಸಂಜೆ ಮಳೆ ಸುರಿದ ಪರಿಣಾಮ ಟ್ರಾಫಿಕ್ ಜಾಂ ಉಂಟಾಗಿ ವಾಹನ ಸವಾರರು ಪರದಾಟ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಪ್ರಯಾಣಿಕರಿಗೆ ವಾಹನ ಚಲಾಯಿಸಲು ಅನುವು ಮಾಡಿಕೊಟ್ಟರು.