17ಕ್ಕೆ ‘ನಾಯಿಗಳಿಗಾಗಿ ಉತ್ಸವ’ ಮನುಷ್ಯರು - ನಾಯಿಗಳ ಬಾಂಧವ್ಯ ವೃದ್ಧಿಗೆ ಕಾರ್ಯಕ್ರಮ

ಸಾರಾಂಶ

ಮನುಷ್ಯರ ಜತೆಗೆ ನಾಯಿಗಳ ಒಡನಾಟವನ್ನು ಆತ್ಮೀಯಗೊಳಿಸಲು ಬಿಬಿಎಂಪಿ ಅ.17ರಂದು ‘ನಾಯಿಗಳಿಗಾಗಿ ಉತ್ಸವ’ ಆಯೋಜಿಸಿದೆ.

ಬೆಂಗಳೂರು : ಮನುಷ್ಯರ ಜತೆಗೆ ನಾಯಿಗಳ ಒಡನಾಟವನ್ನು ಆತ್ಮೀಯಗೊಳಿಸಲು ಬಿಬಿಎಂಪಿ ಅ.17ರಂದು ‘ನಾಯಿಗಳಿಗಾಗಿ ಉತ್ಸವ’ ಆಯೋಜಿಸಿದೆ.

ಆನಿಮಲ್‌ ವೆಲ್‌ಫೇರ್‌ ಟ್ರಸ್ಟ್‌ ಮತ್ತು ಇತರ ಆಸಕ್ತ ಸಂಸ್ಥೆಗಳ ಸಹಯೋಗದೊಂದಿಗೆ ಬಿಬಿಎಂಪಿ ಪಶುಪಾಲನಾ ವಿಭಾಗ ನಾಯಿಗಳಿಗಾಗಿ ಉತ್ಸವ ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಮನುಷ್ಯರೊಂದಿಗೆ ನಾಯಿಗಳು ಭಾವನಾತ್ಮಕವಾಗಿ ಹೊಂದಿಕೊಳ್ಳುವಂತೆ ಮಾಡಿ ನಾಯಿ ಕಡಿತದಂತಹ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. 

ಪ್ರತಿ ಬಡಾವಣೆಯಲ್ಲೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಹಾಗೂ ಪ್ರಾಣಿ ಪಾಲಕರನ್ನು ಒಗ್ಗೂಡಿಸಿ ನಾಯಿಗಳಿಗಾಗಿ ಉತ್ಸವ ಆಚರಿಸಲಾಗುತ್ತಿದೆ. ಅದರ ಜತೆಗೆ ಈ ಉತ್ಸವದ ದಿನದಂದು ಯಾವುದಾದರೂ 4 ವಾರ್ಡ್‌ಗಳ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸಿ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಉತ್ಸವದಲ್ಲಿ ಭಾಗಿ ಆಗಲು ನೋಂದಾವಣೆ ಮಾಡಿಸಿ

ಉತ್ಸವದಲ್ಲಿ ಪಾಲ್ಗೊಳ್ಳಲು ಹಾಗೂ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಉದ್ದೇಶಿಸುವವರು ಅ. 15ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 1533ಗೆ ಕರೆ ಮಾಡುವಂತೆ ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.ಯಾವುದೇ ಸಂದೇಹವಿದ್ದಲ್ಲಿ, ಮಾಹಿತಿಗಾಗಿ 1533 ಅನ್ನು ಸಂಪರ್ಕಿಸಬಹುದು.

Share this article