;Resize=(412,232))
ಬೆಂಗಳೂರು : ತುಮಕೂರಿನ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿ ಜ.30ರಂದು ಗಾಂಧಿ ಪುರಸ್ಕಾರ, ಮಾಧ್ಯಮ ರತ್ನ ಪುರಸ್ಕಾರ, ಪತ್ರಿಕಾ ವಿತರಕ ರತ್ನ ಪುರಸ್ಕಾರ ಮತ್ತು ಪ್ರಜಾನಿಧಿ ಪ್ರಶಸ್ತಿ ಸಮಾರಂಭ ನಡೆಯಲಿದೆ.
ಯೋಗಕ್ಷೇಮ ಮೀಡಿಯಾ ಪ್ರೈ.ಲಿ., ವಿಶ್ವಂ ಟಿ.ವಿ. ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಜತೆಗೆ ಸಹಾಯಾರ್ಥ ಪ್ರದರ್ಶನವಾಗಿ ಪತ್ರಿಕಾ ವಿತರಕರ ಅಂತರಂಗ ದರ್ಶನದ ಏಕವ್ಯಕ್ತಿ ರಂಗ ಪ್ರಯೋಗ ‘ನಸುಕಿನ ನೊಗ’ ನಾಟಕ ಪ್ರಯೋಗ ನಡೆಯಲಿದೆ. ನಾಟಕವನ್ನು ಡಾ.ಎಸ್.ಎಲ್.ಎನ್.ಸ್ವಾಮಿ ಅವರ ರಚನೆ ನಿರ್ದೇಶನದಲ್ಲಿ ನೀನಾಸಂ ಶ್ರೀನಿವಾಸಮೂರ್ತಿ ಅವರ ಅಭಿನಯದಲ್ಲಿ ಪ್ರದರ್ಶನಗೊಳ್ಳಲಿದೆ.
ಎಸ್.ಪಿ.ಚಿದಾನಂದ, ಕಲಾಶ್ರೀ ಡಾ.ಲಕ್ಷ್ಮಣದಾಸ ಸೇರಿ 10 ಸಾಧಕರಿಗೆ ಪ್ರಜಾನಿಧಿ ಪ್ರಶಸ್ತಿ, ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ‘ವಿಶ್ವವಾಣಿ’ಯ ವಿಶ್ವೇಶ್ವರ ಭಟ್, ಪತ್ರಕರ್ತರ ಸಂಘದ ಶಿವಾನಂದ ತಗಡೂರು, ‘ಕನ್ನಡಪ್ರಭ’ ವಿಶೇಷ ಯೋಜನೆ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ ಸೇರಿ 14 ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನವಾಗಲಿದೆ. ಮಾಧ್ಯಮ ಸೇವಾರತ್ನ ಪ್ರಶಸ್ತಿ, ಪತ್ರಿಕಾ ವಿತರಕ ಸೇವಾ ಪ್ರಶಸ್ತಿಯೂ ಪ್ರದಾನ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.