ಸರ್ಕಾರಿ ಆಸ್ಪತ್ರೆ ವಾಟ್ಸಾಪಲ್ಲೇ ದೂರು - ಇಲ್ಲಿರೋ ಸಂಖ್ಯೆಗೆ ಅಹವಾಲು ಸಲ್ಲಿಸಿ

Published : Jun 03, 2025, 05:45 AM IST
stethoscope

ಸಾರಾಂಶ

ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳು ಅಥವಾ ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆ ನೀಡಲು ವಾಟ್ಸಾಪ್‌ ಸಹಾಯವಾಣಿ ಸೇವೆಯನ್ನು ಆರೋಗ್ಯ ಇಲಾಖೆ ಪ್ರಾರಂಭಿಸಿದೆ.

 ಬೆಂಗಳೂರು : ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳು ಅಥವಾ ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆ ನೀಡಲು ವಾಟ್ಸಾಪ್‌ ಸಹಾಯವಾಣಿ ಸೇವೆಯನ್ನು ಆರೋಗ್ಯ ಇಲಾಖೆ ಪ್ರಾರಂಭಿಸಿದೆ.

ರಾಜ್ಯಾದ್ಯಂತ ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಸೇವೆ ಕುರಿತು ದೂರು ಇದ್ದರೆ ದೂರವಾಣಿ ಸಂಖ್ಯೆ 94498 43001 ಗೆ ವಾಟ್ಸಾಪ್‌ ಸಂದೇಶ ಕಳುಹಿಸಬಹುದು. ಅಗತ್ಯವಿದ್ದರೆ ಫೋಟೊ, ವಿಡಿಯೋ ಕೂಡ ಕಳುಹಿಸಬಹುದು.

ಈ ದೂರುಗಳನ್ನು ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರೇ ನೇರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ದೂರು ಸಲ್ಲಿಸುವ ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಕೇವಲ ಸಂದೇಶಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ದೂರವಾಣಿ ಕರೆಗಳಿಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ