ಸರ್ಕಾರಿ ಕಾಲೇಜು ವೈದ್ಯ ಸೀಟು ಶುಲ್ಕ64,350 ನಿಗದಿ: ಪ್ರಾಧಿಕಾರ

Published : Jul 24, 2025, 10:57 AM IST
doctor consultation-1

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025-26ನೇ ಸಾಲಿನ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿನ ವೈದ್ಯಕೀಯ ಪದವಿ ಕೋರ್ಸು ಸೀಟುಗಳ ಶುಲ್ಕದ ವಿವರಗಳನ್ನು ಬುಧವಾರ ಪ್ರಕಟಿಸಿದೆ.

  ಬೆಂಗಳೂರು :  ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025-26ನೇ ಸಾಲಿನ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿನ ವೈದ್ಯಕೀಯ ಪದವಿ ಕೋರ್ಸು ಸೀಟುಗಳ ಶುಲ್ಕದ ವಿವರಗಳನ್ನು ಬುಧವಾರ ಪ್ರಕಟಿಸಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಅನುಸಾರ ಶುಲ್ಕ ವಿವರ ಪ್ರಕಟಿಸಲಾಗಿದೆ. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೋಂದಣಿ ಶುಲ್ಕವೂ ಇದರಲ್ಲಿ ಒಳಗೊಂಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕ ₹64,350, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟು ₹1,53,571, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಕೋಟಾ ಸೀಟು ₹12,00,117 ಮತ್ತು ಎನ್‌ಆರ್‌ಐ ಕೋಟಾ ಸೀಟುಗಳ ಶುಲ್ಕ ₹40,11,950 ಗಳಾಗಿವೆ ಎಂದು ಪ್ರಾಧಿಕಾರ ವಿವರಿಸಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ವೈದ್ಯಕೀಯ ಸೀಟುಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು. ಈ ವರ್ಷವೂ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದವು. ಆದರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವನೆ ತಿರಸ್ಕರಿಸಿ, ಯಾವುದೇ ಕಾರಣಕ್ಕೂ ಈ ವರ್ಷ ಶುಲ್ಕ ಹೆಚ್ಚಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅದರಂತೆ ಶುಲ್ಕ ಹೆಚ್ಚಿಸಲಾಗಿಲ್ಲ. ಆದರೆ, ಈ ಬಾರಿ ವಿಶ್ವವಿದ್ಯಾಲಯದ ನೋಂದಣಿ ದರವನ್ನೂ ಸೇರಿಸಿ ಶುಲ್ಕ ವಿವರ ಪ್ರಕಟಿಸಲಾಗಿದೆ.

 

PREV
Read more Articles on

Recommended Stories

ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ
ಎಸ್ಸೆಸ್ಸೆಲ್ಸಿ ಪಾಸ್‌ಗೆ 33% ಅಂಕ: ಮಿಶ್ರ ಪ್ರತಿಕ್ರಿಯೆ