ನನ್ನ 4 ವರ್ಷದ ಮೊಮ್ಮಗ ಎಲ್ಲಿದ್ದಾನೋ ಗೊತ್ತಿಲ್ಲ : ಟೆಕಿ ತಂದೆ ಪವನ್ ಕುಮಾರ್ ಮೋದಿ ಅಳಲು

ಸಾರಾಂಶ

ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ ಕುಟುಂಬದವರು ಬಂಧನವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಟೆಕಿ ತಂದೆ ಪವನ್ ಕುಮಾರ್ ಮೋದಿ, ‘ಅತುಲ್‌ ಅವರ 4 ವರ್ಷದ ಮಗ ಎಲ್ಲಿದ್ದಾನೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಮೊಮ್ಮಗ ಸತ್ತಿದ್ದಾನೋ? ಬದುಕಿದ್ದಾನೋ ಎಂದು ಗೊತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ ಕುಟುಂಬದವರು ಬಂಧನವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಟೆಕಿ ತಂದೆ ಪವನ್ ಕುಮಾರ್ ಮೋದಿ, ‘ಅತುಲ್‌ ಅವರ 4 ವರ್ಷದ ಮಗ ಎಲ್ಲಿದ್ದಾನೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಮೊಮ್ಮಗ ಸತ್ತಿದ್ದಾನೋ? ಬದುಕಿದ್ದಾನೋ ಎಂದು ಗೊತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮಾಧ್ಯಮಗಳ ಜತೆಗೆ ಈ ಬಗ್ಗೆ ಮಾತನಾಡಿದ ಅತುಲ್ ಅವರು, ‘ನಿಕಿತಾ ಮತ್ತು ಅವರ ಕುಟುಂಬವನ್ನು ಬಂಧಿಸಿದ್ದಕ್ಕಾಗಿ ಧನ್ಯವಾದಗಳು. ಅವಳು ನನ್ನ ಮೊಮ್ಮಗನನ್ನು ಎಲ್ಲಿ ಇಟ್ಟಿದ್ದಾಳೆ ಎನ್ನುವುದು ನನಗೆ ಗೊತ್ತಿಲ್ಲ. ಅವನನ್ನು ಕೊಂದಿದ್ದಾಳೆಯೇ ಅಥವಾ ಜೀವಂತವಾಗಿದ್ದಾನೆಯೇ? ಅವನ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನನ್ನ ಮೊಮ್ಮಗ ನಮ್ಮೊಂದಿಗಿರಬೇಕೆಂದು ಬಯಸುತ್ತೇನೆ.’ ಅತುಲ್ ತನ್ನ ಮಗನ ನಿರ್ವಹಣೆಗೆ ಮಾಸಿಕ ₹40 ಸಾವಿರ ಹಣವನ್ನು ಪತ್ನಿಗೆ ನೀಡುತ್ತಿದ್ದ ಎಂದು ತಿಳಿಸಿದ್ದಾರೆ.

ಇನ್ನು ಅತುಲ್ ಸಹೋದರ ಬಿಕಾಸ್‌ ಮಾತನಾಡಿ, ‘ಅಣ್ಣನ ಮಗನ ಬಗ್ಗೆಯೂ ಕಾಳಜಿಯಿದೆ. ಅವನ ರಕ್ಷಣೆ ವಿಚಾರ ಆತಂಕಕ್ಕೆ ಕಾರಣವಾಗಿದೆ. ಅವನ ಇತ್ತೀಚಿನ ಪೋಟೋಗಳನ್ನು ನಾವು ನೋಡಿಲ್ಲ. ಮಾಧ್ಯಮಗಳ ಮೂಲಕ ಅವನು ಎಲ್ಲಿದ್ದಾನೆ ಎಂಬುದು ತಿಳಿಯಬೇಕು. ಆದಷ್ಟು ಬೇಗ ಅವನು ನಮ್ಮ ಸುಪರ್ದಿಗೆ ಬರಬೇಕೆಂದು ಬಯಸುತ್ತೇವೆ’ ಎಂದಿದ್ದಾರೆ.

Share this article