ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ-ಬಿ) ದೇಶದ ನಂ.1 ಬಿಸಿನೆಸ್ ಸ್ಕೂಲ್ ಎಂಬ ದಾಖಲೆಗೆ ಪಾತ್ರವಾಗಿದೆ.
ನವದೆಹಲಿ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ-ಬಿ) ದೇಶದ ನಂ.1 ಬಿಸಿನೆಸ್ ಸ್ಕೂಲ್ ಎಂಬ ದಾಖಲೆಗೆ ಪಾತ್ರವಾಗಿದೆ. ಕ್ಯುಎಸ್ ಗ್ಲೋಬಲ್ ಎಂಬಿಎ ಆ್ಯಂಡ್ ಬಿಸಿನೆಸ್ ಮಾಸ್ಟರ್ ರ್‍ಯಾಂಕಿಂಗ್ -2025 ಪ್ರಕಟವಾಗಿದ್ದು, ಅದರಲ್ಲಿ ಐಐಎಂ-ಬಿ ಈ ದಾಖಲೆಗೆ ಪಾತ್ರವಾಗಿದೆ. ಆದರೆ ಜಗತ್ತಿನ ಟಾಪ್-50ರ ರೊಳಗೆ ಸ್ಥಾನಗಳಿಸುವಲ್ಲಿ ಸಂಸ್ಥೆ ವಿಫಲವಾಗಿದೆ.
ಉಳಿದಂತೆ ಭಾರತದ 3 ವಿವಿಗಳು ಈ ಬಾರಿ ರ್‍ಯಾಂಕಿಂಗ್ ಪಟ್ಟಿ ಪ್ರವೇಶ ಮಾಡುವಲ್ಲಿ ಸಫಲವಾಗಿವೆ. ಐಐಎಂ ಕಲ್ಲಿಕೋಟೆ 151-200, ಐಎಂಟಿ ಗಾಜಿಯಾಬಾದ್ ಮತ್ತು ಸೋಮಯ್ಯ ವಿದ್ಯಾವಿಹಾರ್ ವಿವಿ 200-251ರ ರ್‍ಯಾಕಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿವೆ. ಇನ್ನು ಭಾರತದ ವಿವಿಧ ವಿವಿಗಳ 14 ಪೂರ್ಣಕಾಲೀನ ಎಂಬಿಎ ಕೋರ್ಸ್‌ಗಳು ಈ ಬಾರಿ ಪಟ್ಟಿಯಲ್ಲಿ ಸ್ಥಾನಪಡೆದಿವೆ.
ಇದರ ಜೊತೆಗೆ ಐಐಎಂಬಿ, ಐಐಎಂಸಿ, ಮತ್ತು ಐಐಎಂಎಗಳು ನಡೆಸುವ ಮೂಲಕ ಕೋರ್ಸ್‌ಗಳು, ಉದ್ಯೋಗ ದೊರಕಿಸಿಕೊಡುವ ಸೂಚ್ಯಂಕದಲ್ಲಿ ಟಾಪ್ 50ರಲ್ಲಿ ಸ್ಥಾನ ಪಡೆದಿವೆ.
ಇನ್ನು ಐಐಎಂ ಬೆಂಗಳೂರಿನ ಪೂರ್ಣಕಾಲೀನ ಎಂಬಿಎ ಕೋರ್ಸ್, ಸಾರ್ವಜನಿಕ ಯೋಜನೆಗಳ ಮೇಲೆ ಪರಿಣಾಮ ಬೀರುವ ಪ್ರಭಾವ ಬೀರುವ ಪಟ್ಟಿಯಲ್ಲಿ ಭಾರತದಲ್ಲಿ ಮೊದಲ ಸ್ಥಾನ ಪಡೆದಿದೆ.