ಬೇರೆಲ್ಲಾ ಧರ್ಮಗಳಿಗಿಂತ ಇಸ್ಲಾಂ ಶ್ರೇಷ್ಠ : ರಾಯರಡ್ಡಿ

Published : Aug 31, 2026, 10:29 AM IST
Basvaaj rayareddy

ಸಾರಾಂಶ

ಇಸ್ಲಾಂ ಧರ್ಮದ ಬಗ್ಗೆ ಕೆಲ ಮತೀಯರು ಅಪಪ್ರಚಾರ ಮಾಡಿದ್ದಾರೆ. ಆದರೆ, ಎಲ್ಲ ಧರ್ಮಕ್ಕಿಂತಲೂ ಇಸ್ಲಾಂ ಧರ್ಮ ಶ್ರೇಷ್ಠವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕುಕನೂರು : ಇಸ್ಲಾಂ ಧರ್ಮದ ಬಗ್ಗೆ ಕೆಲ ಮತೀಯರು ಅಪಪ್ರಚಾರ ಮಾಡಿದ್ದಾರೆ. ಆದರೆ, ಎಲ್ಲ ಧರ್ಮಕ್ಕಿಂತಲೂ ಇಸ್ಲಾಂ ಧರ್ಮ ಶ್ರೇಷ್ಠವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರಿನಲ್ಲಿ ಜಾಮಿಯ ಮಸ್‌ಜೀದ್ ಬಜಾರ್‌ ಮತ್ತು ಮುಸ್ಲಿಂ ಖಬರಸ್ಥಾನ ಕಮಿಟಿಯಿಂದ ಭಾನುವಾರ ಜರುಗಿದ 11 ಜೋಡಿಗಳ ಉಚಿತ ಸಾಮೂಹಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ

ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಮಹಮ್ಮದ್ ಪೈಗಂಬರರು ಇಡೀ ಬ್ರಹ್ಮಾಂಡಕ್ಕೆ ಕುರಾನ್ ನೀಡಿದ್ದಾರೆ. ಯಾರು ಬೇಕಾದರೂ ಕುರಾನ್ ಓದಬಹುದು, ನಾನೂ ಸಹ ಕುರಾನ್ ಅಧ್ಯಯನ ಮಾಡಲು ಸಿದ್ಧನಿದ್ದೇನೆ ಎಂದು ಸಚಿವರು ಹೇಳಿದರು.

ಎಲ್ಲ ಧರ್ಮವನ್ನು ನಾವು ಗೌರವಿಸಬೇಕು

ಎಲ್ಲ ಧರ್ಮವನ್ನು ನಾವು ಗೌರವಿಸಬೇಕು. ನಾನು ಅತಿಯಾಗಿ ದೇವಸ್ಥಾನ, ಮಠಮಾನ್ಯಗಳಿಗೆ ಹೋಗುವುದಿಲ್ಲ. ಆದರೆ, ಮೆಕ್ಕಾಗೆ ಹಜ್‌ ಯಾತ್ರೆ ಹೋಗಬೇಕು ಎಂದು ಯೋಚನೆ ಮಾಡಿದ್ದೇನೆ. ಆದರೆ, ಹೋಗಲು ಸಾಧ್ಯವಿಲ್ಲ, ಏಕೆಂದರೆ ಅಲ್ಲಿಗೆ ಹೋಗಲು ನಾನು ಮುಸ್ಲಿಂ ಆಗಿ ಮತಾಂತರ ಆಗಬೇಕು ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

ಇಸ್ಲಾಂ ಧರ್ಮದ ಬಗ್ಗೆ ತಪ್ಪು ಕಲ್ಪನೆಯನ್ನು ಕೆಲ ಮತೀಯರು ಬಿತ್ತುತ್ತಿದ್ದಾರೆ. ಆದರೆ, ಇಸ್ಲಾಂ ಅತ್ಯಂತ ಮಾನವೀಯತೆಯಿಂದ ಕೂಡಿದ ಶ್ರೇಷ್ಠ ಧರ್ಮವಾಗಿದೆ. ಇಸ್ಲಾಂ ಪ್ರಕಾರ ಕುಡಿಯುವಂತಿಲ್ಲ, ಮುಸಲ್ಮಾನರು ರಕ್ತ ಕುಡಿಯಂಗಿಲ್ಲ. ದಿನಕ್ಕೆ ಐದು ಬಾರಿ ನಮಾಜ್‌ ಮಾಡಬೇಕು. ವಾರ್ಷಿಕವಾಗಿ ರೋಜಾ ಆಚರಣೆ ಮಾಡಬೇಕು, ಜಕಾತ ನೀಡಬೇಕು. ಮದ್ಯದಂಗಡಿಯಲ್ಲಿ ವ್ಯಾಪಾರ ಮಾಡುವಂತಿಲ್ಲ. ಪ್ರಾಣಿಗಳನ್ನು ಹೇಗೆ ಕಟ್ ಮಾಡಬೇಕು, ಹಲಾಲ್ ಮಾಡಬೇಕು ಎನ್ನುವ ತಿಳಿವಳಿಕೆಯನ್ನು ಇಸ್ಲಾಂ ನೀಡಿದೆ. ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಈ ಧರ್ಮ ಹೇಳಿ ಕೊಡುತ್ತದೆ ಎಂದು ಶ್ಲಾಘಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

3 ವರ್ಷದಲ್ಲಿ ರಾಜ್ಯದಲ್ಲಿ 3,548 ರೈತರ ಆತ್ಮ*ತ್ಯೆ
ಕೆಪಿಎಸ್ಸಿ ಅಕ್ರಮ: ದಿಲ್ಲಿಯಲ್ಲಿ ಬೀದರ್‌ ವ್ಯಕ್ತಿ ಸಿಐಡಿ ವಶಕ್ಕೆ