ಕರ್ನಾಟಕ ಬಜೆಟ್ 2025 : ಪ್ರೀಮಿಯಂ ಮದ್ಯದ ದರ ಈ ವರ್ಷವೂ ದುಬಾರಿ - ಪದ್ಯ ಪರವಾನಗಿ ಇ-ಹರಾಜು

Published : Mar 08, 2025, 07:47 AM IST
all liquor shop will be closed in madhya pradesh

ಸಾರಾಂಶ

ಅಬಕಾರಿ ಖಾಲಿ ಇರುವ ಪದ್ಯ ಪರವಾನಗಿ ಇ-ಹರಾಜು- ಅಬಕಾರಿಯಿಂದ ₹40000 ಕೋಟಿ ಆದಾಯ ಟಾರ್ಗೆಟ್‌ - ಪ್ರೀಮಿಯಂ ಮದ್ಯದ ದರ ಈ ವರ್ಷವೂ ಪರಿಷ್ಕರಣೆ

ಅಬಕಾರಿ ಖಾಲಿ ಇರುವ ಪದ್ಯ ಪರವಾನಗಿ ಇ-ಹರಾಜು

- ಅಬಕಾರಿಯಿಂದ ₹40000 ಕೋಟಿ ಆದಾಯ ಟಾರ್ಗೆಟ್‌ - ಪ್ರೀಮಿಯಂ ಮದ್ಯದ ದರ ಈ ವರ್ಷವೂ ಪರಿಷ್ಕರಣೆ

-- ರಾಜ್ಯದ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಖಾಲಿ ಇರುವ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಎಲೆಕ್ಟ್ರಾನಿಕ್‌ ಹರಾಜಿನ ಮೂಲಕ ಹಂಚಿಕೆ ಮಾಡುವುದಾಗಿ ಆಯವ್ಯಯದಲ್ಲಿ ಪ್ರಕಟಿಸಲಾಗಿದೆ.

ರಾಜ್ಯದ ಪ್ರಮುಖ ಆದಾಯ ಮೂಲವಾಗಿರುವ ಅಬಕಾರಿ ಇಲಾಖೆಯಿಂದ 2025-26ನೇ ಸಾಲಿನಲ್ಲಿ 40,000 ಕೋಟಿ ರು. ರಾಜಸ್ವ ಸಂಗ್ರಹಣ ಗುರಿ ಹೊಂದಿರುವ ಸರ್ಕಾರ, ಇದಕ್ಕಾಗಿ ಅನೇಕ ವರ್ಷಗಳಿಂದ ಸ್ಥಗಿತಗೊಂಡಿರುವ ಸಿಎಲ್‌-2 (ಮದ್ಯ ಮಾರಾಟ ಅಂಗಡಿ), ಸಿಎಲ್‌-9 ಸನ್ನದುಗಳನ್ನು (ಬಾರ್‌) ಹರಾಜಿನ ಮೂಲಕ ಹಂಚಿಕೆ ಮಾಡಲು ಉದ್ದೇಶಿಸಿದೆ. ಅನೇಕ ವರ್ಷಗಳಿಂದ ಸರ್ಕಾರ ಹೊಸ ಸನ್ನದುಗಳನ್ನು ನೀಡುತ್ತಿಲ್ಲ. ಹೊಸ ಸನ್ನದುಗಳನ್ನು ನೀಡಲು ತೀವ್ರ ವಿರೋಧವಿದೆ. ಹೀಗಾಗಿ ಆದಾಯ ಹೆಚ್ಚಿಸಿಕೊಳ್ಳಲು ಖಾಲಿ ಇರುವ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್‌ ಹರಾಜಿನ ಮೂಲಕ ಹಂಚಿಕೆ ಮಾಡಲು ನಿರ್ಧರಿಸಿದೆ.

ಲಭ್ಯವಿರುವ ಮಾಹಿತಿ ಪ್ರಕಾರ, ರಾಜ್ಯದ 33 ಜಿಲ್ಲೆಗಳಲ್ಲಿ ಸ್ಥಗಿತಗೊಂಡಿರುವ ಸಿಎಲ್‌-2 ಸನ್ನದುಗಳ ಸಂಖ್ಯೆ 136 ಇದೆ. ಅದೇ ರೀತಿ ಸಿಎಲ್‌-9 ಸನ್ನದುಗಳ ಸಂಖ್ಯೆ 105 ಇದೆ. ಇದರ ಜೊತೆಗೆ 1987ರ ಕೋಟಾ ಅನ್ವಯ ಸನ್ನದು ನೀಡಲು ಬಾಕಿ ಇರುವ (ಎಂಎಸ್‌ಐಎಲ್‌) ಸಿಎಲ್‌-2 ಸನ್ನದುಗಳ ಸಂಖ್ಯೆ 70 ಇದೆ. ಆದರೆ ಎಂಎಸ್‌ಐಎಲ್‌ ಸನ್ನದುಗಳನ್ನು ಹರಾಜು ಹಾಕಲು ಬರುವುದಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ 36 ಸನ್ನದುಗಳು ಸ್ಥಗಿತಗೊಂಡಿದ್ದು, ಈ ಪೈಕಿ 21 ಸಿಎಲ್‌-2 ಹಾಗೂ 15 ಸಿಎಲ್‌-9 ಸನ್ನದು ಇದೆ. ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ 21, ಚಿತ್ರದುರ್ಗ 24, ದಾವಣಗೆರೆ 20, ಶಿವಮೊಗ್ಗ 21, ಮಂಡ್ಯ ಜಿಲ್ಲೆಯಲ್ಲಿ 10 ಸನ್ನದು ಸ್ಥಗಿತಗೊಂಡಿವೆ. ಉಳಿದ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯ ಸನ್ನದು ಇದೆ.

ಸ್ಲ್ಯಾಬ್‌ ಮುಂದುವರಿಕೆ: ಪ್ರೀಮಿಯಂ ಮದ್ಯದ ಬೆಲೆಗಳನ್ನು ನೆರೆಯ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಸಾರವಾಗಿ ಪರಿಷ್ಕರಿಸಲಾಗಿದ್ದು, ಈ ವರ್ಷ ಅದೇ ರೀತಿ ಮುಂದುವರೆಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ