ಮೊಸರಿನ ದರದಲ್ಲಿ ಅಲ್ಪ ಇಳಿಕೆಗೆ ಸಿಎಂ ಸೂಚನೆ

Published : Nov 03, 2026, 09:12 AM IST
DK Shivakumar

ಸಾರಾಂಶ

ಕೆಎಂಎಫ್ ಹಾಗೂ ವಿವಿಧ ಹಾಲಿನ ಒಕ್ಕೂಟಗಳ ವತಿಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು : ಕೆಎಂಎಫ್ ಹಾಗೂ ವಿವಿಧ ಹಾಲಿನ ಒಕ್ಕೂಟಗಳ ವತಿಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಹಾಲಿನ ಒಕ್ಕೂಟಗಳ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಸಭೆ

ಸೋಮವಾರ ಕೃಷ್ಣಾದಲ್ಲಿ ವಿವಿಧ ಹಾಲಿನ ಒಕ್ಕೂಟಗಳ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಸಭೆ ನಡೆಸಿದ ಅವರು, ಬಳಿಕ ಸಂಜೆ ಬೇರೊಂದು ಕಾರ್ಯಕ್ರಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಕೊಬ್ಬಿನಾಂಶ ಹೆಚ್ಚು ಇರುವ ಹಾಲಿನ ದರ ಹೆಚ್ಚಾಗಿದೆ

ಕೊಬ್ಬಿನಾಂಶ ಹೆಚ್ಚು ಇರುವ ಹಾಲಿನ ದರ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳು ಸಂಪೂರ್ಣವಾಗಿ ವಿವರಿಸಲಿದ್ದಾರೆ. ನೀರಿನ ಬಾಟಲಿ ಬೆಲೆ ಹೆಚ್ಚಾದರೆ ಒಬ್ಬರೂ ಮಾತನಾಡುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರಕ್ಕೆ ಜಿಎಸ್ಟಿ ಹೋಗುತ್ತದೆ. ಹಾಲಿನ ದರ ಹೆಚ್ಚಳ ಮಾಡಿದ್ದರಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ. ಆದರೆ ಮೊಸರಿನ ಬೆಲೆ ತುಂಬಾ ಹೆಚ್ಚಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ದರ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.

ಕೆಎಂಎಫ್‌ ಹಾಲಿನ ದರವನ್ನು ಕನಿಷ್ಠ 8 ರು. ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 14 ರು.ನಷ್ಟು ಹೆಚ್ಚಿಸಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬರದಲ್ಲೂ 620 ಅಪರೂಪದ ಭತ್ತದ ತಳಿ ಸಂರಕ್ಷಣೆ!
ವಲಸಿಗರಿಂದ ದೈನಂದಿನ ಜೀವನಕ್ಕೂ ಪೆಟ್ಟು!