ಗ್ಯಾರಂಟಿ ಯೋಜನೆ ಮುಂದುವರಿಸುವುದರ ಜತೆಗೆ 10 ವರ್ಷಗಳ ಅಭಿವೃದ್ಧಿ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್‌ನನ್ನು ಶುಕ್ರವಾರ ಮಂಡಿಸಿದರು. 3.71 ಲಕ್ಷ ಕೋಟಿ ರು. ಗಾತ್ರದ ಮುಂಗಡ ಪತ್ರವನ್ನು ಅವರು ಮಂಡಿಸಿದರು. ಸಂಪೂರ್ಣ ಆಯವ್ಯಯದ ಸಂಕ್ಷಿಪ್ತ ನೋಟಿ ಇಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡಪ್ರಭ ಬಜೆಟ್ ಎಕ್ಸ್‌ಪ್ರರ್ಟ್‌

ಡಿಕೆಶಿ ತವರಲ್ಲಿ ಅರ್ಕಾವತಿ ರಿವರ್‌ ಫ್ರಂಟ್‌: ರಾಮನಗರದ ಬಳಿ ಅರ್ಕಾವತಿ ರಿವರ್‌ ಫ್ರಂಟ್‌ ಅಭಿವೃದ್ಧಿ ಯೋಜನೆ. ಇದರ ಜತೆಗೆ ವಿವಿಧ ನಾಲೆಗಳ ಆಧುನೀಕರಣ, ಕೆರೆ ತುಂಬಿಸುವ ಯೋಜನೆಗಳಿಗೆ 2000 ಕೋಟಿ ರು. ಅನುದಾನ
ಖರ್ಗೆ ತವರಿಗೆ ನೀರೊದಗಿಸಲು ಸ್ಕೀಂ: ಕಲಬುರಗಿ ನಗರಕ್ಕೆ ಕುಡಿಯುವ ನೀರು ಒದಗಿಸಲು ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ, ಕಾಗಿಣಾ ನದಿಗಳಿಂದ ನೀರು. ಇದಕ್ಕಾಗಿ 365 ಕೋಟಿ ರು. ವೆಚ್ಚ.
7 ತಾಲೂಕಿಗೆ ಆಸ್ಪತ್ರೆ ಮಂಜೂರು:ಶೃಂಗೇರಿ, ಖಾನಾಪುರ, ಶಿರಹಟ್ಟಿ, ಆನೇಕಲ್‌, ನೆಲಮಂಗಲ, ಹೊಸಕೋಟೆ, ಯಳಂದೂರಿನಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆ. 280 ಕೋಟಿ ರು. ವೆಚ್ಚ--ಅಲೆಮಾರಿಗಳಿಗಾಗಿ ಆಯೋಗ

ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗ ರಚನೆ

ಕೃಷಿ ಅಭಿವೃದ್ಧಿ ಪ್ರಾಧಿಕಾರಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ.

5000 ಸಣ್ಣ ಸರೋವರ ನಿರ್ಮಾಣಬರಪೀಡಿತ, ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮಾಡಲು ಪ್ರತಿ ವರ್ಷ 1000ದಂತೆ ನರೇಗಾ ಯೋಜನೆಯಡಿ 5000 ಸಣ್ಣ ಸರೋವರಗಳ ನಿರ್ಮಾಣ.

ರೈತರಿಗಾಗಿ ಇ-ಸ್ಯಾಪ್‌ ಸಾಫ್ಟ್‌ವೇರ್‌ಕೀಟ, ರೋಗ ಮತ್ತು ಪೋಷಕಾಂಶ ನಿರ್ವಹಣೆ ಕುರಿತು ರೈತರಿಗೆ ಸಲಹೆ ನೀಡಲು ರಾಯಚೂರು ಕೃಷಿ ವಿವಿ ಅಭಿವೃದ್ಧಿಪಡಿಸಿರುವ ಇ-ಸ್ಯಾಪ್‌ ತಂತ್ರಾಂಶ ಎಲ್ಲ ರೈತರಿಗೂ ಪರಿಚಯ.

ಆಹಾರ ಸಂಸ್ಕರಣಾ ಆಯುಕ್ತಾಲಯಕೃಷಿ ಉತ್ಪನ್ನಗಳು ವ್ಯರ್ಥವಾಗುವುದನ್ನು ತಡೆಯಲು, ರೈತರಿಗೆ ಸಮರ್ಪಕ ಬೆಲೆ ದೊರಕಿಸಲು ಕೃಷಿ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಯ ರಚನೆ.

ಬೆಂಗಳೂರು ಬಜೆಟ್‌

  • ಸಂಚಾರ ದಟ್ಟಣೆ ತಪ್ಪಿಸಲು ಪ್ರಾಯೋಗಿಕವಾಗಿ ಹೆಬ್ಬಾಳ ಜಂಕ್ಷನ್‌ನಲ್ಲಿ ಸುರಂಗ ಮಾರ್ಗ
  • ಬಿಎಂಟಿಸಿಗೆ 1334 ಹೊಸ ಎಲೆಕ್ಟ್ರಿಕ್‌ ಬಸ್‌, 820 ಬಿಎಸ್‌-6 ಡೀಸೆಲ್‌ ಬಸ್‌ ಸೇರ್ಪಡ
  • ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಟಿಸಿಯಿಂದ ವೆಹಿಕಲ್‌ ಟ್ರ್ಯಾಕಿಂಗ್‌ ಹೊಂದಿರುವ ಮೊಬೈಲ್‌ ಆ್ಯಪ್‌
  • ಸಂಚಾರ ದಟ್ಟಣೆ ತಪ್ಪಿಸಲು ಜಪಾನ್‌ ಸರ್ಕಾರದ ಸಹಯೋಗದೊಂದಿಗೆ ಏರಿಯಾ ಟ್ರಾಫಿಕ್‌ ಸಿಗ್ನಲ್‌ ಕಂಟ್ರೋಲ್‌ ಸಿಸ್ಟಂ 28 ಜಂಕ್ಷನ್‌ಗಳಲ್ಲಿ ಜಾರಿ
  • ಬಿಬಿಎಂಪಿ, ಬಿಎಂಆರ್‌ಸಿಎಲ್‌, ಜಲಮಂಡಳಿ, ಬಿಡಿಎಗಳ ವಿದ್ಯುತ್‌ ಶಲ್ಕ ಹೊರೆ ಕಡಿಮೆಗೊಳಿಸಲು ಸೋಲಾರ್‌ ಪಾರ್ಕ್‌ ಸ್ಥಾಪನೆ
  • 2025ರ ಮಾರ್ಚ್ ವೇಳೆಗೆ ಈಗ ಇರುವ 74 ಕಿ.ಮೀ. ಮೆಟ್ರೋ ಮಾರ್ಗಕ್ಕೆ 44 ಕಿ.ಮೀ. ಮಾರ್ಗ ಸೇರ್ಪಡೆ
  • ಈ ವರ್ಷ 6000 ಕೋಟಿ ರು. ತೆರಿಗೆ ಸಂಗ್ರಹ ಗುರಿ
  • 20 ಲಕ್ಷ ಆಸ್ತಿಗಳ ತೆರಿಗೆ ದಾಖಲೆ ಡಿಜಿಟಲೀಕರಣ. ಆಸ್ತಿ ಮಾಲೀಕರಿಗೆ ಡಿಜಿಟಲ್‌ ಇ-ಖಾತಾ, ತೆರಿಗೆ ಪಾವತಿ ವಿವರ
  • ಬೆಂಗಳೂರಿಗೆ ಕಾವೇರಿ ನೀರು ತರುವ 5550 ಕೋಟಿ ರು. ವೆಚ್ಚದ ಹಂತ-5 ಯೋಜನೆ ಮೇ ತಿಂಗಳಿನಲ್ಲಿ ಕಾರ್ಯಾರಂಭ.
  • ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ವಜ್ಞ ಉದ್ಯಾನವನ
  • ಬೆಂಗಳೂರಿಂದ ತುಮಕೂರು, ಏರ್‌ಪೋರ್ಟ್‌ನಿಂದ ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಿಸಲು ಕಾರ್ಯಸಾಧ್ಯತಾ ವರದಿ

ರಾಜ್ಯದಲ್ಲೂ ನೀತಿ ಆಯೋಗ: ರಾಜ್ಯ ಪರಿವರ್ತನಾ ಸಂಸ್ಥೆಯ ಮೂಲ ಉದ್ದೇಶ ಹಾಗೂ ಕಾರ್ಯವನ್ನು ಸೂಕ್ತವಾಗಿ ಬಿಂಬಿಸಲು ಹೆಸರು ಬದಲು. ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಎಂದು ಪುನಾರಚನೆ.
ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ: ಪೌರಾಣಿಕ, ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ಸುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಒದಗಿಸಲು 100 ಕೋಟಿ ರು. ಅನುದಾನ
ಭಾನುವಾರವೂ ಉಪ ನೋಂದಣಿ ಕಚೇರಿ ಓಪನ್‌: ನಾಗರಿಕರ ಅನುಕೂಲಕ್ಕಾಗಿ ಆಯ್ದ ಉಪನೋಂದಣಾಧಿಕಾರಿ ಕಚೇರಿಗಳನ್ನು ಭಾನುವಾರವೂ ತೆರೆಯಲು ಕ್ರಮ.
ಸರ್ಕಾರದಲ್ಲಿ ಎಐ ಆಡಳಿತ ಘಟಕ:ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌/ಮಿಷನ್‌ ಲಿರ್ನಿಂಗ್‌ ಆಡಳಿತ ಘಟಕ ಸ್ಥಾಪನೆ

ರಾಜ್ಯ ಆಯವ್ಯಯ ವಿಶೇಷ: ಗ್ಯಾರಂಟಿಯಿಂದ ಅಭಿವೃದ್ಧಿ ಕಡೆಗೆ

  • ರಾಜ್ಯದಲ್ಲಿ ಮತ್ತೊಂದು ಕೃಷಿ ವಿವಿಮಂಡ್ಯ ಜಿಲ್ಲೆಯ ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚನೆ. ರೈತ ಆಹಾರ ಉತ್ಪಾದಕ ಸಂಸ್ಥೆಗಳಿಗೆ ಬಲ. ಕೃಷಿ ವಲಯದ ಸ್ಟಾರ್ಟಪ್‌ಗೆ ಉತ್ತೇಜನ.
  • ಬೆಂಗಳೂರಲ್ಲಿ ಅಂ.ರಾ. ಪುಷ್ಪ ಮಾರುಕಟ್ಟೆ40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಪುಷ್ಪ ಬೆಳೆ ಮಾರಾಟ, ರಫ್ತು ಉತ್ತೇಜಿಸಲು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪನೆ.
  • ಮತ್ತೊಂದು ತೋಟಗಾರಿಕೆ ಕಾಲೇಜುತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗೆ ಇನ್ನಷ್ಟು ಉತ್ತೇಜನ ನೀಡಲು ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು.
  • ರೇಷ್ಮೆ ಗೂಡು ಪ್ರೋತ್ಸಾಹಧನ 20 ರು. ಏರಿಕೆಬೈವೋಲ್ಟೀನ್‌ ರೇಷ್ಮೆಗೂಡುಗಳಿಗೆ ನೀಡುತ್ತಿರುವ ಪ್ರೋತ್ಸಾಹಧನ ಕೆಜಿಗೆ 10 ರು.ನಿಂದ 30 ರು.ಗೆ ಹೆಚ್ಚಳ. ರಾಮನಗರ, ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯ 2ನೇ ಹಂತದ ಕಾಮಗಾರಿ ಶೀಘ್ರ.
  • 7 ಕಡೆ ಶೀತಲಗೃಹಗಳ ಸ್ಥಾಪನೆಯಲಬುರ್ಗಾ, ಬಸವನಬಾಗೇವಾಡಿ, ರಾಣೆಬೆನ್ನೂರು, ಬಳ್ಳಾರಿ, ಗದಗ ಎಪಿಎಂಸಿಯಲ್ಲಿ ಒಟ್ಟು ₹50 ಕೋಟಿ ವೆಚ್ಚದಲ್ಲಿ, ರಾಯಚೂರು, ಮೈಸೂರಿನಲ್ಲಿ ತಲಾ ₹40 ಕೋಟಿ ವೆಚ್ಚದಲ್ಲಿ ಶೀತಲಗೃಹಗಳ ಸ್ಥಾಪನೆ.
  • ಒಣಮೆಣಸು ಮಾರುಕಟ್ಟೆ25 ಕೋಟಿ ರು. ವೆಚ್ಚದಲ್ಲಿ ರಾಯಚೂರಿನಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಮಾರುಕಟ್ಟೆಯಲ್ಲಿ ₹35 ಕೋಟಿ ವೆಚ್ಚದ ಕೃಷಿ ಸಂಕೀರ್ಣ.
  • ಎಪಿಎಂಸಿಗಳಲ್ಲಿ ಗ್ಯಾಸ್‌ ಪ್ಲಾಂಟ್‌ತರಕಾರಿ ಮಾರುಕಟ್ಟೆಗಳನ್ನು ಶೂನ್ಯ ತಾಜ್ಯ ಮಾರುಕಟ್ಟೆ ಮಾಡಲು ಆಯ್ದ ಮಾರುಕಟ್ಟೆಗಳಲ್ಲಿ ಬಯೋ ಸಿಎನ್‌ಜಿ ಘಟಕ. ಎಪಿಎಂಸಿಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಚಾರ್ಜಿಂಗ್‌ ಪಾಯಿಂಟ್‌. ಜತೆಗೆ ಪೆಟ್ರೋಲ್‌ ಬಂಕ್‌ ಸ್ಥಾಪನೆ.
  • ಕೆಆರ್‌ಎಸ್‌ಗೆ ಹೊಸ ಲುಕ್‌ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವಾಗಿ ಉನ್ನತೀಕರಿಸುವ ಯೋಜನೆ ಆರಂಭಿಸುವುದಾಗಿ ಘೋಷಣೆ.
  • ಪಿಯು ವಿದ್ಯಾರ್ಥಿಗಳಿಗೆ ನೀಟ್‌ ತರಬೇತಿಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ 20 ಸಾವಿರ ವಿದ್ಯಾರ್ಥಿಗಳಿಗೆ ನೀಟ್‌/ಜೆಇಇ/ಸಿಇಟಿ ತರಬೇತಿ. ಇದಕ್ಕಾಗಿ 10 ಕೋಟಿ ರು. ವೆಚ್ಚ.
  • ಎಲ್ಲ ಜಿಲ್ಲೆಗಳಲ್ಲೂ ಕಿಮೋಥೆರಪಿಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ 20 ಕೋಟಿ ರು. ವೆಚ್ಚದಲ್ಲಿ ಎಲ್ಲ ಜಿಲ್ಲೆಯಲ್ಲೂ ಡೇ-ಕೇರ್‌ ಕಿಮೋಥೆರಪಿ ಕೇಂದ್ರ ಸ್ಥಾಪನೆ.
  • ನ್ಯೂನತೆಯುಳ್ಳವರ ಆರೈಕೆದಾರರಿಗೆ ಹಣಸೆರೆಬ್ರಲ್‌ ಪಾಲ್ಸಿ, ಮಸ್ಕ್ಯುಲರ್‌ ಡಿಸ್ಟ್ರೋಫಿ, ಪಾರ್ಕಿನ್ಸನ್ಸ್‌ ಹಾಗೂ ಮಲ್ಟಿಪಲ್‌ ಸ್ಲೆರೋಸಿಸ್‌ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಮಾಸಿಕ 1000 ರು. ಪ್ರೋತ್ಸಾಹಧನ.
  • ಡಾ। ಸಿದ್ದಲಿಂಗಯ್ಯ ಅಧ್ಯಯನ ಪೀಠಪದ್ಮಶ್ರೀ ಡಾ। ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂಗಳೂರು ವಿವಿಯಲ್ಲಿ ಅಧ್ಯಯನ ಪೀಠ.
  • ಆಶ್ರಮ ಶಾಲೆಗಳ ಹೆಸರು ಬದಲುಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿಯ ಆಶ್ರಮ ಶಾಲೆಗಳ ಹೆಸರು ಇನ್ನು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಎಂದು ಮರುನಾಮಕರಣ. ಹಿಂದುಳಿದ ವರ್ಗಗಳ ಇಲಾಖೆಯ ಆಶ್ರಮ ಶಾಲೆಗಳಿಗೆ ಡಿ.ದೇವರಾಜ ಅರಸು ಹೆಸರು.
  • 5000 ಎಸ್‌ಟಿಗಳಿಗೆ ಡ್ರೋನ್‌ ತರಬೇತಿಡ್ರೋನ್‌ ಆಧರಿತ ಫೋಟೋಗ್ರಫಿ, ವಿಡಿಯೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ 5000 ಯುವಕ/ಯುವತಿಯರಿಗೆ ಡ್ರೋನ್‌ ತರಬೇತಿ
  • ಸಂಡೂರಿನಲ್ಲಿ ಸ್ಕಿಲ್‌ ಅಕಾಡೆಮಿಕೈಗಾರಿಕಾ, ಉದಯೋನ್ಮುಖ ವಲಯಗಳಲ್ಲಿ ನುರಿತ ಉದ್ಯೋಗಿಗಳ ಅಗತ್ಯ ಪೂರೈಸಲು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸ್ಕಿಲ್‌ ಅಕಾಡೆಮಿ.
  • ರಾಜ್ಯ ಕೌಶಲ್ಯ ಒಲಿಂಪಿಕ್ಸ್‌ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಪ್ರಶಿಕ್ಷಣಾರ್ಥಿಗಳನ್ನು ಕೌಶಲ್ಯ ಸ್ಪರ್ಧೆಗಳಿಗೆ ಸಿದ್ಧಪಡಿಸಲು ರಾಜ್ಯ ಕೌಶಲ್ಯ ಒಲಿಂಪಿಕ್ಸ್‌ ಆಯೋಜನೆ.
  • ಒಂದೇ ಕಡೆ ನೇಮಕ ಅಧಿಸೂಚನೆಕೇಂದ್ರ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳಲ್ಲಿ ನೇಮಕಾತಿಗಾಗಿ ಹೊರಡಿಸಲಾಗುವ ಅಧಿಸೂಚನೆಗಳು ಇನ್ನು ಒಂದೇ ಜಾಲತಾಣದಲ್ಲಿ ಪ್ರಕಟ.
  • ಮಹಿಳೆಯರಿಗೆ ತಂಗಲು ವ್ಯವಸ್ಥೆವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಕೈಗೆಟಕುವ ದರದಲ್ಲಿ ರಾತ್ರಿ ತಂಗುವ ವ್ಯವಸ್ಥೆ 5 ನಗರಗಳಲ್ಲಿ ಅನುಷ್ಠಾನ. ಈ ವಸತಿ ವ್ಯವಸ್ಥೆ ಮಹಿಳೆಯರಿಂದ ನಿರ್ವಹಣೆ.
  • ಹಿರಿಯರ ಆರೈಕೆ-ಉಪಶಮನ ಕೇಂದ್ರಹಿರಿಯ ನಾಗರಿಕರ ಆರೈಕೆ ಮತ್ತು ಚಿಕಿತ್ಸೆ ನಿರ್ವಹಿಸಲು ಆಯ್ದ 100 ಗ್ರಾಮ ಪಂಚಾಯಿತಿಗಳಲ್ಲಿ ಆರೈಕೆ-ಉಪಶಮನ ಕೇಂದ್ರ.
  • ಕಲ್ಯಾಣ ಕರ್ನಾಟಕಕ್ಕೆ ₹5000 ಕೋಟಿಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು 5000 ಕೋಟಿ ರು. ಯೋಜನೆ ಜಾರಿ
  • ತೆರಿಗೆ ಸೋರಿಕೆ ತಡೆಗೆ ಡ್ರೋನ್‌ಆಸ್ತಿ ತೆರಿಗೆ ಸೋರಿಕೆ ತಡೆಗಟ್ಟಲು 3ಡಿ ಡ್ರೋನ್‌ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವತ್ತುಗಳ ಮ್ಯಾಪಿಂಗ್‌.
  • ತೆರಿಗೆ, ಶುಲ್ಕ ವಸೂಲಿಗೆ ಮಹಿಳಾ ಸಂಘಗಳ ನೆರವುನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ಸಮರ್ಪಕವಾಗಿ ವಸೂಲು ಮಾಡಲು ಸ್ಥಳೀಯ ಮಹಿಳಾ ಸ್ವ ಸಹಾಯ ಗುಂಪುಗಳ ಸೇವೆ ಪಡೆಯಲು ನಿರ್ಧಾರ.
  • ನಗರ ಸ್ಥಳೀಯ ಸಂಸ್ಥೆಗಳ ಸಭೆಗಳು ಕೂಡ ಲೈವ್‌ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಸಭೆಗಳ ಕಾರ್ಯಕಲಾಪಗಳು ಇನ್ನು ನೇರ ಪ್ರಸಾರ.
  • ಇನ್ನೂ 3 ಕಡೆ ಜವಳಿ ಪಾರ್ಕ್‌ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ (ರಾಯಚೂರು) ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ಗಳ ಸ್ಥಾಪನೆ. 10 ಸಾವಿರ ಉದ್ಯೋಗ ಸೃಷ್ಟಿ. ಜವಳಿ ಪಾರ್ಕ್‌ ಇಲ್ಲದ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌.
  • ಬಳ್ಳಾರಿಯಲ್ಲಿ ಜೀನ್ಸ್‌ ಅಪಾರೆಲ್‌ ಪಾರ್ಕ್‌ಬಳ್ಳಾರಿಯ ಜೀನ್ಸ್‌ ಉದ್ದಿಮೆ ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಜೀನ್ಸ್‌ ಅಪಾರೆಲ್‌ ಪಾರ್ಕ್‌ ಅಭಿವೃದ್ಧಿ.
  • ಒಲಿಂಪಿಕ್ಸ್‌ ಚಿನ್ನ ವಿಜೇತರಿಗೆ ₹6 ಕೋಟಿಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಕ್ರೀಡಾಳುಗಳಿಗೆ ₹6 ಕೋಟಿ ಬಹುಮಾನ. ಬೆಳ್ಳಿ ಪದಕ ಪಡೆದವರಿಗೆ ₹4 ಕೋಟಿ, ಕಂಚು ಪಡೆದವರಿಗೆ ₹3 ಕೋಟಿ ಪ್ರೋತ್ಸಾಹಧನ.
  • ಗ್ರಾಮೀಣ ಪತ್ರಕರ್ತರಿಗೆ ಪಾಸ್‌ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌. ಸಾಮಾಜಿಕ ನ್ಯಾಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪತ್ರಕರ್ತರಿಗೆ ವಡ್ಡರ್ಸೆ ಪ್ರಶಸ್ತಿ

Share this article