ನಂದಿನಿ ತುಪ್ಪ ಬೆಲೆ ₹15, ಬೆಣ್ಣೆ ₹25 ಏರಿಸಿದ ಕೆಎಂಎಫ್‌

Published : Jul 24, 2026, 07:05 AM IST
nandini Ghee

ಸಾರಾಂಶ

ಕೆಎಂಎಫ್ ಭಾರಿ ಬೇಡಿಕೆಯ ಉತ್ಪನ್ನಗಳಾದ ತುಪಕ್ಕೆ ತಲಾ ಕೆಜಿಗೆ 15 ರು. ಮತ್ತು ಬೆಣ್ಣೆಗೆ 25 ರು. ಏರಿಕೆ ಮಾಡಿದ್ದು, ಗುಣಮಟ್ಟದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ದರ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

 ಬೆಂಗಳೂರು :  ಕೆಎಂಎಫ್ ಭಾರಿ ಬೇಡಿಕೆಯ ಉತ್ಪನ್ನಗಳಾದ ತುಪಕ್ಕೆ ತಲಾ ಕೆಜಿಗೆ 15 ರು. ಮತ್ತು ಬೆಣ್ಣೆಗೆ 25 ರು. ಏರಿಕೆ ಮಾಡಿದ್ದು, ಗುಣಮಟ್ಟದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ದರ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

ಪರಿಷ್ಕೃತ ದರವು ಶುಕ್ರವಾರದಿಂದಲೇ (ಜು.24) ಜಾರಿಗೆ

ಈ ಪರಿಷ್ಕೃತ ದರವು ಶುಕ್ರವಾರದಿಂದಲೇ (ಜು.24) ಜಾರಿಗೆ ಬರಲಿದೆ. ಈ ಹಿಂದೆ ಪ್ರತಿ ಕೆಜಿ ತುಪ್ಪವನ್ನು 700 ರು.ನಂತೆ ಮಾರಾಟ ಮಾಡಲಾಗುತ್ತಿತ್ತು. ಈಗ 15 ರು. ಏರಿಕೆ ಮಾಡಿದ್ದು ಶುಕ್ರವಾರದಿಂದ ಪ್ರತಿ ಕೆಜಿ ತುಪ್ಪದ ಬೆಲೆ 715 ರು, ತುಪ್ಪ ಅರ್ಧ ಲೀಟರ್‌ (ಪಾಕೇಟ್‌) 358 ರು. ಆಗಲಿದೆ. ಬೆಣ್ಣೆ ಅರ್ಧ ಲೀಟರ್‌ಗೆ (ಜಾರ್‌) 368 ರು, ಒಂದು ಲೀಟರ್‌ಗೆ 735 ರು, 5 ಲೀಟರ್‌ಗೆ 3,575 ರು.ಗೆ ಏರಿಕೆಯಾಗಿದೆ. ಬೆಣ್ಣೆ ಅರ್ಧ ಕೆಜಿಗೆ 305 ರು.ಇದ್ದದ್ದು ಇದೀಗ 330 ರು.ಗೆ ಹೆಚ್ಚಳವಾಗಿದೆ. 200 ಗ್ರಾಂ. ಬೆಣ್ಣೆಗೆ 135 ರು.ಇದ್ದು ಸಾಲ್ಟೆಟ್‌ ಬೆಣ್ಣೆ ಅರ್ಧ ಕೆಜಿಗೆ 310 ರು.ಗೆ ಏರಿಕೆ ಮಾಡಲಾಗಿದೆ.

ತುಪ್ಪ ಹಾಗೂ ಬೆಣ್ಣೆ ದರ ಏರಿಕೆ

ತುಪ್ಪ ಹಾಗೂ ಬೆಣ್ಣೆ ದರ ಏರಿಕೆ ಹಿನ್ನೆಲೆಯಲ್ಲಿ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದ್ದು, ತುಪ್ಪ, ಬೆಣ್ಣೆಯಿಂದ ಮಾಡುವ ಆಹಾರ ಪದಾರ್ಥಗಳ ದರ ಏರಿಕೆಯಾಗುವ ಸಾಧ್ಯತೆಗಳಿವೆ. ವಿದ್ಯುತ್‌, ಪೆಟ್ರೋಲ್‌, ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಬೆಣ್ಣೆ, ತುಪ್ಪದ ದರವೂ ಹೆಚ್ಚಳ ಮಾಡಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸಿಟಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆವುದು ಕಡ್ಡಾಯ
ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು : ತೇಜಸ್ವಿನಿ