ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕೆಎಸ್‌ಪಿಸಿಬಿ ಪೂರ್ವಾನುಮತಿ ಕಡ್ಡಾಯ

Published : Jun 03, 2025, 09:26 AM IST
up building rules change no map approval needed small plot house construction 2025

ಸಾರಾಂಶ

ಬಹುಮಹಡಿ ವಸತಿ ಸಮುಚ್ಛಯ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಪೂರ್ವಾನುಮತಿ ಮತ್ತು ಪ್ರಾರಂಭಿಕ ಸಮ್ಮತಿಯನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳದೇ ನಕ್ಷೆ ಮಂಜೂರಾತಿ (ಸಿಸಿ) ಹಾಗೂ ಸ್ವಾಧೀನ ಪ್ರಮಾಣಪತ್ರ (ಒಸಿ) ನೀಡಿದರೆ ಅದಕ್ಕೆ ಬಿಬಿಎಂಪಿಯೇ ಹೊಣೆ

 ಬೆಂಗಳೂರು  : ಬಹುಮಹಡಿ ವಸತಿ ಸಮುಚ್ಛಯ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಪೂರ್ವಾನುಮತಿ ಮತ್ತು ಪ್ರಾರಂಭಿಕ ಸಮ್ಮತಿಯನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳದೇ ನಕ್ಷೆ ಮಂಜೂರಾತಿ (ಸಿಸಿ) ಹಾಗೂ ಸ್ವಾಧೀನ ಪ್ರಮಾಣಪತ್ರ (ಒಸಿ) ನೀಡಿದರೆ ಅದಕ್ಕೆ ಬಿಬಿಎಂಪಿಯೇ ಹೊಣೆ ಎಂದು ಕೆಎಸ್‌ಪಿಸಿಬಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬಹುಮಹಡಿ ವಸತಿ ಕಟ್ಟಡ ನಿರ್ಮಾಣಕ್ಕೆ ಸಿಸಿ ಮತ್ತು ಒಸಿ ನೀಡುವ ಮೊದಲು ಮಂಡಳಿಯಿಂದ ಸ್ಥಾಪನೆ ಪೂರ್ವಾನುಮತಿ (ಸಿಎಫ್‌ಇ) ಮತ್ತು ಕಾರ್ಯಾಚರಣೆ ಸಮ್ಮತಿ (ಸಿಎಫ್‌ಒ) ಕುರಿತಾದ ನಿಯಮಗಳ ಕುರಿತು ಸ್ಪಷ್ಟನೆ ಕೋರಿ ಬಿಬಿಎಂಪಿ ಬರೆದಿರುವ ಪತ್ರಕ್ಕೆ ಮಂಡಳಿಯ ಸದಸ್ಯ ಕಾರ್ಯದರ್ಶಿಯವರು ಮೇ 30ರಂದು ಸ್ಪಷ್ಟನೆ ನೀಡಿದ್ದಾರೆ.

ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆ ಆರಂಭಿಸುವ ಮೊದಲು ಜಲ ಕಾಯ್ದೆ, ವಾಯು ಕಾಯ್ದೆ ಮತ್ತು ಇತರ ಪರಿಸರ ಸಂರಕ್ಷಣೆ ಕಾಯ್ದೆಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಕೆಎಸ್‌ಪಿಸಿಬಿ ಕಡೆಯಿಂದ ಖಚಿತಪಡಿಸಿಕೊಳ್ಳುವುದನ್ನು 2015ರಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಬಿಬಿಎಂಪಿ ನಗರ ಯೋಜನೆಯ ಹೆಚ್ಚುವರಿ ನಿರ್ದೇಶಕರಿಗೆ ಮೇ 30ರಂದು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ಜಲ ಮಂಡಳಿ ವ್ಯಾಪ್ತಿಯಲ್ಲಿನ, 120ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ಈ ಸ್ಪಷ್ಟನೆ ನೀಡಲಾಗಿದೆ ಎಂದು ಕೆಎಸ್‌ಪಿಸಿಬಿ ಮೂಲಗಳು ತಿಳಿಸಿವೆ.

ಕೆರೆ, ಕೆರೆಯ ಪ್ರದೇಶ ಮತ್ತು ಕೆರೆಗೆ ನೀರು ಹರಿಯುವ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿಯಮ ಜಾರಿಯಲ್ಲಿದೆ. ಎಸ್‌ಟಿಪಿ, ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ಜಾಗವನ್ನು ಬಿಡದೆ ಅಪಾರ್ಟ್‌ಮೆಂಟ್ ನಿರ್ಮಿಸಿ, ಎಲ್ಲಾ ಮುಗಿದ ಬಳಿಕ ಕೆಎಸ್‌ಪಿಸಿಬಿಯಿಂದ ಅನುಮತಿ ಕೇಳಲು ಬಂದರೆ ಪ್ರಯೋಜನವಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ಆಗುವ ಮೊದಲೇ ಮಂಡಳಿಯಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ