ಐಪಿಎಲ್‌ ಪಂದ್ಯ ವೇಳೆ ಮೆಟ್ರೋ, ಬಿಎಂಟಿಸಿ ಬಸ್‌ ಸೇವೆ ವಿಸ್ತರಣೆ

Published : Apr 14, 2026, 11:22 AM IST
BMTC Metro

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.15 ಮತ್ತು 24ರಂದು ನಡೆಯಲಿರುವ ಐಪಿಎಲ್‌ ಪಂದ್ಯಾವಳಿ ಪ್ರೇಕ್ಷಕರ ಅನುಕೂಲಕ್ಕಾಗಿ ಈ ಎರಡು ದಿನ ನಮ್ಮ ಮೆಟ್ರೋ ರೈಲು ಸೇವೆಯ ಅವಧಿಯನ್ನು ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿಸ್ತರಿಸಲಾಗಿದೆ.

 ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.15 ಮತ್ತು 24ರಂದು ನಡೆಯಲಿರುವ ಐಪಿಎಲ್‌ ಪಂದ್ಯಾವಳಿ ಪ್ರೇಕ್ಷಕರ ಅನುಕೂಲಕ್ಕಾಗಿ ಈ ಎರಡು ದಿನ ನಮ್ಮ ಮೆಟ್ರೋ ರೈಲು ಸೇವೆಯ ಅವಧಿಯನ್ನು ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿಸ್ತರಿಸಲಾಗಿದೆ.

ಆರ್‌ವಿ ರಸ್ತೆಯಿಂದ ರಾತ್ರಿ 2 ಗಂಟೆಗೆ

ಈ ಎರಡು ದಿನ ವೈಟ್‌ಫೀಲ್ಡ್‌, ಬೊಮ್ಮಸಂದ್ರದಿಂದ ರಾತ್ರಿ 12.30, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ ರಾತ್ರಿ 12.45 ಹಾಗೂ ಆರ್‌ವಿ ರಸ್ತೆಯಿಂದ ರಾತ್ರಿ 2 ಗಂಟೆಗೆ ಹಾಗೂ ಮೆಜೆಸ್ಟಿಕ್‌ನಿಂದ ನಾಲ್ಕೂ ದಿಕ್ಕುಗಳಿಗೆ ರಾತ್ರಿ 1.30ಕ್ಕೆ ಕೊನೆಯ ರೈಲು ಹೊರಡಲಿವೆ. ಪಂದ್ಯ ವೀಕ್ಷಣೆಗೆ ಮೆಟ್ರೋ ರೈಲಿನಲ್ಲಿ ಬರುವವರು ತಮ್ಮ ವಾಹನವನ್ನು ಮೆಟ್ರೋ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡಲಾಗುತ್ತಿದ್ದು, ದ್ವಿಚಕ್ರ ವಾಹನಕ್ಕೆ 30 ರು. ಹಾಗೂ ಕಾರುಗಳಿಗೆ 60 ರು. ದರ ನಿಗದಿ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಎಂಟಿಸಿಯಿಂದಲೂ ಹೆಚ್ಚುವರಿ ಸೇವೆ

ಅದೇ ರೀತಿ ಬಿಎಂಟಿಸಿಯಿಂದಲೂ ಏ. 15, 18 ಮತ್ತು 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ ಸೇವೆಯನ್ನು ಒದಗಿಸಲಾಗುತ್ತಿದೆ. ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌, ಆರ್‌ಕೆ ಹೆಗಡೆ ನಗರ, ಹೊಸಕೋಟೆ, ಬನಶಂಕರಿಗಳಿಗೆ ಪಂದ್ಯ ಮುಗಿಯುವವರಿಗೂ ಹೆಚ್ಚುವರಿ ಬಸ್‌ ಸೇವೆ ನೀಡಲಾಗುವುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಸದ ಸಮಸ್ಯೆ ನಾಚಿಕೆಗೇಡು : ಉದ್ಯಮಿ ಕಿರಣ್ ಶಾ ತರಾಟೆ
ಜಿಬಿಎ ಪಾಲಿಕೆ ಚುನಾವಣೆಗೆ ತಯಾರಾಗಿ : ಸಲೀಂ