ಹಳದಿ ಮಾರ್ಗ ಮತ್ತಷ್ಟು ವಿಳಂಬ ? : ಮೆಟ್ರೋ ಪ್ರಯಾಣಿಕರ ಅಸಮಾಧಾನ

Published : May 30, 2025, 09:46 AM IST
yellow line Namma Metro

ಸಾರಾಂಶ

ತಾಂತ್ರಿಕ ಪ್ರಸ್ತಾವನೆಗೆ ಅನುಮೋದನೆ ಪಡೆಯುವಿಕೆ ವಿಳಂಬ ಹಿನ್ನೆಲೆಯಲ್ಲಿ ಆರ್.ವಿ.ರಸ್ತೆ - ಬೊಮ್ಮಸಂದ್ರ (19.15ಕಿಮೀ) ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗ ಜನಸಂಚಾರಕ್ಕೆ ಮುಕ್ತವಾಗುವುದು ಇನ್ನಷ್ಟು ವಿಳಂಬ

 ಬೆಂಗಳೂರು : ತಾಂತ್ರಿಕ ಪ್ರಸ್ತಾವನೆಗೆ ಅನುಮೋದನೆ ಪಡೆಯುವಿಕೆ ವಿಳಂಬ ಹಿನ್ನೆಲೆಯಲ್ಲಿ ಆರ್.ವಿ.ರಸ್ತೆ - ಬೊಮ್ಮಸಂದ್ರ (19.15ಕಿಮೀ) ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗ ಜನಸಂಚಾರಕ್ಕೆ ಮುಕ್ತವಾಗುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ಜುಲೈ ಅಂತ್ಯ, ಆಗಸ್ಟ್‌ಗೆ ಮುಂದೂಡಿಕೆ ಆಗಬಹುದು ಎಂದು ಮೂಲಗಳು ತಿಳಿಸಿವೆ.

ಮೇ ಅಂತ್ಯಕ್ಕೆ ದಕ್ಷಿಣ ವಿಭಾಗದ ಮೆಟ್ರೋ ರೈಲ್ವೆ ಆಯುಕ್ತರ ತಂಡ (ಸಿಎಂಆರ್‌ಎಸ್‌) ತಪಾಸಣೆ ನಡೆಸಿ ಒಪ್ಪಿಗೆ ನೀಡಬಹುದು ಹಾಗೂ ಜೂನ್‌ ಮೊದಲ ವಾರದಲ್ಲಿ ಹಳದಿ ಮೆಟ್ರೋ ಕಾರ್ಯಾರಂಭ ಆಗಬಹುದು ಎಂಬ ನಿರೀಕ್ಷೆ ಬಹುತೇಕ ಹುಸಿಯಾಗಿದೆ. ಈ ಸಂಬಂಧ ಮೆಟ್ರೋ ಪ್ರಯಾಣಿಕ ವಲಯ, ಉದ್ಯಮಿಗಳು ಬಿಎಂಆರ್‌ಸಿಎಲ್‌, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಎಂಆರ್‌ಸಿಎಲ್‌ ಏಪ್ರಿಲ್‌ ತಿಂಗಳಾಂತ್ಯಕ್ಕೆ ಹಳದಿ ಮಾರ್ಗದ ಸುರಕ್ಷತಾ ತಪಾಸಣೆಗಾಗಿ ಪ್ರಾಯೋಗಿಕ ಸಂಚಾರ ವರದಿಯನ್ನು ಸಿಎಂಆರ್‌ಎಸ್‌ಗೆ ಸಲ್ಲಿಸಿತ್ತು. ಆದರೆ ರೈಲಿನ ಸಿಗ್ನಲಿಂಗ್‌ ತಪಾಸಣೆಗೆ ಸಂಬಂಧಿಸಿದ ಐಎಸ್‌ಎ (ಇಂಡಿಪೆಂಡೆಂಟ್‌ ಸೇಫ್ಟಿ ಅಸೆಸ್ಮೆಂಟ್‌) ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕ್ರಿಯೆ ಬಾಕಿ ಇದೆ. ಈ ಕಾರಣದಿಂದ ಸಿಎಂಆರ್‌ಎಸ್‌ ತಪಾಸಣೆ, ಅನುಮೋದನೆ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.

PREV
Read more Articles on

Recommended Stories

ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ
ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ