ಭಾನುವಾರ ಬೆಳಗ್ಗೆ 5.30ಕ್ಕೆ ಮೆಟ್ರೋ ಕಾರ್ಯಾಚರಣೆ: ಪಿಡಿಒ ಹುದ್ದೆಗಳ ಪರೀಕ್ಷೆ ಹಿನ್ನೆಲೆಯಲ್ಲಿ ಸೇವೆ

Published : Dec 06, 2024, 07:08 AM IST
Namma Metro

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗ ಡಿ.9ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆಸಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಕೋರಿಕೆ ಮೇರೆಗೆ ಮೆಟ್ರೋ ರೈಲುಗಳನ್ನು ಬೆಳಗ್ಗೆ 7ಗಂಟೆ ಬದಲಾಗಿ 5.30ಕ್ಕೆ ಆರಂಭಿಸಲಾಗುತ್ತಿದೆ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ ಡಿ.9ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆಸಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಕೋರಿಕೆ ಮೇರೆಗೆ ಮೆಟ್ರೋ ರೈಲುಗಳನ್ನು ಬೆಳಗ್ಗೆ 7ಗಂಟೆ ಬದಲಾಗಿ 5.30ಕ್ಕೆ ಆರಂಭಿಸಲಾಗುತ್ತಿದೆ.

ಪರೀಕ್ಷಾ ಅಭ್ಯರ್ಥಿಗಳು ಸಮಯಕ್ಕ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಬಿಎಂಆರ್‌ಸಿಎಲ್‌ಗೆ ಮೆಟ್ರೋ ರೈಲು ಸೇವೆಯನ್ನು ಬೇಗ ಆರಂಭಿಸುವಂತೆ ಅವರು ಕೋರಿದ್ದರು. ಅದರಂತೆ ಬೆಳಗ್ಗೆ 7 ಗಂಟೆಗೆ ಬದಲಾಗಿ 5.30 ಗಂಟೆಗೆ ಎಲ್ಲ ನಾಲ್ಕು, ಟರ್ಮಿನಲ್ ನಿಲ್ಯಾಣಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಪ್ರಾರಂಭಿಸಲಾಗುವುದು. ಅಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜಿಸ್ಟಿಕ್‌ನಿಂದ ಎಲ್ಲ ನಾಲ್ಕು ದಿಕ್ಕಿಗೆ ಮೊದಲ ರೈಲು ಬೆಳಗ್ಗೆ 5.30 ಗಂಟೆಗೆ ಹೊರಡಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಈ ಅವಧಿಯಲ್ಲಿ ಬೆಳಗ್ಗೆ 5.30 ರಿಂದ 7 ಗಂಟೆಯವರೆಗೆ ರೈಲುಗಳು 30 ನಿಮಿಷಗಳ ಆವರ್ತನದಲ್ಲಿ ಚಲಿಸಲಿವೆ. ಬೆಳಗ್ಗೆ 7 ಗಂಟೆಯ ಬಳಿಕ ಎಂದಿನಂತೆ ರೈಲುಗಳು ಚಲಿಸುತ್ತವೆ. ಜನತೆ ಹಾಗೂ ಪರೀಕ್ಷೆಗೆ ಹೋಗುವ ಅಭ್ಯರ್ಥಿಗಳು ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಕೋರಲಾಗಿದೆ. ನಗದು ರಹಿತ ಟಿಕೆಟ್‌ ಪಡೆಯಲು ಮೆಟ್ರೋ ನಿಗಮವು ಹೆಚ್ಚಾಗಿ ಕ್ಯೂಆರ್‌ ಟಿಕೆಟ್ ಮೂಲಕ ಟಿಕೆಟ್ ಖರೀದಿಸಲು ಕೋರಿದೆ.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಕಠಿಣ ಅಭ್ಯಾಸ ಮಾಡಿದರೆ ಸಾಧನೆ ಸುಲಭ: ಎಸ್ಪಿ ರೋಹನ್‌ ಜಗದೀಶ್