ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು

Published : Jul 23, 2025, 10:13 AM IST
Namma metro

ಸಾರಾಂಶ

ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಮಂಗಳವಾರದಿಂದ ಮೆಟ್ರೋ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್‌) ತಪಾಸಣೆ ಆರಂಭಿಸಿದೆ. ಆಗಸ್ಟ್‌ನಲ್ಲಿ ಸಂಚಾರ ಆರಂಭಿಸುವುದು ಬಹುತೇಕ ನಿಶ್ಚಿತವಾಗಿದೆ

 ಬೆಂಗಳೂರು :  ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಮಂಗಳವಾರದಿಂದ ಮೆಟ್ರೋ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್‌) ತಪಾಸಣೆ ಆರಂಭಿಸಿದೆ. ಆಗಸ್ಟ್‌ನಲ್ಲಿ ಸಂಚಾರ ಆರಂಭಿಸುವುದು ಬಹುತೇಕ ನಿಶ್ಚಿತವಾಗಿದೆ.

ಬುಧವಾರ ಕೂಡ ತಪಾಸಣೆ ನಡೆಯಲಿದೆ. ನಮ್ಮ ಮೆಟ್ರೋದಲ್ಲಿ ಚಾಲಕ ರಹಿತ ರೈಲಿನ ಸಿಬಿಟಿಸಿ ತಂತ್ರಜ್ಞಾನ ಇದೇ ಮೊದಲ ಬಾರಿಗೆ ಬಳಕೆ ಆಗುತ್ತಿರುವುದರಿಂದ ಸೂಕ್ಷ್ಮ ತಪಾಸಣೆಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಮಂಗಳವಾರ ಮೋಟರ್‌ ಟ್ರಾಲಿ ಇನ್‌ಸ್ಪೆಕ್ಷನ್‌ ಕೈಗೊಂಡಿರುವ ಅಧಿಕಾರಿಗಳು ಟ್ರ್ಯಾಕ್‌ ಪರಿಶೀಲನೆ ಮಾಡಿದರು. ರೈಲಿನ ವೇಗ, ತಿರುವುಗಳಲ್ಲಿ ಸಂಚಾರ, ನಿಲ್ದಾಣಗಳಲ್ಲಿ ನಿಲ್ಲುವ ರೀತಿ, ಸಿಗ್ನಲಿಂಗ್ ಸಿಸ್ಟಂ ಬಗ್ಗೆ ತಪಾಸಣೆ ನಡೆಯಲಿದೆ.

ಆರ್‌ವಿ ರಸ್ತೆ - ಬೊಮ್ಮಸಂದ್ರ ನಡುವಿನ 18.8 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಬರಲಿವೆ. ಈ ಮಾರ್ಗ ದಕ್ಷಿಣ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವ್ಯಾಪಿಸಿದೆ. ಜತೆಗೆ ಆರ್.ವಿ.ರಸ್ತೆ ಬಳಿ ಹಸಿರು ಮಾರ್ಗದ ಜತೆ ಸಂಪರ್ಕ ಹೊಂದಿರುವುದರಿಂದ ಈ ಮಾರ್ಗವು ದಕ್ಷಿಣ ಬೆಂಗಳೂರು ಜನರನ್ನು ನಗರ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

ಇನ್ನು ವಾಣಿಜ್ಯ ಸಂಚಾರ ಆರಂಭಿಸಲು ಅಗತ್ಯವಿರುವ 4 ನೇ ರೈಲು ಆಗಸ್ಟ್‌ ಮೊದಲ ವಾರ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಹಳದಿ ಮಾರ್ಗದ ರೈಲಿನ ಸಿಗ್ನಿಲಿಂಗ್‌, ತೂಕ ಸಾಮರ್ಥ್ಯ ಪರೀಕ್ಷೆ ನಡೆಸಿ ಆಗಸ್ಟ್‌ 3ನೇ ವಾರ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. 25 ನಿಮಿಷದ ಅಂತರದಲ್ಲಿ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ. 

PREV
Read more Articles on

Latest Stories

ಸಣ್ಣ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಜಿಎಸ್ಟಿ ಮನ್ನಾ ಭಾಗ್ಯ
ಸೆ.22ರಿಂದ ಮತ್ತೆ ಮರು ಜಾತಿಗಣತಿ
ಮಹದಾಯಿಗೆ ಅನುಮತಿ ರದ್ದು ದ್ರೋಹ: ಸಿಎಂ ಕಿಡಿ