ಎಟಿಎಂನಲ್ಲಿ ಸಿಕ್ಕ ಹಣ: ಠಾಣೆಗೆ ತಲುಪಿಸಿದ ಯುವಕ!

Published : Jul 08, 2024, 10:04 AM IST
Money

ಸಾರಾಂಶ

ಹಣ ಡ್ರಾ ಮಾಡಲು ಬಂದಾಗ ಎಟಿಎಂನಲ್ಲಿ ಸಿಕ್ಕಿದಂತಹ ಹಣ ಪೊಲೀಸ್ ಠಾಣೆಗೆ ತಂದು ಗ್ರಾಹಕರಿಗೆ ತಲುಪಿಸುವಂತೆ ಪೊಲೀಸರಿಗೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಚಿಗತಾಪುರ ಗ್ರಾಮದ ತೌಶಿಪ್ ಪಾತ್ರರಾಗಿದ್ದಾರೆ.

ಹನೂರು :  ಹಣ ಡ್ರಾ ಮಾಡಲು ಬಂದಾಗ ಎಟಿಎಂನಲ್ಲಿ ಸಿಕ್ಕಿದಂತಹ ಹಣ ಪೊಲೀಸ್ ಠಾಣೆಗೆ ತಂದು ಗ್ರಾಹಕರಿಗೆ ತಲುಪಿಸುವಂತೆ ಪೊಲೀಸರಿಗೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಚಿಗತಾಪುರ ಗ್ರಾಮದ ತೌಶಿಪ್ ಪಾತ್ರರಾಗಿದ್ದಾರೆ.

ಹನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ಬರುವ ಕಾವೇರಿ ಗ್ರಾಮೀಣ ಬ್ಯಾಂಕ್ ಎಟಿಎಂನಲ್ಲಿ ಯಾರೋ ಹಣ ಡ್ರಾ ಮಾಡಲು ಬಂದವರು ಎಟಿಎಂ ಯಂತ್ರದಲ್ಲೇ 5500 ರು. ಹಣವನ್ನು ಬಿಟ್ಟು ಹೋಗಿದ್ದಾರೆ. ಹಣ ಡ್ರಾ ಮಾಡಲು ಹೋದಾಗ ಚಿಗತಾಪುರ ಗ್ರಾಮದ ತೌಶಿಪ್ ಯುವಕ ಸದರಿ ಹಣವನ್ನು ಪೊಲೀಸ್ ಠಾಣೆಗೆ ತಂದು ಹಣ ಕಳೆದುಕೊಂಡವರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.

ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸರು:

ಇತ್ತೀಚಿನ ದಿನಗಳಲ್ಲಿ ಎಟಿಎಂಗಳಲ್ಲಿ ಅವಿದ್ಯಾವಂತರನ್ನು ವಂಚಿಸಿ ಹೋಗುತ್ತಿರುವ ಘಟನೆಗಳು ನಡೆಯುತ್ತಿರುವ ದಿನಗಳಲ್ಲಿ ಚಿಗತಾಪುರ ಗ್ರಾಮದ ಯುವಕ ತೌಸಿಪ್ ಎಟಿಎಂನಲ್ಲಿ ಡ್ರಾ ಮಾಡಲು ಹೋದಾಗ ಸಿಕ್ಕಂತಹ ಹಣವನ್ನು ಪೊಲೀಸ್ ಠಾಣೆಗೆ ತಂದು ಹಣ ಕಳೆದುಕೊಂಡವರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ. ಇವರ ಪ್ರಮಾಣಿಕತೆಗೆ ಪೊಲೀಸ್‌ ಇಲಾಖೆ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನವಿ:

ಎಟಿಎಂ ಯಂತ್ರದಲ್ಲಿ ಹಣ ಡ್ರಾ ಮಾಡಲು ಹೋಗಿ ಸಾರ್ವಜನಿಕರು ಕಳೆದುಕೊಂಡಿರುವ ಬಗ್ಗೆ ಬ್ಯಾಂಕ್‌ನಲ್ಲಿ ಡ್ರಾ ಮಾಡಿರುವ ಬಗ್ಗೆ ಸೂಕ್ತ ದಾಖಲಾತಿಗಳನ್ನು ನೀಡಿ ಹನೂರು ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ..

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ