ರೋಡ್‌ಶೋ ಅಗತ್ಯವಿಲ್ಲ, ಜೀವ ಮುಖ್ಯ : ಗಂಭೀರ್‌

Published : Jun 06, 2025, 08:00 AM IST
Gautam Gambhir and RCB fans

ಸಾರಾಂಶ

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತಕ್ಕೆ ಭಾರತದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಆಘಾತ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಮುಂದೆ ಯಾವತ್ತೂ ನಡೆಯಬಾರದು ಎಂದಿದ್ದಾರೆ.

ಮುಂಬೈ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತಕ್ಕೆ ಭಾರತದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಆಘಾತ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಮುಂದೆ ಯಾವತ್ತೂ ನಡೆಯಬಾರದು ಎಂದಿದ್ದಾರೆ.

ಭಾರತ ಟೆಸ್ಟ್‌ ತಂಡದ ನೂತನ ನಾಯಕ ಶುಭ್‌ಮನ್‌ ಗಿಲ್‌ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಜವಾಬ್ದಾರಿಯುತ ಮನುಷ್ಯರಾಗಬೇಕು. ಇಂತಹ ರೋಡ್‌ಶೋಗಳ ಬಗ್ಗೆ ನನಗೆ ವಿರೋಧವಿದೆ. 

ನಮಗೆ ಇಲ್ಲಿ ಜನರ ಜೀವ ಮುಖ್ಯ. ಸಂಭ್ರಮಾಚರಣೆ ನಡೆಸುವುದಿದ್ದರೆ ಒಳಾಂಗಣ ಕ್ರೀಡಾಂಗಣಗಳಲ್ಲಿ ಆಯೋಜಿಸಬೇಕು’ ಎಂದಿದ್ದಾರೆ. ಸೂಕ್ತ ಸಿದ್ಧತೆ ನಡೆಸಲು ಆಗದಿದ್ದರೆ ನಾವು ರೋಡ್‌ಶೋ ನಡೆಬಾರದು. ಪ್ರೇಕ್ಷಕರು ತುಂಬಾ ಉತ್ಸಾಹದಲ್ಲಿರುತ್ತಾರೆ. ಹೀಗಾಗಿ ಎಲ್ಲಾ ಆಯಾಮಗಳಲ್ಲೂ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಅಗತ್ಯವಿದೆ’ ಎಂದಿದ್ದಾರೆ.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ