ಮೇ1ರಿಂದ ಜೋಗ ವೀಕ್ಷಣೆಗೆ ಮುಕ್ತ ಪ್ರವೇಶ : ಡೀಸಿ ಆದೇಶ

Published : Apr 28, 2025, 11:19 AM IST
Jog falls

ಸಾರಾಂಶ

ಜೋಗ ಜಲಪಾತದ ಪ್ರವೇಶದ್ವಾರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್‌ 30ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ಮೇ 1ರಿಂದ ಪುನರಾರಂಭಿಸಲಾಗುತ್ತಿದೆ.

ಶಿವಮೊಗ್ಗ :  ಜೋಗ ಜಲಪಾತದ ಪ್ರವೇಶದ್ವಾರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್‌ 30ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ಮೇ 1ರಿಂದ ಪುನರಾರಂಭಿಸಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ವಿಶ್ವಪ್ರಸಿದ್ಧ ಜೋಗ ಜಲಪಾತ, ಬರೋಬ್ಬರಿ ನಾಲ್ಕು ತಿಂಗಳ ಕಾಮಗಾರಿ ಮುಕ್ತಾಯದ ನಂತರ ಮೇ 1ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಕಾಮಗಾರಿ ನಡೆಯುತ್ತಿದ್ದು, ಈ ಕಾರಣದಿಂದ ಜನವರಿ 1ರಿಂದ ಮಾರ್ಚ್ 30ರ ತನಕ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರಿಗೆ ಪ್ರವೇಶ ಬಂದ್ ಮಾಡಲಾಗಿತ್ತು. ಜೋಗದಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಗೋಪುರ, ಪಾರ್ಕಿಂಗ್, ಪ್ರವೇಶದ್ವಾರ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಜೋಗ ಜಲಪಾತ ವೀಕ್ಷಿಸಲು ಪ್ರವೇಶ ಶುಲ್ಕ ವ್ಯಕ್ತಿಗೆ 20 ರು. ಇದರ ಜೊತೆಗೆ ಪಾರ್ಕಿಂಗ್‌ ದರವನ್ನು ಏರಿಸಲಾಗಿದೆ. ಜಲಪಾತವನ್ನು ಪ್ರವಾಸಿಗರು 2 ಗಂಟೆಗಳ ಕಾಲ ಮಾತ್ರ ವೀಕ್ಷಿಸಿ, ಹಿಂದಿರುಗಬೇಕು. ಈ ಹಿಂದೆ ಗಂಟೆಗಟ್ಟಲೆ ಜಲಪಾತವನ್ನು ವೀಕ್ಷಿಸುವ ಅವಕಾಶವಿತ್ತು. ಆದರೆ ಈಗ 2 ಗಂಟೆ ಮಾತ್ರ ಸೀಮಿತಗೊಳಿಸಲಾಗಿದೆ.

PREV

Recommended Stories

ಹಬ್ಬಗಳಲ್ಲಿ ಭಾವೈಕ್ಯತೆ-ಸಾಮರಸ್ಯ ಅಗತ್ಯ
ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್‌ ದುಷ್ಪರಿಣಾಮಗಳ ಜನಜಾಗೃತಿ