ರನ್‌ ಅಡಿಕ್ಟ್ಸ್‌ಸಂಸ್ಥೆಯಿಂದ 7ನೇ ವಾರ್ಷಿಕ ಓಟದಲ್ಲಿ 2100 ಕ್ಕೂ ಅಧಿಕ ನಾಗರಿಕರ ಭಾಗಿ, ಸಂಭ್ರಮ

Published : Jun 16, 2025, 08:34 AM IST
50 year old man smoking cigarettes in 42km Marathon

ಸಾರಾಂಶ

ನಗರದ ರಾಜರಾಜೇಶ್ವರಿ ನಗರದಲ್ಲಿ ‘ರನ್‌ ಅಡಿಕ್ಟ್ಸ್‌’ ಸಂಸ್ಥೆಯಿಂದ ಭಾನುವಾರ ಬೆಳಿಗ್ಗೆ ನಡೆದ 7ನೇ ವಾರ್ಷಿಕ ಓಟದಲ್ಲಿ 2100 ಕ್ಕೂ ಅಧಿಕ ನಾಗರಿಕರು ಪಾಲ್ಗೊಂಡು ಸಂಭ್ರಮಿಸಿದರು.

 ಬೆಂಗಳೂರು :   ನಗರದ ರಾಜರಾಜೇಶ್ವರಿ ನಗರದಲ್ಲಿ ‘ರನ್‌ ಅಡಿಕ್ಟ್ಸ್‌’ ಸಂಸ್ಥೆಯಿಂದ ಭಾನುವಾರ ಬೆಳಿಗ್ಗೆ ನಡೆದ 7ನೇ ವಾರ್ಷಿಕ ಓಟದಲ್ಲಿ 2100 ಕ್ಕೂ ಅಧಿಕ ನಾಗರಿಕರು ಪಾಲ್ಗೊಂಡು ಸಂಭ್ರಮಿಸಿದರು.

ಬೆಳಗ್ಗೆ 5.30ಕ್ಕೆ ಟಿ.ಎನ್‌. ಬಾಲಕೃಷ್ಣ ರಂಗಮಂದಿರದಲ್ಲಿ ಸೇರಿದ ಜನತೆ ಅಲ್ಲಿ ಝುಂಬಾ ಲಘು ವ್ಯಾಯಾಮ ಕೈಗೊಂಡರು. ಬಳಿಕ ಓಟ ಪ್ರಾರಂಭಿಸಿದರು. 10, 5 ಹಾಗೂ 3 ಕಿ.ಮೀ ವಿಭಾಗದಲ್ಲಿ ಓಟ ನಡೆಯಿತು. ಬಿಡಿಎ ಕಾಂಪ್ಲೆಕ್ಸ್, ಶಕ್ತಿ ಹಿಲ್‌ ಸೆಂಟರ್‌, ಐಡಿಯಲ್‌ ಹೋಮ್ಸ್‌, ಸ್ಪರ್ಶ್‌ ಹಾಸ್ಪಿಟಲ್‌ ಮಾರ್ಗವಾಗಿ ನಡೆದ ಓಟ ಬಳಿಕ ರಂಗಮಂದಿರದಲ್ಲಿ ಮುಕ್ತಾಯವಾಯಿತು.

ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಓಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಯಾವುದೇ ಸಮಯದ ನಿಗದಿ, ಬಹುಮಾನ ಗೆಲ್ಲುವ ಧಾವಂತ ಇರಲಿಲ್ಲ. ಹೀಗಾಗಿ ಬಹುತೇಕರು ಕುಟುಂಬ ಸಮೇತ ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳಿಂದ ಹಿಡಿದು ವೃದ್ಧರವರೆಗಿನ ವಯೋಮಾನದವರು ಓಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಓಟಗಾರರಿಗೆ ನೆರವಾಗಲು ರನ್‌ ಅಡಿಕ್ಟ್ಸ್‌ನಿಂದ ಸುಮಾರು 200 ಸ್ವಯಂ ಸೇವಕರು ನಿಯೋಜನೆ ಆಗಿದ್ದರು.

ಒಂಬತ್ತು ವರ್ಷದಿಂದ ರನ್‌ ಅಡಿಕ್ಟ್ಸ್ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣ ಬಲವರ್ಧನೆಯ ಉದ್ದೇಶದಿಂದ ರನ್‌ ಅಡಿಕ್ಟ್ಸ್‌ ಬೆಂಗಳೂರು ಸಂಸ್ಥೆ ಕಳೆದ ಏಳು ವರ್ಷದಿಂದ ಈ ಓಟ ಆಯೋಜಿಸಲಾಗುತ್ತಿದೆ. ಕಂಪನಿಗಳು ನೀಡುವ ಸಾಮಾಜಿಕ ಹೊಣೆಗಾರಿಕೆ ನಿಧಿ, ದೇಣಿಗೆಗಳನ್ನು ವಿದ್ಯಾರ್ಥಿಗಳಿಗೆ ವಿನಿಯೋಗಿಸಲಾಗುತ್ತದೆ. ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸ, ಶಾಲೆಗಳ ಮೂಲಸೌಲಭ್ಯ ಕಲ್ಪಿಸುವ ಕೆಲಸ ಹಾಗೂ ಸ್ಕಾಲರ್‌ಶಿಪ್‌ನ್ನು ನೀಡಲಾಗುತ್ತಿದೆ ಎಂದು ರನ್‌ ಅಡಿಕ್ಟ್ಸ್ ಸಂಸ್ಥೆಯ ಶ್ರೀನಿವಾಸ್ ತಿಳಿಸಿದರು.

PREV
Read more Articles on

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ