ಪಿಯು: 600ಕ್ಕೆ 683, ಹಿಂದಿಯಲ್ಲಿ 100ಕ್ಕೆ 101 ಅಂಕ!

Published : Apr 11, 2026, 12:57 PM IST
Karnataka PUC

ಸಾರಾಂಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶುಕ್ರವಾರ ಪ್ರಕಟಿಸಿದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಗರಿಷ್ಠಕ್ಕಿಂತ ಹೆಚ್ಚು ಅಂಕಗಳನ್ನು ನೀಡಿ ಎಡವಟ್ಟು ಮಾಡಿದೆ.

  ಬೆಂಗಳೂರು :  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶುಕ್ರವಾರ ಪ್ರಕಟಿಸಿದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಗರಿಷ್ಠಕ್ಕಿಂತ ಹೆಚ್ಚು ಅಂಕಗಳನ್ನು ನೀಡಿ ಎಡವಟ್ಟು ಮಾಡಿದೆ.

ವಿದ್ಯಾರ್ಥಿಯೊಬ್ಬರಿಗೆ 683 ಅಂಕಗಳನ್ನು ನೀಡಿದೆ.

ದ್ವಿತೀಯ ಪಿಯುಸಿಯಲ್ಲಿ ಆರು ವಿಷಯಗಳಿಗೆ ತಲಾ ನೂರರಂತೆ 600 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಮಂಡಳಿಯು ವಿದ್ಯಾರ್ಥಿಯೊಬ್ಬರಿಗೆ 683 ಅಂಕಗಳನ್ನು ನೀಡಿದೆ. ಮತ್ತೊಬ್ಬ ವಿದ್ಯಾರ್ಥಿಗೆ ಗರಿಷ್ಠ 100 ಅಂಕಗಳಿಗೆ ನಡೆಯುವ ಹಿಂದಿ ಪರೀಕ್ಷೆಯಲ್ಲಿ 101 ಅಂಕ ನೀಡಲಾಗಿದೆ. ವೆಬ್‌ಸೈಟ್‌ನಲ್ಲಿ ತಮಗೆ ನೀಡಿರುವ ಫಲಿತಾಂಶ ನೋಡಿ ಅಚ್ಚರಿಗೊಂಡ ವಿದ್ಯಾರ್ಥಿಗಳು ತಕ್ಷಣ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಎಚ್ಚೆತ್ತ ಅಧಿಕಾರಿಗಳು ಆ ವಿದ್ಯಾರ್ಥಿಗಳ ಫಲಿತಾಂಶವನ್ನು ಮತ್ತೊಮ್ಮೆ ಪರಿಶೀಲಿಸಿ ತಂತ್ರಾಂಶದಲ್ಲಿ ಸರಿಯಾದ ಫಲಿತಾಂಶ ದಾಖಲಿಸಿದ್ದಾರೆ.

ಎಡವಟ್ಟಿಗೆ ವಿಷಾದ:

ಈ ಲೋಪಕ್ಕೆ ತಾಂತ್ರಿಕ ದೋಷದ ಲೇಪನ ಹಚ್ಚಿರುವ ಅಧಿಕಾರಿಗಳು ಬಳಿಕ ಲೋಪ ಸರಿಪಡಿಸಿ ವಿದ್ಯಾರ್ಥಿಗಳಿಗೆ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ್ದಾರೆ. ಜೊತೆಗೆ ಆಗಿರುವ ತಪ್ಪಿಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. 2024 ಮತ್ತು 2025ನೇ ಸಾಲಿನ ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಇಲ್ಲದ ಕಾರಣ ಫಲಿತಾಂಶ ನೀಡುವಾಗ ಅವರು ಪಡೆದ 80 ಅಂಕಗಳನ್ನು 100 ಅಂಕಗಳಿಗೆ ಪರಿವರ್ತಿಸಿ ನೀಡಬೇಕಾಗುತ್ತದೆ. ಈ ಸಂಬಂಧ ಪ್ರೋಗ್ರಾಮಿಂಗ್‌ ಮಾಡುವಾಗ ತಾಂತ್ರಿಕ ದೋಷಗಳು ಉಂಟಾಗಿ ಫಲಿತಾಂಶದಲ್ಲಿ ಲೋಪವಾಗಿದೆ. ಆ ತಪ್ಪು ಸರಿಪಡಿಸಿ ಪರಿಷ್ಕೃತ ಫಲಿತಾಂಶ ನೀಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಿ: ತುಷಾರ್‌
ಎಸಿ ಕೋರ್ಟಲ್ಲಿ ಕೇಸ್‌ ವಿಲೇವಾರಿ ಬಾಕಿ : ಕೃಷ್ಣ ಕಿಡಿ