ಪಾಕಿಸ್ತಾನವನ್ನು ಹೊಗಳಿ ಭಾರತದ ಬಗ್ಗೆ ತೆಗಳಿ ರಾಹುಲ್‌ ಹೊಸ ವಿವಾದ

Published : Nov 21, 2026, 11:41 AM IST
Rahul Gandhi

ಸಾರಾಂಶ

ವಿದೇಶಿ ನೆಲದಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಮತ್ತೆ ಪ್ರಸ್ತಾಪಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಪಾಕಿಸ್ತಾನವು ಅಮೆರಿಕ-ಇರಾನ್ ಶಾಂತಿ ಮಾತುಕತೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಸ್ತಾಪಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಶಿಕಾಗೋ/ನವದೆಹಲಿ : ವಿದೇಶಿ ನೆಲದಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಮತ್ತೆ ಪ್ರಸ್ತಾಪಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಪಾಕಿಸ್ತಾನವು ಅಮೆರಿಕ-ಇರಾನ್ ಶಾಂತಿ ಮಾತುಕತೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಸ್ತಾಪಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಜಾಗತಿಕ ವ್ಯವಹಾರಗಳಲ್ಲಿ ಭಾರತ ಇಂದು ಸೈಡ್ ಪ್ಲೇಯರ್ ಆಗಿಬಿಟ್ಟಿದೆ’ ಎಂದು ಮೋದಿಗೆ ಕುಟುಕಿದ್ದಾರೆ.

ಅವರ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ, ರಾಹುಲ್‌ ಅವರನ್ನು ‘ಪಾಕಿಸ್ತಾನದ ಫ್ಯಾನ್ ಬಾಯ್’ ಮತ್ತು ‘ಪಾಕಿಸ್ತಾನದ ಚಿಯರ್‌ಲೀಡರ್’ ಎಂದು ಜರಿದಿದೆ.

ರಾಹುಲ್‌ ಹೇಳಿದ್ದೇನು?:

ಶಿಕಾಗೋ ವಿವಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತಕ್ಕೆ ತನ್ನದೇ ಆದ ಶಕ್ತಿಯಿದೆ. ಹಿಂದೆಲ್ಲಾ ಭಾರತ ಜಾಗತಿಕ ವಿಚಾರಗಳಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಭಾರತ ಜಾಗತಿಕ ರಾಜಕೀಯದಲ್ಲಿ ಕೇವಲ ‘ಸೈಡ್ ಪ್ಲೇಯರ್’ ಆಗಿ ಬದಲಾಗಿದೆ. ಆದರೆ ಇದೇ ವೇಳೆ ನೆರೆಯ ಪಾಕಿಸ್ತಾನ, ಅಮೆರಿಕ ಮತ್ತು ಇರಾನ್‌ನಂತಹ ಪ್ರಮುಖ ದೇಶಗಳೊಂದಿಗೆ ಮಧ್ಯಸ್ಥಿಕೆ ಮಾಡುತ್ತಿದೆ’ ಎಂದು ಹೇಳಿದರು.

ಮಾತುಕತೆ ಅಸಾಧ್ಯ:

ಆದರೆ ಇದೇ ವೇಳೆ, ‘ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸದ ಹೊರತು ಪಾಕ್‌ ಜತೆ ಯಾವುದೇ ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನೂ ರಾಹುಲ್‌ ನೀಡಿದರು.

ಬಿಜೆಪಿ ಕಿಡಿ:

ರಾಹುಲ್ ಟೀಕೆಗೆ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪ್ರತಿಕ್ರಿಯಿಸಿ, ‘ರಾಹುಲ್ ಗಾಂಧಿ ಅವರ ಮಾತುಗಳು ಅಕ್ಷಮ್ಯ. ಅವರು ಪಾಕಿಸ್ತಾನದ ಫ್ಯಾನ್‌ ಬಾಯ್‌ ರೀತಿ, ಚಿಯರ್‌ ಲೀಡರ್‌ನಂತೆ ಮಾತನಾಡುತ್ತಿದ್ದಾರೆ. ಅವರಿಗೆ ಜಾಗತಿಕ ರಾಜಕೀಯದ ಬಗ್ಗೆ ಎಷ್ಟು ಅಜ್ಞಾನವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಮೋದಿ ನೇತೃತ್ವದಲ್ಲಿ ಭಾರತ ಇಂದು ಜಗತ್ತಿನ ಪ್ರಮುಖ ಶಕ್ತಿಯಾಗಿ ಬೆಳೆದಿದೆ, ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗುತ್ತಿಲ್ಲ’ ಎಂದು ಕುಟುಕಿದ್ದಾರೆ.

ಪಾಕ್‌ಗೆ ರಾಹುಲ್‌ ಚಿಯರ್‌ ಲೀಡರ್‌

ರಾಹುಲ್ ಗಾಂಧಿ ಅವರ ಮಾತುಗಳು ಅಕ್ಷಮ್ಯ. ಅವರು ಪಾಕಿಸ್ತಾನದ ಫ್ಯಾನ್‌ ಬಾಯ್‌ ರೀತಿ, ಚಿಯರ್‌ ಲೀಡರ್‌ನಂತೆ ಮಾತನಾಡುತ್ತಿದ್ದಾರೆ. ಅವರಿಗೆ ಜಾಗತಿಕ ರಾಜಕೀಯದ ಬಗ್ಗೆ ಎಷ್ಟು ಅಜ್ಞಾನವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.

- ಬಿಜೆಪಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬಸವಣ್ಣಗೆ ಅಪಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ: ಡಿಕೆ
ಬಸವಣ್ಣ ಅಪಮಾನ ವಿರುದ್ಧ ಭುಗಿಲೆದ್ದ ಆಕ್ರೋಶ