ಮೋದಿಯವರು ಈ ದೇಶಕ್ಕೆ ಹಿಡಿದಿರುವ ಶನಿ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಅದಕ್ಕಾಗಿ ಜೂನ್ 4ಕ್ಕೆ ನಾವು ಕಾಯುತ್ತಿದ್ದೇವೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶ್ರೀನಿವಾಸಪುರ : ಮೋದಿಯವರು ಈ ದೇಶಕ್ಕೆ ಹಿಡಿದಿರುವ ಶನಿ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಅದಕ್ಕಾಗಿ ಜೂನ್ 4ಕ್ಕೆ ನಾವು ಕಾಯುತ್ತಿದ್ದೇವೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಯಲ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಭಾಷಣ ಮಾಡಿ, ಮೋದಿ ವಿರುದ್ಧ ಹರಿಹಾಯ್ದರು. ಈ ಹಿಂದೆ ಇಂದಿರಾಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತಿದ್ದಾರೆ. ಇಂದಿರಾ ಗಾಂಧಿಯವರು ಎಲ್ಲಾ ಜಾತಿ-ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಆದರೆ, ಮೋದಿಯವರು ಬರೀ ಸುಳ್ಳನ್ನೇ ಹೇಳುತ್ತಾರೆ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಈ ಪ್ರಪಂಚದಲ್ಲಿಯೇ ನೋಡಿಲ್ಲ ಎಂದರು.
ಎಚ್‌ಡಿಕೆ ಹರಿಶ್ಚಂದ್ರನ ಅವತಾರ: ಮಾಜಿ ಸ್ಪೀಕರ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧವೂ ರಮೇಶ್ ಕುಮಾರ್ ಹರಿಹಾಯ್ದಿದ್ದಾರೆ. ಸತ್ಯಹರಿಶ್ಚಂದ್ರನ ಮರು ಅವತಾರವೇ ಕುಮಾರಸ್ವಾಮಿ. ಇನ್ನು, ದೇವೇಗೌಡರ ನೆರಳಿಗೆ ಹೋಗಿ ಚೆನ್ನಾಗಿ ಬದುಕಿರುವವರು ಯಾರೂ ಇಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಪುತ್ರ, ಮೊಮ್ಮಗ, ಅಳಿಯ ಸೇರಿ ಕುಟುಂಬದ ಮೂರು ಸೀಟುಗಳನ್ನು ಅವರೇ ಪಡೆದುಕೊಂಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು.