7ನೇ ತರಗತಿ ಕೇಂದ್ರೀಯ ಪಠ್ಯದಲ್ಲಿ ರಾಣಿ ಅಬ್ಬಕ್ಕನ ಕಥೆ - ದೇಶಭಕ್ತಿ ಸಾರುವ ಪಾಠ, ಪದ್ಯಗಳ ಸೇರ್ಪಡೆ

Published : Apr 12, 2025, 08:14 AM IST
Abbakka

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅಡಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ), 7 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವಿ ಹೆಸರಿನ ಹೊಸ ಇಂಗ್ಲಿಷ್‌ ಪುಸ್ತಕ ಪರಿಚಯಿಸಿದೆ. ಅದರಲ್ಲಿ ಕರ್ನಾಟಕದ ರಾಣಿ ಅಬ್ಬಕ್ಕಳ ಗ್ರಾಫಿಕ್ ಕಥೆಗಳನ್ನು ಸೇರಿಸಲಾಗಿದೆ.

 ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅಡಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ), 7 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವಿ ಹೆಸರಿನ ಹೊಸ ಇಂಗ್ಲಿಷ್‌ ಪುಸ್ತಕ ಪರಿಚಯಿಸಿದೆ. ಅದರಲ್ಲಿ ಕರ್ನಾಟಕದ ರಾಣಿ ಅಬ್ಬಕ್ಕಳ ಗ್ರಾಫಿಕ್ ಕಥೆಗಳನ್ನು ಸೇರಿಸಲಾಗಿದೆ.

ಸಮಗ್ರ ಭಾಷೆಯನ್ನು ಕಲಿಯುವ, ಆಲಿಸುವ, ಬರೆಯುವ, ಓದುವ , ಮಾತನಾಡುವ ಕೌಶಲ್ಯಗಳನ್ನು ಹೆಚ್ಚಿಸುವ ಪಠ್ಯೇತರ ಚಟುವಟಿಕೆಗಳನ್ನು ಈ ಪುಸ್ತಕ ಒಳಗೊಂಡಿದೆ. ‘ಧೈರ್ಯಶಾಲಿ ಹೃದಯಗಳಿಗೆ ನಮನ’ ಎನ್ನುವ ಯೂನಿಟ್‌ನಲ್ಲಿ ದೇಶದ ಸೈನಿಕರನ್ನು ಗೌರವಿಸುವ ‘ಮೈ ಡಿಯರ್ ಸೋಲ್ಜರ್ಸ್‌ ಕವಿತೆ’ ಇದೆ ಮತ್ತು ಧೈರ್ಯ ಮತ್ತು ದೇಶಭಕ್ತಿಯನ್ನು ಸಾರಿದ ಉಳ್ಳಾಲದ ರಾಣಿ ಅಬ್ಬಕ್ಕನ ಕುರಿತಾದ ಒಂದು ಗ್ರಾಫಿಕ್ ಕಥೆಯನ್ನು ಸೇರಿಸಲಾಗಿದೆ.

ಇದಲ್ಲದೆ, ರವೀಂದ್ರ ನಾಥ್‌ ಟ್ಯಾಗೋರ್, ರಸ್ಕಿನ್‌ ಬಾಂಡ್, ಹಗ್‌ ಲಾಫ್ಟಿಂಗ್, ಎಲಿಜಾ ಕುಕ್, ಹೆಲೆನ್ ಕೆಲ್ಲರ್‌ ಅವರ ಬರಹಗಳು ಇವೆ. ಇದರ ಜೊತೆಗೆ ಪರಿಸರ ಜಾಗೃತಿ ಮತ್ತು ದೇಶ ಪ್ರೇಮದ ಕಥೆಗಳನ್ನು ಕೂಡ ಪಠ್ಯದಲ್ಲಿ ಸೇರಿಸಲಾಗಿದೆ.

ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ:

ರಾಣಿ ಅಬ್ಬಕ್ಕ ದೇವಿ ಕರ್ನಾಟಕದ ಕರಾವಳಿಯ ಉಳ್ಳಾಲದವರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳೆ. ಅಬ್ಬಕ್ಕದೇವಿ ಉಳ್ಳಾಲದಲ್ಲಿ ಆಳ್ವಿಕೆ ಮಾಡುತ್ತಿದ್ದರು. 1555-1568 ರವರೆಗೆ ತನ್ನ ರಾಜ್ಯದಲ್ಲಿ ಪೋರ್ಚುಗೀಸರ ದಾಳಿಯನ್ನು ಹಿಮ್ಮೆಟ್ಟಿಸಿದರು. ಉಳ್ಳಾಲದ ಮೇಲೆ ಆಕ್ರಮಣ ಮಾಡಿದಾಗ ಪ್ರಬಲ ಪೋರ್ಚುಗೀಸ್‌ ಪಡೆಯ ವಿರುದ್ಧ ಹೋರಾಡಿದರು. ಪೋರ್ಚುಗೀಸರು ಸೆರೆಮನೆಗೆ ಕಳುಹಿಸಿದಾಗಲೂ ಜೈಲಿನಲ್ಲಿಯೂ ಪೋರ್ಚುಗೀಸರ ವಿರುದ್ಧ ಬಂಡಾಯ ಎದ್ದು ಹೋರಾಡಿ ಹುತಾತ್ಮರಾದರು ಎಂದು ಇತಿಹಾಸ ಹೇಳುತ್ತದೆ.

PREV

Recommended Stories

ಹೈಕೋರ್ಟ್‌ ತರಾಟೆ ಮಣಿದು ರಾಜ್ಯ ಸಾರಿಗೆ ಮುಷ್ಕರ ವಾಪಸ್‌
ಮದರಸಾ ಬೋಧಕರಿಗೆ ಕನ್ನಡ ಕಲಿಕೆ ಅಭಿಯಾನ ಶುರು