ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರ ಸೆ.1ರಿಂದಲೇ ಜಾರಿಗೆ ಬಂದಿದೆ. ಸುಮಾರು 40 ಸೇವೆಗಳ ದರ ಹೆಚ್ಚಳಗೊಂಡು ಪರಿಷ್ಕರಣೆ ಆಗಿದೆ. ಈ ಹಿಂದೆ, 2010ರ ನವೆಂಬರ್ ನಲ್ಲಿ ಸೇವೆಗಳ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ 15 ವರ್ಷದ ಬಳಿಕ ಸೇವೆಗಳ ದರ ಪರಿಷ್ಕರಣೆಗೊಂಡಿದೆ.
ಪರಿಷ್ಕರಣೆಗೊಂಡ ಸೇವೆಗಳು:
ಚಿಕ್ಕರಥೋತ್ಸವ ಪರಿಷ್ಕೃತ ದರ ರು.12,000, ಚಂದ್ರಮಂಡಲ ಉತ್ಸವ ರು.9,500, ಹೂವಿನ ತೇರಿನ ಉತ್ಸವ ರು.8,700, ರಾಜಾಂಗಣದಲ್ಲಿ ಶೇಷ ವಾಹನಯುಕ್ತ ಭಂಡಿ ಉತ್ಸವ ರು.4,500, ದೀಪಾರಾಧನೆಯುಕ್ತ ಪಾಲಕಿ ಉತ್ಸವ ರು.5,600, ಪಾಲಕಿ ಉತ್ಸವಯುಕ್ತ ಮಹಾಪೂಜೆ ರು.4,000, ಇಡೀ ದಿನದ ಸಪರಿವಾರ ಸೇವೆ ರು.4,050, ಪವಮಾನಯುಕ್ತ ಪಂಚಾಮೃತ ಅಭಿಷೇಕ ರು.160, ಕಲಶ ಪೂಜಾಯುಕ್ತ ಪಂಚಾಮೃತ ಅಭಿಷೇಕ ರು.160, ಪಂಚಾಮೃತಾಭಿಷೇಕ ರು.100, ರುದ್ರಾಭಿಷೇಕ ರು.100, ಶೇಷ ಸೇವೆ (ಅಷ್ಟೋತ್ತರ ಸಹಿತ) ರು.160, ಹರಿವಾಣ ನೈವೇದ್ಯ ರು.125, ಕಾರ್ತಿಕ ಪೂಜೆ ರು.100, ಚಿತ್ರಾನ್ನ ಸಮರ್ಪಣೆ ರು.200, ಹಾಲು ಪಾಯಸ ರು.160, ಸಹಸ್ರನಾಮಾರ್ಚನೆ ರು.25, ಮೃಷ್ಟಾನ್ನ ಸಮರ್ಪಣೆ ರು.925, ರಾತ್ರಿ ಮಹಾಪೂಜೆಯುಕ್ತ ಪಾಲಕಿ ಉತ್ಸವ ರು.4,600, ಹರಕೆಗಳಾದ ನಾಗಪ್ರತಿಷ್ಠೆ ರು.500, ನಾಮಕರಣ ರು.250, ಅಶ್ಲೇಷ ಬಲಿ ರು.500, ಆಶ್ಲೇಷ ಬಲಿ ಉದ್ಯಾಪನೆ ರು.500, ಷಷ್ಠಿವೃತ ಉದ್ಯಾಪನೆ ರು.500, ಮಂಗಳ ಕಾರ್ಯಗಳಾದ ಉಪನಯನ (ಬ್ರಹ್ಮಪ್ರತಿಷ್ಠೆ) ರು.800, ಸತ್ಯನಾರಾಯಣ ಪೂಜೆ ರು.1000, ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಏಕದಶಾವಾರ. ರುದ್ರಾಭಿಷೇಕ ರು.120, ಪಂಚಾಮೃತಾಭಿಷೇಕ ರು.100, ಹರಿವಾಣ ನೈವೇದ್ಯ ರು.150, ಕಾರ್ತಿಕ ಪೂಜೆ ರು.100, ಸಹಸ್ರನಮಾರ್ಚನೆ ರು.20, ಶ್ರೀ ಕುಕ್ಕೆಲಿಂಗ ದೇವರ ಸನ್ನಿಧಿಯಲ್ಲಿ ಏಕದಶಾವಾರ ರುದ್ರಾಭಿಷೇಕ ರು.120, ತ್ರಿಮಧುರ ಸಮರ್ಪಣೆ ರು.50, ಕಾರ್ತಿಕ ಪೂಜೆ ರು.100, ಶ್ರೀ ಆದಿ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ರು.100, ರಂಗಪೂಜೆ ರು.850, ತ್ರಿಮಧುರ ಸಮರ್ಪಣೆ ರು.50, ಕಾರ್ತಿಕ ಪೂಜೆ ರು.100, ಹೊಸಳಿಗಮ್ಮನ ಸನ್ನಿಧಿಯಲ್ಲಿ ಪುರುಷರಾಯನಿಗರ ಒಂಟಿನೇಮ ರು.2,500, ಕಾಶಿಕಟ್ಟೆ ಗಣಪತಿ ದೇವರ ಸನ್ನಿಧಿಯಲ್ಲಿ ರಂಗಪೂಜೆ ರು.850, ಶ್ರೀ ಅಭಯ ಆಂಜನೇಯ ದೇವರ ಸನ್ನಿಧಿಯಲ್ಲಿ ಸತ್ಯನಾರಾಯಣ ಪೂಜೆ ರು.900.