ಆ.13ರಿಂದ ಆ.15ರವರೆಗೆ ಸಿಗ್ನಲಿಂಗ್‌ ಪರೀಕ್ಷೆ ನಡೆಯಲಿರುವ ಹಿನ್ನೆಲೆ ಹಸಿರು ಮೆಟ್ರೋ ವ್ಯತ್ಯಯ

Published : Aug 13, 2024, 11:34 AM IST
Namma metro

ಸಾರಾಂಶ

ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯ ನಾಗಸಂದ್ರ-ಮಾದಾವರ (ಬಿಐಇಸಿ) ವರೆಗಿನ ರೀಚ್-3ರ ವಿಸ್ತೃತ ಮಾರ್ಗದಲ್ಲಿ (3.7 ಕಿ.ಮೀ.) ಸಿಗ್ನಲಿಂಗ್‌ ಪರೀಕ್ಷೆ ಆ.13ರಿಂದ ಆ.15ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ   ರೈಲು ಸೇವೆ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರು :  ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯ ನಾಗಸಂದ್ರ-ಮಾದಾವರ (ಬಿಐಇಸಿ) ವರೆಗಿನ ರೀಚ್-3ರ ವಿಸ್ತೃತ ಮಾರ್ಗದಲ್ಲಿ (3.7 ಕಿ.ಮೀ.) ಸಿಗ್ನಲಿಂಗ್‌ ಪರೀಕ್ಷೆ ಆ.13ರಿಂದ ಆ.15ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣ ನಡುವೆ ರೈಲು ಸಂಚಾರದ ಪ್ರಾರಂಭ ಹಾಗೂ ಕೊನೆಯ ರೈಲು ಸೇವೆ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ.

ಆ.13ರಂದು ಕೊನೆಯ ರೈಲು ರಾತ್ರಿ 11ಕ್ಕೆ ಬದಲಾಗಿ 10ಕ್ಕೆ ಇರಲಿದೆ. ಆ. 14ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10ಕ್ಕೆ ಇರಲಿದೆ. ಆ.15ರಂದು ಬೆಳಗ್ಗೆ 5ರ ಬದಲು 6 ಕ್ಕೆ ಪ್ರಾರಂಭವಾಗಲಿದೆ.

ನಾಗಸಂದ್ರ ನಿಲ್ದಾಣದಿಂದ ಆ.13 ಮತ್ತು 14ರಂದು ಕೊನೆಯ ರೈಲು ಸೇವೆಯು ರಾತ್ರಿ 11.5 ಗಂಟೆಯ ಬದಲಾಗಿ 10 ಕ್ಕೆ ಕೊನೆಗೊಳ್ಳಲಿದೆ. ಆ.14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಶುರುವಾಗಲಿದೆ.

ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆ.13, 14ರಂದು ರಾತ್ರಿ 11.12 ಗಂಟೆವರೆಗೆ ಕೊನೆಯ ರೈಲು ಸೇವೆ ಇರಲಿದೆ. ಆ.14, 15ರಂದು ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇರಳೆ ಮಾರ್ಗದ ಮೆಟ್ರೋ ಸೇವೆ ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

34 ಕಿ.ಮೀ.ಗೆ ವಿಸ್ತರಣೆ

ನಾಗಸಂದ್ರ - ಮಾದಾವರ (ಬಿಐಇಸಿ) ವರೆಗಿನ ಸಿಗ್ನಲಿಂಗ್‌ ತಪಾಸಣೆ ಯಶಸ್ವಿಯಾದ ಬಳಿಕ ಮೆಟ್ರೋ ರೈಲು ಸುರಕ್ಷತಾ ಅಯುಕ್ತರ ತಂಡದಿಂದ ಅಂತಿಮ ಪರೀಕ್ಷೆ ನಡೆಯಲಿದೆ. ಬಳಿಕ ವಿಸ್ತರಣೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಇದರಿಂದ ಪ್ರಸ್ತುತ 30.32 ಕಿ.ಮೀ. ಇರುವ ಹಸಿರು ಮಾರ್ಗ ವಿಸ್ತರಣೆಯಿಂದ 34 ಕಿ.ಮೀ.ಗೆ ವಿಸ್ತರಣೆ ಆಗಲಿದೆ. ಕಳೆದ ಐದು ವರ್ಷದಿಂದ ಈ ಮಾರ್ಗದ ಕಾಮಗಾರಿ ವಿಳಂಬವಾಗಿ ಸಾಗಿತ್ತು. ಇದೀಗ ಜನಸಂಚಾರಕ್ಕೆ ಅಂತಿಮ ಹಂತದ ತಪಾಸಣೆಗಳು ನಡೆಯಲಿವೆ.

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ