ರಾಜ್ಯದಲ್ಲಿ 23 ವರ್ಷಗಳ ಬಳಿಕ ಅಖಿಲ ಭಾರತೀಯ ಸಭಾಧ್ಯಕ್ಷರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಸೆಪ್ಟೆಂಬರ್ 9 ಮತ್ತು 10ರಂದು ಸಮ್ಮೇಳನ ನಡೆಸಲಾಗುವುದು
ಬೆಂಗಳೂರು : ರಾಜ್ಯದಲ್ಲಿ 23 ವರ್ಷಗಳ ಬಳಿಕ ಅಖಿಲ ಭಾರತೀಯ ಸಭಾಧ್ಯಕ್ಷರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಸೆಪ್ಟೆಂಬರ್ 9 ಮತ್ತು 10ರಂದು ಸಮ್ಮೇಳನ ನಡೆಸಲಾಗುವುದು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮೇಳನ ಆಯೋಜಿಸುವಂತೆ ಕೋರಿ ಲೋಕಸಭಾ ಸಭಾಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು. ಅವರು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಅಖಿಲ ಭಾರತೀಯ ಸಭಾಧ್ಯಕ್ಷರ ಸಮ್ಮೇಳನ ಆಯೋಜಿಸಲಾಗುವುದು. 23 ವರ್ಷಗಳ ಬಳಿಕ ರಾಜ್ಯದಲ್ಲಿ ಸಮ್ಮೇಳನ ನಡೆಲಾಗುತ್ತಿದೆ ಎಂದು ಹೇಳಿದರು.
ಸೆಪ್ಟೆಂಬರ್ 8ರಂದು ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ. 9 ಮತ್ತು 10ರಂದು ಎರಡು ದಿನಗಳ ನಡೆಯುವ ಸಮಾವೇಶದಲ್ಲಿ ಎಲ್ಲಾ ರಾಜ್ಯಗಳ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿಗಳು, ಉಪಸಭಾಪತಿಗಳು, ಅಧಿಕಾರಿಗಳು ಸೇರಿದಂತೆ 500ಕ್ಕೂಹೆಚ್ಚು ಮಂದಿ ಭಾಗಿಯಾಗಿಯಾಗುವ ನಿರೀಕ್ಷೆ ಇದೆ. 11ರಂದು ಪ್ರತಿನಿಧಿಗಳಿಗೆ ರಾಜ್ಯದ ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
- ರಾಜ್ಯದಲ್ಲಿ ಸಮ್ಮೇಳನ ಆಯೋಜಿಸುವಂತೆ ಲೋಕಸಭಾ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದ ಖಾದರ್
- ಸೆ.8ರಂದು ಉದ್ಘಾಟನೆ, ಸೆ.9-10ಕ್ಕೆ ಸಮ್ಮೇಳನ ನಡೆಸಲು ಯೋಜನೆ
- ಸೆ.8ರ ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉದ್ಘಾಟನಾ ಸಮಾರಂಭಕ್ಕೆ ಚಿಂತನೆ
- 2 ದಿನಗಳ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿ, ಉಪಸಭಾಪತಿ, ಅಧಿಕಾರಿಗಳು ಸೇರಿ 500ಕ್ಕೂ ಹೆಚ್ಚು ಮಂದಿ ಭಾಗಿ
- ಸೆ.11ರಂದು ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿರುವ ಗಣ್ಯರು