ವನ್ಯಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಮುಂಚೂಣಿ ಸಿಬ್ಬಂದಿ ಅನುಕೂಲಕ್ಕಾಗಿ ವಿಶೇಷ ಭತ್ಯೆ : ಖಂಡ್ರೆ

Published : Jul 28, 2024, 08:47 AM IST
Eshwar Khandre

ಸಾರಾಂಶ

ವನ್ಯಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಮುಂಚೂಣಿ ಸಿಬ್ಬಂದಿ ಅನುಕೂಲಕ್ಕಾಗಿ ವಿಶೇಷ ಭತ್ಯೆ (ಹಾರ್ಡ್‌ಪ್ ಅಲೋಯನ್) ನೀಡಲು ಅರಣ್ಯ ಇಲಾಖೆ ಆದೇಶಿಸಿದ್ದು, ಆ ಮೂಲಕ ಸಿಬ್ಬಂದಿ ಮತ್ತು ಅಧಿಕಾರಿಗಳ ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ.

ಬೆಂಗಳೂರು : ವನ್ಯಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಮುಂಚೂಣಿ ಸಿಬ್ಬಂದಿ ಅನುಕೂಲಕ್ಕಾಗಿ ವಿಶೇಷ ಭತ್ಯೆ (ಹಾರ್ಡ್‌ಪ್ ಅಲೋಯನ್) ನೀಡಲು ಅರಣ್ಯ ಇಲಾಖೆ ಆದೇಶಿಸಿದ್ದು, ಆ ಮೂಲಕ ಸಿಬ್ಬಂದಿ ಮತ್ತು ಅಧಿಕಾರಿಗಳ ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಸಂರಕ್ಷಣೆಗಾಗಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಾರೆ. ಅವರ ಶ್ರಮಕ್ಕೆ ಪ್ರತಿಫಲವಾಗಿ ಮಾಸಿಕ ವಿಶೇಷ ಭತ್ಯೆ ನೀಡಲಾಗುವುದು. ಸದ್ಯ ಮಾಡಿರುವ ಆದೇಶದಂತೆ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳಿಗೆ ತಲಾ 3,500 ರು., ಅರಣ್ಯ ರಕ್ಷಕರಿಗೆ 2,700 ರು. ಹಾಗೂ ಡಿ ದರ್ಜೆ ನೌಕರರಿಗೆ 2 ಸಾವಿರ ರು. ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಆದೇಶವನ್ನೂ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಸೇರಿ ವಿವಿಧೆಡೆ ಆನೆಗಳ ಹಾವಳಿ ಹೆಚ್ಚಿದ್ದು, ಅದರ ನಿಗ್ರಹಕ್ಕಾಗಿ ಆನೆ ಕಾರ್ಯಪಡೆ ರಚಿಸಲಾಗಿದೆ. ಅಧಿಕಾ ರಿಗಳು ಮತ್ತು ಸಿಬ್ಬಂದಿಗೆ ಮಾಸಿಕ ಗರಿಷ್ಠ 2 ಸಾವಿರ ರು. ನೀಡಲಾ ಗುತ್ತದೆ. ಈ ಪರಿಹಾರ ಭತ್ಯೆಯನ್ನು ಅವರು ಕೆಲಸ ಮಾಡಿದ ದಿನಗಳಿಗನುಗುಣವಾಗಿ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ. ನಂಜನಗೂಡು, ಎಚ್‌.ಡಿ. ಕೋಟೆ, ಸರಗೂರು, ಟಿ.ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಚಿರತೆ ಕಾರ್ಯಪಡೆ, ಕ್ಷಿಪ್ರ ಸ್ಪಂದನಾ ಪಡೆ ಸಿಬ್ಬಂದಿ ಹಾಗೂ ಅರಣ್ಯದೊಳಗೆ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೂ ವಿಶೇಷ ಭತ್ಯೆ ನೀಡುವ ಆದೇಶ ಅನ್ವಯವಾ ಗಲಿದೆ. ನಾಗರಹೊಳೆ, ಬಂಡೀಪುರ ಅಭಯಾರಣ್ಯ ಸೇರಿದಂತೆ ವಿಶೇಷ ಭತ್ಯೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಕನ್ನಡಪ್ರಭ-ಸುವರ್ಣನ್ಯೂಸ್ ಅಭಿಯಾನದ ಫಲಶ್ರುತಿ: ವನ್ಯಜೀವಿ ಸಂರಕ್ಷಣೆ, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ನೆರವು ದೃಷ್ಟಿಯಿಂದ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಕಳೆದ ವರ್ಷ 'ವನ್ಯಜೀವಿ ಸಂರಕ್ಷಣಾ ಅಭಿಯಾನ' ನಡೆಸಿದ್ದವು. ಅದರ ಭಾಗವಾಗಿ ಅಭಿಯಾನದ ರಾಯಭಾರಿಯಾಗಿದ್ದ ರಿಷಭ್ ಶೆಟ್ಟಿ ಅವರು ವಿವಿಧ ಅಂಶಗಳುಳ್ಳ ಮನವಿಯನ್ನು ಸಿಎಂ ಸಿದ್ದರಾ ಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಲ್ಲಿಸಿದ್ದರು. ಆ ಅಂಶದಲ್ಲಿ ಅರಣ್ಯ ಸಿಬ್ಬಂದಿಗಗಳಿಗೆ ವಿಶೇಷ ಭತ್ಯೆ ನೀಡುವ ಬೇಡಿಕೆಯೂ ಇತ್ತು. ಅದರ ಜತೆಗೆ ಕಳೆದ ಜನವರಿಯಲ್ಲಿ 'ಕನ್ನಡಪ್ರಭ' ದಿನಪತ್ರಿಕೆ ಅರಣ್ಯ ಸಿಬ್ಬಂದಿ ಸಮಸ್ಯೆ, ಅವರಿಗೆ ನೀಡಬೇಕಾದ ಸೌಲಭ್ಯಗಳ ಕುರಿತಂತೆ ಸರಣಿ ವರದಿ ಪ್ರಕಟಿಸಿತ್ತು. ಅದನ್ನು ಪರಿಗಣಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ವಿಶೇಷ ಭತ್ಯೆಯನ್ನು ನಿಗದಿ ಮಾಡಿ ಘೋಷಿಸಿದೆ.

ಏಷ್ಯಾನೆಟ್‌ಸುವರ್ಣ ನ್ಯೂಸ್, ಕನ್ನಡಪ್ರಭ ಅಭಿಯಾನ ಫಲಶ್ರುತಿ: ವನ್ಯಜೀವಿ ಸಂರಕ್ಷಣೆ, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ನೆರವು ಹಾಗೂ ಕಾಡಂಚಿನ ಗ್ರಾಮಗಳ ಜನರ ರಕ್ಷಣೆ ದೃಷ್ಟಿಯಿಂದ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್ ವತಿ ಯಿಂದ 'ವನ್ಯಜೀವಿ ಸಂರಕ್ಷಣಾ ಅಭಿ ಯಾನ' ನಡೆಸಲಾಗಿತ್ತು. ರಾಯಭಾರಿ ರಿಷಬ್ ಶೆಟ್ಟಿ ಮೂಲಕ ಆಗಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಾಸರಗೋಡು ಕನ್ನಡಿಗರ ಮೇಲೆ ನಾವು ಮಲಯಾಳಂ ಹೇರುತ್ತಿಲ್ಲ : ಕೇರಳ ಸಿಎಂ
2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ