ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮವು ಪಿಎಂಎಫ್ಎಂಇ ಯೋಜನೆ ಮೂಲಕ ಈವರೆಗೆ 6888 ಆಹಾರ ಉದ್ದಿಮೆಗಳ ಸ್ಥಾಪನೆಗೆ ಕಾರಣವಾಗಿದೆ. ಈ ಆರ್ಥಿಕ ವರ್ಷ ಒಂದರಲ್ಲೇ 5 ಸಾವಿರ ಉದ್ದಿಮೆಗಳ ಸ್ಥಾಪನೆಗಾಗಿ ವಿಶೇಷ ಯೋಜನೆ ಹಾಕಿಕೊಂಡು ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಈ ವರ್ಷದ ಬಜೆಟ್ನಲ್ಲಿ ಕೊಟ್ಟಿರುವ ಗುರಿ ತಲುಪುತ್ತಿದ್ದಂತೆಯೇ ಕಪೆಕ್ ಉದ್ಯಮಿಗಳು ಉತ್ಪಾದಿಸುವ ಉತ್ಪನ್ನಗಳ ರಫ್ತು ಹೆಚ್ಚಿಸಲು ವಿಶೇಷ ಗಮನ ನೀಡುತ್ತೇವೆ.
ನಮ್ಮ ಕೆಪೆಕ್ ಉದ್ಯಮಿಗಳು ತಯಾರಿಸುವ ಆಹಾರೋತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು ಎಂದರೆ ಅವರು ಬೇರೆ ಬೇರೆ ರಾಜ್ಯಗಳು ಹಾಗೂ ದೇಶಗಳಿಗೆ ಹೋದರಷ್ಟೇ ಸಾಧ್ಯ. ಹೀಗಾಗಿ, ನಮ್ಮ ಉದ್ಯಮಿಗಳು ತಯಾರಿಸುವ ಯಾವ ಯಾವ ಉತ್ಪನ್ನಗಳಿಗೆ ರಾಜ್ಯದ ಹೊರಗಡೆ ಮತ್ತು ದೇಶದ ಹೊರಗಡೆ ಬೇಡಿಕೆ ಇದೆ ಎಂಬುದನ್ನು ಅರಿಯಲಾಗುವುದು. ನಂತರದಲ್ಲಿ ನಮ್ಮ ಉದ್ಯಮಿಗಳ ಉತ್ಪನ್ನಗಳಕುರಿತು ಸಮೀಕ್ಷೆ ನಡೆಸಿ ರಫ್ತು ಮಾಡಲು ಬೇಕಾದ ಅಗತ್ಯ ಮಾರ್ಗದರ್ಶನ ನೀಡಲು ತೀರ್ಮಾನಿಸಿದ್ದೇವೆ.
ಈಗಾಗಲೇ ಕೆಲವರ ಉತ್ಪನ್ನಗಳು ವಿವಿಧ ದೇಶಗಳಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. ಅವರ ರೀತಿಯಲ್ಲೇ ಹೆಚ್ಚಿನ ಸಂಖ್ಯೆಯ ಕೆಪೆಕ್ ಉದ್ಯಮಿಗಳು ಹಾಗೂ ರೈತರ ಉತ್ಪನ್ನಗಳಿಗೆ ರಾಜ್ಯದ ಹೊರಗೆ ಮಾರಕಟ್ಟೆ ಕಲ್ಪಿಸಲು ಯೋಚಿಸಿದ್ದೇವೆ. ಕೃಷಿ ಸಚಿವರ ಮಾರ್ಗದರ್ಶನದಲ್ಲಿ ಸಿಎಂ ನೀಡಿರುವ ಗುರಿಯನ್ನು ತಲುಪುತ್ತೇವೆ. ರಫ್ತು ಹೆಚ್ಚಿಸಲು ವಿಶೇಷ ಯೋಜನೆಯನ್ನೂ ಜಾರಿಗೆ ತರುತ್ತೇವೆ
ಬಿ.ಎಚ್. ಹರೀಶ್
ಅಧ್ಯಕ್ಷರು
ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ