;Resize=(412,232))
ಬೆಂಗಳೂರು : ಬೋಸ್ಟನ್ ಗ್ಲೋಬಲ್ ಫೋರಂನಿಂದ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕ ಗುರುದೇವ್ ಶ್ರೀ ಶ್ರೀ ರವಿಶಂಕರ ಅವರಿಗೆ 2025ನೇ ಸಾಲಿನ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್ ಸೆಕ್ಯೂರಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೋಮವಾರ ಅಮೆರಿಕದ ಮೆಸಾಚ್ಯುಸೆಟ್ಸ್ ರಾಜ್ಯದ ಬೋಸ್ಟನ್ ನಗರದಲ್ಲಿ ಬೋಸ್ಟನ್ ಗ್ಲೋಬಲ್ ಫೋರಂ ಮತ್ತು ಎಐ ವರ್ಲ್ಡ್ ಸೊಸೈಟಿಯಿಂದ ಪ್ರಶಸ್ತಿ ನೀಡಲಾಗಿದೆ. ಜಾಗತಿಕ ಶಾಂತಿ ಸ್ಥಾಪನೆಗಾಗಿ, ಸಮನ್ವಯತೆಗಾಗಿ ಮತ್ತು ಮಾನವತ್ವದ ನಾಯಕತ್ವಕ್ಕಾಗಿ ರವಿಶಂಕರ್ ಅವರು ನೀಡಿರುವ ಅಸಾಧಾರಣ ಕೊಡುಗೆಗಾಗಿ ಈ ಪ್ರಶಸ್ತಿ ಲಭಿಸಿದೆ.
‘ಶಾಂತಿ ಬರೀ ಮಾತುಗಳಿಂದ ಬರಲು ಸಾಧ್ಯವಿಲ್ಲ. ಅದನ್ನು ಕಾರ್ಯರೂಪಕ್ಕೆ ತರಬೇಕು. ಇಂದು ನಮ್ಮ ಸಮಾಜ ಎದುರಿಸುತ್ತಿರುವ ಅಪನಂಬಿಕೆ ಮತ್ತು ದುಃಖ ಶಮನಗೊಳಿಸಲು ಒಂದು ನೈತಿಕ ಹಾಗೂ ಆಧ್ಯಾತ್ಮಿಕ ಶಕ್ತಿಯ ಅವಶ್ಯಕತೆ ಇದೆ’ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.