ಅಭಿವೃದ್ಧಿ ಚಟುವಟಿಕೆಗಳಿಗೆ ರಾಜ್ಯಕ್ಕೆ 6310 ಕೋಟಿ ತೆರಿಗೆ ಹಂಚಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಸಾರಾಂಶ

ಕೇಂದ್ರ ಸರ್ಕಾರ ಶುಕ್ರವಾರ ವಿವಿಧ ರಾಜ್ಯಗಳಿಗೆ 1.73 ಲಕ್ಷ ಕೋಟಿ ರು. ತೆರಿಗೆ ಹಂಚಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ 6310.40 ಕೋಟಿ ರು. ನೀಡಿದೆ. ಬಂಡವಾಳ ವೆಚ್ಚಕ್ಕೆ ವೇಗ ಕಲ್ಪಿಸಲು ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಈ ಹಣ ಬಿಡುಗಡೆ ಮಾಡಲಾಗಿದೆ.

ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ವಿವಿಧ ರಾಜ್ಯಗಳಿಗೆ 1.73 ಲಕ್ಷ ಕೋಟಿ ರು. ತೆರಿಗೆ ಹಂಚಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ 6310.40 ಕೋಟಿ ರು. ನೀಡಿದೆ. ಬಂಡವಾಳ ವೆಚ್ಚಕ್ಕೆ ವೇಗ ಕಲ್ಪಿಸಲು ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಈ ಹಣ ಬಿಡುಗಡೆ ಮಾಡಲಾಗಿದೆ. 

2024ರ ಡಿಸೆಂಬರ್‌ನಲ್ಲಿ ₹89,086 ಕೋಟಿ ಡೆವೊಲ್ಯೂಷನ್‌ಗ ಬದಲಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ₹1,73,030 ಕೋಟಿ ತೆರಿಗೆ ಹಂಚಿಕೆ ಪಾಲು ನೀಡಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.

 ಪ್ರಸ್ತುತ, ತಾನು ಸಂಗ್ರಹಿಸುವ ತೆರಿಗೆಯ ಶೇ.41ರಷ್ಟನ್ನು ಒಂದು ಆರ್ಥಿಕ ವರ್ಷದಲ್ಲಿ ರಾಜ್ಯಗಳ ನಡುವೆ ಕಂತುಗಳಲ್ಲಿ ಕೇಂದ್ರವು ವಿತರಿಸುತ್ತದೆ. 31039.84 ಕೋಟಿ ರು. ಪಾಲು ಪಡೆದು ಉತ್ತರ ಪ್ರದೇಶವು ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ.

Share this article