ಬೆಂಗಳೂರು : ಪಿಜಿ, ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಗುಡ್ ನ್ಯೂಸ್

Published : Sep 06, 2025, 07:17 AM IST
Bengaluru Water Board

ಸಾರಾಂಶ

ಬೆಂಗಳೂರು ಜಲ ಮಂಡಳಿಯು ಕಳೆದ ಏಪ್ರಿಲ್‌ನಲ್ಲಿ ಕಾವೇರಿ ನೀರು ಹಾಗೂ ಒಳಚರಂಡಿ ಸ್ವಚ್ಛತೆಯ ದರವನ್ನು ಏರಿಕೆ ಮಾಡಿತ್ತು. ಆಗ ಅಪಾರ್ಟ್‌ಮೆಂಟ್ ಹಾಗೂ ಪೇಯಿಂಗ್ ಗೆಸ್ಟ್‌ ಗಳಿಗೆ(ಪಿಜಿ) ವಿಧಿಸಲಾಗಿದ್ದ ದರವನ್ನು ಪರಿಷ್ಕರಿಸಿ ಆದೇಶ ನೀಡಿದೆ.

 ಬೆಂಗಳೂರು :  ಬೆಂಗಳೂರು ಜಲ ಮಂಡಳಿಯು ಕಳೆದ ಏಪ್ರಿಲ್‌ನಲ್ಲಿ ಕಾವೇರಿ ನೀರು ಹಾಗೂ ಒಳಚರಂಡಿ ಸ್ವಚ್ಛತೆಯ ದರವನ್ನು ಏರಿಕೆ ಮಾಡಿತ್ತು. ಆಗ ಅಪಾರ್ಟ್‌ಮೆಂಟ್ ಹಾಗೂ ಪೇಯಿಂಗ್ ಗೆಸ್ಟ್‌ ಗಳಿಗೆ(ಪಿಜಿ) ವಿಧಿಸಲಾಗಿದ್ದ ದರವನ್ನು ಪರಿಷ್ಕರಿಸಿ ಆದೇಶ ನೀಡಿದೆ.

ಈ ಹಿಂದೆ ಎಲ್ಲ ಅಪಾರ್ಟ್‌ಮೆಂಟ್‌ಗಳಿಗೆ ಒಂದೇ ದರ ನಿಗದಿ ಪಡಿಸಲಾಗಿತ್ತು. ಇದರಿಂದ ಸಣ್ಣ ಅಪಾರ್ಟ್‌ಮೆಂಟ್‌ ನಿವಾಸಿಗಳು ಹೆಚ್ಚಿನ ದರ ಪಾವತಿಸಬೇಕಾಗಿತ್ತು.

ಇನ್ನೂ ಪಿಜಿ ಮತ್ತು ಹಾಸ್ಟೆಲ್‌ಗಳನ್ನು ವಾಣಿಜ್ಯ ಉದ್ದಿಮೆ ಎಂದು ಪರಿಗಣಿಸಿ ಹೆಚ್ಚುವರಿ ಸ್ಯಾನಿಟರಿ ದರ ವಿಧಿಸಲಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಸಿ ದರ ಇಳಿಕೆಗೆ ಕ್ರಮ ಕೈಗೊಳ್ಳಲಾಗಿದೆ.

2 ಸಾವಿರ ಫ್ಲ್ಯಾಟ್‌ ವರೆಗೆ ಇರುವ ಅಪಾರ್ಟ್‌ಮೆಂಟ್‌ ಪ್ರತಿ ಮನೆಗೆ ದಿನಕ್ಕೆ 200 ಲೀಟರ್‌ ನೀರು ಬಳಕೆ ಮಾಡುವವರಿಗೆ ಹೊಸ ಆದೇಶದ ಪ್ರಕಾರ ಪ್ರತಿ ಸಾವಿರ ಲೀಟರ್‌ಗೆ 32 ರು. ದರ ನಿಗದಿ ಪಡಿಸಲಾಗಿದೆ. ದಿನಕ್ಕೆ 200 ಲೀಟರ್‌ಗಿಂತ ಹೆಚ್ಚಿನ ನೀರು ಬಳಕೆ ಮಾಡುವವರಿಗೆ ಪ್ರತಿ ಕಿಲೋ ಲೀಟರ್‌ಗೆ 55 ರು. ಪಾವತಿ ಮಾಡಬೇಕಾಗಲಿದೆ.

2 ಸಾವಿರಕ್ಕಿಂತ ಹೆಚ್ಚು ಫ್ಲ್ಯಾಟ್‌ ಇರುವ ಅಪಾರ್ಟ್‌ಮೆಂಟ್‌ಗೆ ನಿಗದಿ ಪಡಿಸಿದ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಿಲೋ ಲೀಟರ್‌ಗೆ 55 ರು. ಪಾವತಿ ಮಾಡಬೇಕಾಗಿದೆ.

ಇನ್ನೂ ಪೇಯಿಂಗ್‌ ಗೆಸ್ಟ್‌ ಏಪ್ರಿಲ್‌ ವರೆಗೆ ಸ್ಯಾನಿಟರಿ ನೀರಿನ ಶುಲ್ಕವಾಗಿ ಮಾಸಿಕ 1 ಸಾವಿರ ರು. ಹೆಚ್ಚುವರಿಯಾಗಿ ವಿಧಿಸಲಾಗುತ್ತಿತ್ತು. ಮೇ ನಿಂದ 20 ಕೊಠಡಿಗಿಂತ ಕಡಿಮೆ ಇರುವ ಪಿಜಿಗಳಿಗೆ 5 ಸಾವಿರ, 20ಕ್ಕಿಂತ ಹೆಚ್ಚಿನ ಕೊಠಡಿ ಇದ್ದರೆ 7,500 ರು. ವಿಧಿಸಲಾಗುತ್ತಿತ್ತು. ಅದನ್ನು ಪರಿಷ್ಕರಣೆ ಮಾಡಿದ್ದು, 20 ಕೊಠಡಿಗಿಂತ ಕಡಿಮೆ ಇರುವ ಪಿಜಿಗಳಿಗೆ 2 ಸಾವಿರ, ಹೆಚ್ಚಿರುವ ಪಿಜಿಗಳಿಗೆ 3 ಸಾವಿರ ರು. ನಿಗದಿ ಪಡಿಸಲಾಗಿದೆ.

ಹಾಸ್ಟೆಲ್‌ಗಳಿಗೆ 5 ಸಾವಿರ ರು.ನಿಂದ 3 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. ಏಪ್ರಿಲ್‌ ವರೆಗೆ 2 ಸಾವಿರ ರು. ಸ್ಯಾನಿಟರಿ ನೀರಿನ ಶುಲ್ಕ ವಿಧಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Read more Articles on

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ