ವಾಹನಗಳ ಎಮಿಷನ್‌ ಟೆಸ್ಟ್‌ ಶುಲ್ಕ ಹೆಚ್ಚಿಸಿದ ಸಾರಿಗೆ ಇಲಾಖೆ

Published : Aug 17, 2026, 06:05 AM IST
Vehicle

ಸಾರಾಂಶ

ರಾಜ್ಯದಲ್ಲಿ ವಿವಿಧ ಮಾದರಿಯ ವಾಹನಗಳ ವಾಯು ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಕನಿಷ್ಠ 5 ರು. ಗಳಿಂದ ಗರಿಷ್ಠ 40 ರು.ಗಳ ವರೆಗೆ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶಿಸಿದೆ.

 ಬೆಂಗಳೂರು : ರಾಜ್ಯದಲ್ಲಿ ವಿವಿಧ ಮಾದರಿಯ ವಾಹನಗಳ ವಾಯು ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಕನಿಷ್ಠ 5 ರು.ಗಳಿಂದ ಗರಿಷ್ಠ 40 ರು.ಗಳ ವರೆಗೆ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶಿಸಿದೆ.

ಇದರಿಂದ ರಾಜ್ಯದಲ್ಲಿ ವಾಹನಗಳ ಮಾಲೀಕರು ತಮ್ಮ ವಾಹನಗಳ ಮಾಲಿನ್ಯ ಪರೀಕ್ಷೆ ನಡೆಸಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಎಮಿಷನ್‌ ಟೆಸ್ಟ್‌ ಸರ್ಟಿಫಿಕೇಟ್‌) ಪಡೆಯಲು ಇನ್ನಷ್ಟು ಹೆಚ್ಚಿನ ಶುಲ್ಕದ ಹೊರೆ ಹೊರಬೇಕಾಗುತ್ತದೆ.

ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರು ಕಾರ್ಯಾಚರಣೆ ವೆಚ್ಚ ಹೆಚ್ಚಿರುವುದನ್ನು ಉಲ್ಲೇಖಿಸಿ ಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆ.13ರಂದು ಹೊಸ ದರಗಳ ಅಧಿಸೂಚನೆ ಹೊರಡಿಸಿದೆ. ಇದಕ್ಕೂ ಮೊದಲು ಕೊನೇ ಬಾರಿ ಏಪ್ರಿಲ್ 2022ರಲ್ಲಿ ಶುಲ್ಕ ಪರಿಷ್ಕರಿಸಲಾಗಿತ್ತು.

ಯಾವ ವಾಹನಕ್ಕೆ ಎಷ್ಟು ದರ ಹೆಚ್ಚಳ?(ರು.ಗಳಲ್ಲಿ)

ವಾಹನ ಹಳೆಯ ಶುಲ್ಕ ಹೊಸ ಶುಲ್ಕ ಎಷ್ಟು ಹೆಚ್ಚಳ?

ದ್ವಿಚಕ್ರ ವಾಹನ 65 80 15

ಆಟೋರಿಕ್ಷಾ 75 80 05

ನಾಲ್ಕು ಚಕ್ರದ ವಾಹನ(ಪೆಟ್ರೋಲ್/ಸಿಎನ್‌ಜಿ /ಎಲ್‌ಪಿಜಿ) 115 150 35

ಎಲ್ಲಾ ಡೀಸೆಲ್ ವಾಹನ 160 200 40

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯವ್ಯಾಪಿ ಆಹಾರ ಮಳಿಗೆ ಮೇಲೆ ದಾಳಿ ಮುಂದುವರಿಯುತ್ತೆ: ಖಾದರ್
ಬೆಂಗಳೂರು ಕಾನೂನು ವಿವಿಗೆ ಸಿಜೆಐ ಆಗಮನಕ್ಕೂ ವಿರೋಧ