;Resize=(412,232))
ಬೆಂಗಳೂರು : ಅಡುಗೆ ಎಣ್ಣೆಯನ್ನು ಅಸುರಕ್ಷಿತವಾಗಿ ಮರುಬಳಕೆ ನಿಯಂತ್ರಿಸಲು ಮುಂದಾಗಿದ್ದು, ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದಂತೆ ಹೋಟೆಲ್ ಹಾಗೂ ಮನೆಗಳಿಂದಲೇ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್‌ಗಳಲ್ಲಿ ಬಳಸಿರುವ ಎಣ್ಣೆಯನ್ನು ಕೆಲವರು ಮಧ್ಯವರ್ತಿಗಳ ಮೂಲಕ ಮಾರುವ ವ್ಯವಸ್ಥೆಯಿದೆ. ಹೋಟೆಲ್‌ನವರು 200 ಲೀ. ಎಣ್ಣೆ ಬಳಸಿದರೆ ಅದರಲ್ಲಿ ಕನಿಷ್ಠ 20 ಲೀಟರ್ ಎಣ್ಣೆ ಸೆಕೆಂಡ್ ಹ್ಯಾಂಡ್ ಆಗಿ ಬಳಕೆ ಆಗುತ್ತಿರುವುದು ಕಂಡುಬಂದಿದೆ. ಹೀಗೆ ಅಸುರಕ್ಷಿತವಾಗಿ ಎಣ್ಣೆ ಮರುಬಳಕೆ ಮಾಡುತ್ತಿರುವುದನ್ನು ತಡೆಯಲು ಈ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಮೊದಲು ಬೆಂಗಳೂರು ಹಾಗೂ ಬಳಿಕ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಆರಂಭಿಸಲಾಗುವುದು. ಇದಕ್ಕಾಗಿ ಈಗಾಗಲೇ ಮೂರು ಸಭೆಗಳನ್ನು ನಡೆಸಿದ್ದು, ಇನ್ನು ಎರಡು ಸಭೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು. ಬಳಿಕ ಪ್ರಾಯೋಗಿಕವಾಗಿ ಬಳಸಿದ ಅಡುಗೆ ಎಣ್ಣೆ ಸಂಗ್ರಹ ಶುರು ಮಾಡುತ್ತೇವೆ ಎಂದು ಖಾದರ್ ಹೇಳಿದರು.
ಉಪ್ಪು, ಸಕ್ಕರೆ ಮತ್ತು ಎಣ್ಣೆಯ ಅತಿಯಾದ ಬಳಕೆಯಿಂದ ಆರೋಗ್ಯ ಹದಗೆಡುತ್ತಿದ್ದು, ಆಸ್ಪತ್ರೆ ಖರ್ಚು ಹಾಗೂ ಕುಟುಂಬದ ಆರ್ಥಿಕ ಹೊರೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಿಇಸಿ ವಿರುದ್ಧ ಹೋರಾಟ ಜೋರಾಗಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ಹೋರಾಟದಿಂದ ಸಿಇಸಿ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯುವಜನರಿಗೆ ಸ್ಫೂರ್ತಿ ದೊರೆತಿದೆ. ಕೇಂದ್ರ ಸರ್ಕಾರ ಜನರ ಪ್ರತಿಭಟನೆ ಹಕ್ಕು ಹತ್ತಿಕ್ಕಲು ಸರ್ವಾಧಿಕಾರಿ ಧೋರಣೆ ತಾಳಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.