ವೈಟರ್‌ಗೆ ಟಿಪ್ಸ್‌ ಪಾವತಿಗೂ ಬಂತು ಪ್ರತ್ಯೇಕ ಆ್ಯಪ್‌!

ಸಾರಾಂಶ

  ಹೊಟೇಲ್‌ನಲ್ಲಿ ಟಿಪ್ಸ್‌ ಪಾವತಿ ಹೇಗೆ ಎಂಬ ಚಿಂತೆ ಇನ್ನಿಲ್ಲ, ಟಿಪ್ಸ್‌ ಪಾವತಿಗೂ ಈಗ ಪ್ರತ್ಯೇಕ ಆ್ಯಪ್‌ ಬಂದಿದೆ.

ಬೆಂಗಳೂರು : ಡಿಜಿಟಲ್‌ ಪಾವತಿಯ ಈ ಯುಗದಲ್ಲಿ ಎಲ್ಲವೂ ನಗದು ರಹಿತ ಮೊಬೈಲ್‌ ಮೂಲಕ ನೇರವಾಗಿ ಪಾವತಿಯಾಗುತ್ತದೆ. ಮಾರುಕಟ್ಟೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಡಿಜಿಟಲ್‌ ಪಾವತಿಗೆ ಅವಕಾಶ ಇದೆ. ಇಂತಹ ಸಂದರ್ಭದಲ್ಲಿ ಹೊಟೇಲ್‌ನಲ್ಲಿ ಟಿಪ್ಸ್‌ ಪಾವತಿ ಹೇಗೆ ಎಂಬ ಚಿಂತೆ ಇನ್ನಿಲ್ಲ, ಟಿಪ್ಸ್‌ ಪಾವತಿಗೂ ಈಗ ಪ್ರತ್ಯೇಕ ಆ್ಯಪ್‌ ಬಂದಿದೆ.

-ಈ ಆ್ಯಪ್‌ನ್ನು ಮಂಗಳೂರಿನ ವ್ಯಕ್ತಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ. ಸೋಹನ್‌ ರೈ ಎಂಬವರು ವೈಟರ್‌ಗಳಿಗೆ ಟಿಪ್ಸ್‌ ಪಾವತಿಗೆಂದೇ ಪ್ರತ್ಯೇಕ ಆ್ಯಪ್‌ನ್ನು ಅಭಿವೃದ್ಧಿಪಡಿಸಿ ಅದನ್ನು ಮಂಗಳೂರಿನ ಹೊಟೇಲ್‌ವೊಂದರಲ್ಲಿ ಪ್ರಯೋಗಕ್ಕೆ ಒಳಪಡಿಸಿ ಯಶಸ್ವಿಯಾಗಿದ್ದಾರೆ.

-ಹೊಟೇಲ್‌ನಲ್ಲಿ ಆಹಾರ ಸೇವಿಸಿ ಅದರ ಮೊತ್ತ ಪಾವತಿಸುವುದರ ಜೊತೆಗೆ ವೈಟರ್‌ ಹೆಸರು ಇರುವ ಕ್ಯೂಆರ್‌ ಕೋಡ್‌ ಮೂಲಕ ಟಿಪ್ಸ್‌ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಈ ಆ್ಯಪ್‌ಗೆ ಸಾಕಷ್ಟು ಕಡೆಗಳಿಂದ ಬೇಡಿಕೆ ಬಂದಿದೆ. ಇದೇ ಮೊದಲ ಬಾರಿಗೆ ಹೊಟೇಲ್‌ನಲ್ಲಿ ವೈಟರ್‌ಗಳಿಗೆ ಟಿಪ್ಸ್‌ ಪಾವತಿಗೆ ಅಭಿವೃದ್ಧಿಪಡಿಸಿದ ಆ್ಯಪ್‌ ಇದಾಗಿದೆ.

Share this article