ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐನ ನೂರಾರು ಕಾರ್ಯಕರ್ತರು ಹಾಗೂ ಮುಸ್ಲಿಂ ಸಮುದಾಯದವರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ವಕ್ಫ್ ಮಸೂದೆ ಅಸಂವಿಧಾನಿಕ.
ಬೆಂಗಳೂರು : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐನ ನೂರಾರು ಕಾರ್ಯಕರ್ತರು ಹಾಗೂ ಮುಸ್ಲಿಂ ಸಮುದಾಯದವರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ವಕ್ಫ್ ಮಸೂದೆ ಅಸಂವಿಧಾನಿಕ.
ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸಿ ಮಸೂದೆ ತಂದಿದೆ. ಕೇಂದ್ರದ ಜಂಟಿ ಸಂಸದೀಯ ಸಮಿತಿಯಲ್ಲಿದ್ದ ವಿರೋಧ ಪಕ್ಷಗಳು ನೀಡಿದ ಸಲಹೆಯನ್ನು ಕೂಡ ಪರಿಗಣಿಸದೆ ಕೇಂದ್ರ ಸರ್ಕಾರ ತನ್ನಿಷ್ಟದಂತೆ ಮಸೂದೆಯನ್ನು ಜಾರಿಗೆ ತರುತ್ತಿದೆ ಎಂದರು.
ಮುಸ್ಲಿಮರ ಒಳಿತಿಗಾಗಿ ಮಸೂದೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ ಸಂಸದ, ಶಾಸಕ, ಸಂಘಟನೆಯವರು ವಕ್ಫ್ ತಿದ್ದುಪಡಿಗೆ ಮನವಿ ಮಾಡಿದ್ದರು ಎಂದು ಕೇಂದ್ರ ಸರ್ಕಾರ ಹೇಳಬೇಕು. ವಕ್ಫ್ ಆಸ್ತಿ ಎಂದರೆ ಅಲ್ಲಾಹುನಿಗೆ ಸೇರಿದ ಆಸ್ತಿ. ಅಂತಹ ಆಸ್ತಿಯ ಆಡಳಿತ ವಿಚಾರದಲ್ಲಿ ಮುಸ್ಲಿಮೇತರರು ಏಕೆ ಸದಸ್ಯರಾಗಬೇಕು ಇದನ್ನು ಒಪ್ಪಲಾಗದು ಎಂದು ಮಜೀದ್ ಹೇಳಿದರು. ಎಸ್‌ಡಿಪಿಐ ಕರ್ನಾಟಕ ಉಪಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿ, ಮುಸ್ಲಿಮರ ಪರ ಎನ್ನುವ ಕೇಂದ್ರ ಸರ್ಕಾರ ಮುಸ್ಲಿಮರ ಸ್ಕಾಲರ್‌ಶಿಪ್ ಏಕೆ ಕಡಿತಗೊಳಿಸಿದೆ. ಬಿಜೆಪಿಯಲ್ಲಿ ಒಬ್ಬರೂ ಮುಸ್ಲಿಂ ಸಂಸದ ಇಲ್ಲ ಎಂದು ದೂರಿದರು.
ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಮುಜಾಯಿದ್ ಪಾಷಾ, ಸಲೀಂ ಅಹ್ಮದ್ ಭಾಗವಹಿಸಿದ್ದರು.