ದುಬಾರಿ ಟಿಡಿಆರ್‌ಯಿಂದ ಪಾರಾಗಲುಬೆಂಗಳೂರು ಅರಮನೆ ವಿಧೇಯಕ

KannadaprabhaNewsNetwork |  
Published : Mar 05, 2025, 12:33 AM IST

ಸಾರಾಂಶ

ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆಗೆ ಬದಲಾಗಿ ದುಬಾರಿ ಮೊತ್ತದ ಟಿಡಿಆರ್‌ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ಪರಿಹಾರ ನೀಡುವುದರಿಂದ ಪಾರಾಗಲು ಕೊನೇ ಪ್ರಯತ್ನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಕುರಿತಂತೆ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025 ಅನ್ನು ಮಂಗಳವಾರ ಮಂಡಿಸಿತು.

ವಿಧಾನಸಭೆ: ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆಗೆ ಬದಲಾಗಿ ದುಬಾರಿ ಮೊತ್ತದ ಟಿಡಿಆರ್‌ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ಪರಿಹಾರ ನೀಡುವುದರಿಂದ ಪಾರಾಗಲು ಕೊನೇ ಪ್ರಯತ್ನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಕುರಿತಂತೆ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025 ಅನ್ನು ಮಂಗಳವಾರ ಮಂಡಿಸಿತು. ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಜಾಗ ಸ್ವಾಧೀನಕ್ಕೆ ಬದಲಾಗಿ ಮೈಸೂರು ರಾಜಮನೆತದ ವಾರಸುದಾರರಿಗೆ ₹3014 ಕೋಟಿ ಟಿಡಿಆರ್‌ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಆದರೆ, ಅದರಿಂದ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಲಿದೆ ಎಂದು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಆದರೆ, ಸುಪ್ರೀಂಕೋರ್ಟ್‌ ಅದನ್ನು ಒಪ್ಪದೆ ಟಿಡಿಆರ್‌ ಪರಿಹಾರ ನೀಡುವ ಆದೇಶ ಪಾಲಿಸುವಂತೆ ಸೂಚನೆ ನೀಡಿತ್ತು. ಅದರ ನಡುವೆಯೂ ಇದೀಗ ಸುಗ್ರೀವಾಜ್ಞೆಗೆ ಕಾನೂನು ರೂಪ ನೀಡಲು ಸರ್ಕಾರ ಮುಂದಾಗಿದೆ.

ಮುಂದಾಗಿರುವ ಸರ್ಕಾರ, ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಮಂಡಿಸಿದರು.

ನೂತನ ವಿಧೆಯಕವು 1996ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗೆ ಪೂರಕವಾಗಿದೆ. ಹಿಂದಿನ ವಿಧೇಯಕವು ಬೆಂಗಳೂರು ಅರಮನೆಯ 472.16 ಎಕರೆ ಭೂಮಿಯನ್ನು ₹11 ಕೋಟಿ ಎಂದು ನಿಗದಿ ಮಾಡಲಾಗಿದೆ. ಅದರಂತೆ ಪರಿಹಾರ ನೀಡಬಹುದಾಗಿದೆ. ಆದರೆ, ರಸ್ತೆ ಅಗಲೀಕರಣಕ್ಕಾಗಿ ಮಾಡಿಕೊಳ್ಳಲಾಗುವ 15.39 ಎಕರೆ ಅರಮನೆ ಮೈದಾನದ ಭೂಮಿಗೆ ಕರ್ನಾಟಕ ಸ್ಟಾಂಪು ಅಧಿನಿಯಮ 1957ರ 45ಬಿ ಪ್ರಕರಣದ ಪ್ರಕಾರ ಅಕ್ಕಪಕ್ಕದ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯದಂತೆ ಟಿಡಿಆರ್‌ ನೀಡಬೇಕು ಎಂದು ಆದೇಶಿಸಿದೆ.

ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಸಂಕೀರ್ಣ ಪರಿಣಾಮಗಳು ಬೀರಲಿವೆ. ಅದನ್ನು ತಪ್ಪಿಸುವ ಉದ್ದೇಶದೊಂದಿಗೆ ನೂತನ ವಿಧೇಯಕ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''