ಕನ್ನಡಪ್ರಭ ವಾರ್ತೆ, ಬೆಂಗಳೂರು
ಬೆಸ್ಕಾಂ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೂರಾರು ಮಂದಿ ಮೀಟರ್ ರೀಡರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ನವೆಂಬರ್‌ನಿಂದ ವೇತನ ಪಾವತಿಯಾಗಿಲ್ಲ. ಜತೆಗೆ ಹಿಂದೆ ನೀಡುತ್ತಿದ್ದ 21,291 ರು. ವೇತನದ ಬದಲಿಗೆ 17,385 ರು. ವೇತನ ನೀಡಲಾಗುತ್ತಿದೆ. ಏಕಾಏಕಿ 5 ಸಾವಿರ 4 ಸಾವಿರ ರು. ವೇತನ ಕಡಿತಗೊಳಿಸಲಾಗಿದೆ. ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಮೀಟರ್ ರೀಡರ್‌ಗಳು ದೂರಿದ್ದಾರೆ.
ವಿಳಂಬ ಬಗ್ಗೆ ಪರಿಶೀಲಿಸುತ್ತೇವೆ: ನಾಗರಾಜ್ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಬೆಸ್ಕಾಂ ಗ್ರಾಹಕ ಸೇವೆಗಳ ಪ್ರಧಾನ ವ್ಯವಸ್ಥಾಪಕ ನಾಗರಾಜ್, ಬೆಸ್ಕಾಂನಲ್ಲಿ ಖಾಯಂ, ತಾತ್ಕಾಲಿಕ ನೇಮಕ ಹಾಗೂ ಹೊರಗುತ್ತಿಗೆ ಸೇರಿ ಮೂರು ಮಾದರಿಯಲ್ಲಿ ಮೀಟರ್ ರೀಡರ್‌ಗಳು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಯಾವ ಮೀಟರ್ ರೀಡರ್‌ಗಳ ವೇತನ ವಿಳಂಬ ಆಗಿದೆ ಎಂಬುದು ಪರಿಶೀಲನೆ ನಡೆಸುತ್ತೇವೆ. ಒಂದು ವೇಳೆ ವೇತನ ವಿಳಂಬ ಆಗಿದ್ದರೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.