ಚಳ್ಳಕೆರೆ: ಶೈಕ್ಷಣಿಕ ಕ್ಷೇತ್ರದಲ್ಲಿ ಚಳ್ಳಕೆರೆ ತಾಲೂಕು ರಾಜ್ಯಮಟ್ಟದಲ್ಲಿ ಖ್ಯಾತಿಯಾದ ಕಾಲವಿತ್ತು, ಆದರೆ, ಈಗ ಗುಣಮಟ್ಟದ ಶಿಕ್ಷಣದಿಂದ ವಿದೇಶದ ಶಿಕ್ಷಣ ಸಂಸ್ಥೆಗಳು ಸಹ ಈ ಭಾಗದ ಶಿಕ್ಷಕರು ಹಾಗೂ ಅವರ ಸೇವೆಯ ಗುರುತಿಸಿ ಗೌರವಿಸುವ ಮೂಲಕ ಚಳ್ಳಕೆರೆ ಶಿಕ್ಷಣದ ಖ್ಯಾತಿ ಅಂತರಾಷ್ಟ್ರೀಯ ಮಟ್ಟದತ್ತ ಸಾಗಿದೆ.
ವಿದೇಶದಲ್ಲಿರುವ ಹಮ್ಮಿಂಗ್ ಬರ್ಡ್ ಎಜುಕೇಷನ್ ಲಿಮಿಟೆಡ್ ಶೈಕ್ಷಣಿಕ ಸಂಸ್ಥೆ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಸರ್ವೆಕ್ಷಣ ಕಾರ್ಯದಲ್ಲಿ ಎಸ್‌ಆರ್‌ಎಸ್ ಹೆರಿಟೇಜ್ ಕಾಲೇಜು ಪ್ರಾಂಶುಪಾಲ ಬಿ.ಎಸ್.ವಿಜಯ್ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಣ ಗುಣಮಟ್ಟದ ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಒಲಂಪಿಯಾಡ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಈ ಗೌರವವನ್ನು ನೀಡಲಾಗಿದೆ.
ಪ್ರಶಸ್ತಿಗೆ ಪಾತ್ರರಾದ ಪ್ರಾಂಶುಪಾಲ ಬಿ.ಎಸ್.ವಿಜಯ್ ಸಾಧನೆಗೆ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಲಿಂಗಾರೆಡ್ಡಿ, ಆಡಳಿತಾಧಿಕಾರಿ ಪಿ.ಎನ್.ಕೃಷ್ಣಪ್ರಸಾದ್, ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಹಾಗೂ ಉಪನ್ಯಾಸಕರು, ಶಿಕ್ಷಕರು ಇವರ ಸಾಧನೆಗೆಮೆಚ್ಚಿಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.