ಟರ್ನಿಂಗ್‌ ಬ್ರೈಟ್‌ ತರಬೇತಿ ಸಂಸ್ಥೆಗೆ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿ

KannadaprabhaNewsNetwork |  
Published : Feb 21, 2025, 11:50 PM IST
19ಕೆಎಂಎನ್‌ಡಿ-4ಹೊಸದಿಲ್ಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಫೆ.೧೭ರಂದು ನಡೆದಹೊಸದಿಲ್ಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಸಮಾರಂಭದಲ್ಲಿ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ನ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್ ಅವರಿಗೆ ಎಐಐಟಿಇ ಸಂಸ್ಥೆ ಅಧ್ಯಕ್ಷ ದಿಲೀಪ್‌ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ನ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್ ಅವರಿಗೆ ಎಐಐಟಿಇ ಸಂಸ್ಥೆ ಅಧ್ಯಕ್ಷ ದಿಲೀಪ್‌ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. | Kannada Prabha

ಸಾರಾಂಶ

ಅಖಿಲ ಭಾರತ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಎಐಐಟಿಇ) ನೀಡುವ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿಯು ಈ ಬಾರಿ ಇಲ್ಲಿನ ನೆಹರು ನಗರದ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ಗೆ ಲಭಿಸಿದೆ. ರಾಜ್ಯದ ೫೨ ಶಿಕ್ಷಕರ ತರಬೇತಿ ಸಂಸ್ಥೆಗಳ ಪೈಕಿ ಎಐಐಟಿಇ ವತಿಯಿಂದ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿ ಪಡೆದಿರುವ ಏಕೈಕ ಸಂಸ್ಥೆ ಇದಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಎಐಐಟಿಇ) ನೀಡುವ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿಯು ಈ ಬಾರಿ ಇಲ್ಲಿನ ನೆಹರು ನಗರದ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ಗೆ ಲಭಿಸಿದೆ.

ರಾಜ್ಯದ ೫೨ ಶಿಕ್ಷಕರ ತರಬೇತಿ ಸಂಸ್ಥೆಗಳ ಪೈಕಿ ಎಐಐಟಿಇ ವತಿಯಿಂದ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿ ಪಡೆದಿರುವ ಏಕೈಕ ಸಂಸ್ಥೆ ಇದಾಗಿದೆ. ಹೊಸದಿಲ್ಲಿಯ ಇಂಡಿಯಾ ಇಂಟರ್‌ ನ್ಯಾಷನಲ್ ಸೆಂಟರ್‌ನಲ್ಲಿ ಫೆ.೧೭ರಂದು ನಡೆದ ಸಮಾರಂಭದಲ್ಲಿ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ನ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್ ಅವರಿಗೆ ಎಐಐಟಿಇ ಸಂಸ್ಥೆ ಅಧ್ಯಕ್ಷ ದಿಲೀಪ್‌ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕೌಶಲ್ಯಾಧಾರಿತ ಮಾಂಟೆಸ್ಸರಿ ಶಿಕ್ಷಕಿಯರ ತರಬೇತಿ, ತರಬೇತಿ ಪಡೆದ ಶಿಕ್ಷಕರಿಗೆ ಉದ್ಯೋಗ ಕೊಡಿಸುವಿಕೆ, ಗುಣಮಟ್ಟದ ಶಿಕ್ಷಣ ಬೋಧಕ ಹಾಗೂ ಚಟುವಟಿಕೆ ಆಧಾರಿತ ಕಲಿಕೆ ಮತ್ತಿತರ ಸಂಗತಿಗಳ ಆಧಾರದ ಮೇಲೆ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ಗೆ ಎಐಐಟಿಇ ಪ್ರಶಸ್ತಿ ಲಭಿಸಿದೆ. ಕಳೆದ ಆರು ವರ್ಷಗಳಲ್ಲಿ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ನಿಂದ ೩೬೭ ಮಂದಿ ಶಿಕ್ಷಕಿಯರಿಗೆ ತರಬೇತಿ ನೀಡಿದ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ.

ಪ್ರಶಸ್ತಿ ಪಡೆದಿರುವ ಟರ್ನಿಂಗ್ ಬ್ರೈಟ್‌ ಟ್ರೈನಿಂಗ್ ಸೆಂಟರ್‌ನ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್ ಅವರನ್ನು ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮಂಗಲ, ಪದಾಧಿಕಾರಿಗಳಾದ ಕುಮಾರ್‌ಗೌಡ, ಪ್ರತಾಪ್, ಲೋಕೇಶ್, ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವಿ.ಡಿ.ಸುವರ್ಣ, ಅಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!