ವೀಳ್ಯೆದೆಲೆ ದುಬಾರಿ: ಗುಣಮಟ್ಟದ ಎಲೆಯೂ ಸಿಗುತ್ತಿಲ್ಲ

KannadaprabhaNewsNetwork |  
Published : Feb 19, 2025, 12:46 AM IST
ಸಿಕೆಬಿ-3 ವೀಳ್ಯದೆಲೆ ತೋಟಸಿಕೆಬಿ-4 ಅಂಗಡಿಯಲ್ಲಿ ಮಾರಟಕ್ಕೆ ಬಂದಿರುವ ವೀಳ್ಯದೆಲೆ | Kannada Prabha

ಸಾರಾಂಶ

ವೀಳ್ಯದೆಲೆ ಬೆಲೆ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿಂದ ಏರಿಕೆ ಆಗುತ್ತಿದ್ದು, ಗ್ರಾಹಕರು ಕಂಗಾಲು ಆಗುವಂತೆ ಮಾಡಿದೆ. ಜಿಲ್ಲೆಯಲ್ಲಿ ವೀಳ್ಯದೆಲೆ ಬೆಲೆ ದುಬಾರಿ ಆಗುತ್ತಿದ್ದು, ಒಂದು ದಿನ ಇದ್ದ ದರ ಇನ್ನೊಂದು ದಿನ ಇರಲ್ಲ. ದುಬಾರಿಯಾದರೂ ಮಾರುಕಟ್ಟೆಯಲ್ಲಿ ಗುಣಮಟ್ಟದ ವೀಳ್ಯದೆಲೆ ಸಿಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಮಾರುಕಟ್ಟೆಯಲ್ಲಿ ವೀಳ್ಯೆದೆಲೆಯ ಬೆಲೆ ಗಗನಕ್ಕೆ ಜಿಗುತ್ತಲೇ ಇದ್ದು, ಒಂದು ಕಟ್ಟು ವೀಳ್ಯೆದೆಲೆ ಬೆಲೆ ಈಗ ಬರೋಬರಿ 150ರಿಂದ 200 ರು.ಗಡಿ ದಾಟಿದೆ. ದಶಕದ ಬಳಿಕ ಕಳೆದ ವರ್ಷ ಬೆಲೆ ಏರಿಕೆಯಾಗಿತ್ತು. ಆದರೆ ಈ ವರ್ಷ ಸಹ ದಾಖಲೆಯ ಬೆಲೆ ಏರಿಕೆಯಾಗಿದೆ.

ವೀಳ್ಯದೆಲೆ ಬೆಲೆ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿಂದ ಏರಿಕೆ ಆಗುತ್ತಿದ್ದು, ಗ್ರಾಹಕರು ಕಂಗಾಲು ಆಗುವಂತೆ ಮಾಡಿದೆ. ಜಿಲ್ಲೆಯಲ್ಲಿ ವೀಳ್ಯದೆಲೆ ಬೆಲೆ ದುಬಾರಿ ಆಗುತ್ತಿದ್ದು, ಒಂದು ದಿನ ಇದ್ದ ದರ ಇನ್ನೊಂದು ದಿನ ಇರಲ್ಲ. ದುಬಾರಿಯಾದರೂ ಮಾರುಕಟ್ಟೆಯಲ್ಲಿ ಗುಣಮಟ್ಟದ ವೀಳ್ಯದೆಲೆ ಸಿಗುತ್ತಿಲ್ಲ ಎಂಬುದು ಗ್ರಾಹಕರ ಆರೋಪ.

ಮಾರ್ಚ್‌ನಲ್ಲಿ ದರ ಕುಸಿತ ಸಾಧ್ಯತೆ

ಇಡೀ ಜಿಲ್ಲೆಗೆ ತುಮಕೂರಿನ ಪಾವಗಡ, ಆಂಧ್ರಪ್ರದೇಶದ ಹಿಂದೂಪುರದ ಅಮಲಾಪುರದಿಂದ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ ಗಳಿಂದ ವೀಳ್ಯದೆಲೆ ಸರಬರಾಜು ಆಗುತ್ತಿದೆ. ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರವರಿ ವರೆಗೆ ದಟ್ಟ ಮಂಜು ಬೀಳುವ ಕಾರಣ ವೀಳ್ಯದೆಲೆ ಸರಿಯಾಗಿ ಬರುವುದಿಲ್ಲ. ಫೆಬ್ರವರಿ ಕಳೆಯುವವರೆಗೂ ಬೆಲೆ ಏರಿಕೆ ತಪ್ಪಿದ್ದಲ್ಲ. ಈ ಬಾರಿ ವಿಳ್ಯೆದೆಲೆ ಇಳುವರಿ ಕಡಿಮೆಯಾಗಿದ್ದರೂ ಮಾರುಕಟ್ಟೆಗೆ ಗುಣಮಟ್ಟದ ವಿಳ್ಯೇದೆಲೆ ಬರಲಿದೆ ಎಂಬುದು ಮಾರಾಟಗಾರರ ನಿರೀಕ್ಷೆ.

ಕಳೆದ ಒಂದು ವಾರದಿಂದ ಒಂದು ಕಟ್ಟಿನ ಬೆಲೆ 50ರಿಂದ 60 ರು. ಹೆಚ್ಚಳ ಆಗುವ ಮೂಲಕ ಗ್ರಾಹಕರಿಗೆ ಹೊರೆಯಾಗಿದೆ. ಒಂದು ಕಟ್ಟಿಗೆ ಒಟ್ಟು 100 ವೀಳ್ಯದೆಲೆ ಇರುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರು.ಗೆ ಮಾರಾಟ ಆಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯ ರಿಂದ ವೀಳ್ಯದೆಲೆಗೆ ಸಾಕಷ್ಟು ಬೇಡಿಕೆ ಇದೆ.

ಜಿಲ್ಲೆಯಲ್ಲಿ ತೋಟ ಅಪರೂಪ

ಯಾವುದೇ ಧಾರ್ಮಿಕ ಪೂಜಾ ಕಾರ್ಯಗಳು, ಶುಭ, ಸಮಾರಂಭಗಳು, ಮದುವೆ, ನಡೆಯಬೇಕಾದರೂ ವೀಳ್ಯದೆಲೆ ಕಾಯಂ ಆಗಿದೆ. ಎಲೆ ಅಡಕೆ ಜಿಗಿಯುವವರ ಪಾಲಿಗೂ ವೀಳ್ಯದೆಲೆ ಇರಬೇಕು. ಕಳೆದ ನಾಲ್ಕು ತಿಂಗಳಿನಿಂದ ವೀಳ್ಯದೆಲೆ ಬೆಲೆಬರೋಬ್ಬರಿ ಮೂರು ಪಟ್ಟು ಹೆಚ್ಚಳ ಆಗಿದ್ದು, ಬೆಲೆ ಏರಿಕೆಯ ತಾಪ ಗ್ರಾಹಕರಮುಟ್ಟಿದೆ. ಜಿಲ್ಲೆಯಲ್ಲಿ ಕೆಲವು ಮನೆಗಳ ಹತ್ತಿರ ಪೂಜೆಗೆ ಮತ್ತು ಬಳಸಲು ವೀಳ್ಯದೆಲೆಯನ್ನು ಪಾಟ್‌ ಮತ್ತು ಖಾಲಿ ಜಾಗದಲ್ಲಿ ಹಾಕಿರುವುದು ಕಂಡುಬರುತ್ತಿದ್ದು, ಜಿಲ್ಲೆಯಲ್ಲಿ ವೀಳ್ಯದೆಲೆತೋಟಗಳು ಅಪರೂಪ.ಈ ಬಾರಿ ವೀಳ್ಯದೆಲೆ ಇಳುವರಿ ಕಡಿಮೆಯಾಗಿದ್ದು ಜಿಲ್ಲೆಗೆ ಪೂರೈಕೆ ಆಗುತ್ತಿರುವ ಪಾವಗಡ, ತುಮಕೂರು, ಹಾವೇರಿ, ಆಂಧ್ರಪ್ರದೇಶದ ಹಿಂದೂಪುರದ ಅಮಲಾಪುರದಿಂದ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ ಮತ್ತಿತರ ಕಡೆ ವೀಳ್ಯದೆಲೆ ತೋಟಗಳಿಗೂ ಇಳುವರಿ ಕಡಿಮೆಯಾದ ಪರಿಣಾಮ ವೀಳ್ಯದೆಲೆ ಜಿಲ್ಲೆಗೆ ಪೂರೈಕೆಯಾಗದೆ ಬೆಲೆ ಹೆಚ್ಚಳ ಕಂಡಿದೆ ಎನ್ನುವ ಮಾತು ವೀಳ್ಯದೆಲೆ ವ್ಯಾಪಾರಸ್ಥರಿಂದ ಕೇಳಿಬರುತ್ತಿದೆ.ವೀಳ್ಯೆದೆಲೆ ಬಹಳ ದುಬಾರಿ

ವೀಳ್ಯದೆಲೆ ಮಾರಾಟವನ್ನು ನಮ್ಮ ತಾತ ಮುತ್ತಾತನ ಕಾಲದಿಂದಲೂ ವೀಳ್ಯದೆಲೆ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಈಗಲೂ ಸಹಮುಂದುವರಿಸಿಕೊಂಡು ಬಂದಿದ್ದೇವೆ. ಇಷ್ಟು ದುಬಾರಿಯಾಗಿದ್ದು ನಾವು ಕಂಡಿರಲಿಲ್ಲ. ತುಮಕೂರು, ಪಾವಗಡ, ಹಾವೇರಿ, ಆಂಧ್ರಪ್ರದೇಶದ ಹಿಂದೂಪುರದ ಅಮಲಾಪುರದಿಂದ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ ಇತರೆ ಕಡೆಗಳಿಂದ ವೀಳ್ಯದೆಲೆ ತರಿಸಲಾಗುತ್ತಿದೆ.ವೀಳ್ಯದೆಲೆ ವ್ಯಾಪಾರಿ ಗೋಪಾಲ್ ಹೇಳುತ್ತಾರೆ.

ವೀಳ್ಯದೆಲೆ ಬೆಳೆಯನ್ನು ನಮ್ಮ ಮನೆಗೆ ಪೂಜೆಗೆ ಮತ್ತು ತಿನ್ನಲು ಮನೆಯ ಆವರಣದಲ್ಲೇ ಬೆಳೆಸುತ್ತಿದ್ದೇವೆ. ದೀಪಾವಳಿ ಸಮಯದಲ್ಲಿ ವೀಳ್ಯದೆಲೆ ಗಿಡದ ಮುಂದೆ ನೋಮುವ ಪದ್ಧತಿಯಿದೆ ಎನ್ನುತ್ತಾರೆ ಪ್ರಗತಿಪರ ರೈತ ಮುನಿಕೃಷ್ಣಪ್ಪ.ಸಿಕೆಬಿ-3 ವೀಳ್ಯೆದೆಲೆ ತೋಟ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ