ಕ್ರೀಡೆಯಿಂದ ಉತ್ತಮ ಆಲೋಚನಾ ಶಕ್ತಿ: ಕಿಮ್ಮನೆ ರತ್ನಾಕರ್‌

KannadaprabhaNewsNetwork |  
Published : Jan 09, 2024, 02:00 AM IST
ದಿ.8-ಅರ್.ಪಿ.ಟಿ.1ಪಿ ಸಮೀಪದ ಕೋಡೂರು ಗ್ರಾಮದಲ್ಲಿ ಫ್ರೆಂಡ್ಸ್ ಮಲೆನಾಡು ಆಟಗಾರ ಲೀಗ್ ಮಾದರಿಯ ಆಯೋಜಿಸಲಾದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಗೋಡು ರತ್ನಾಕರ್ ಇವರಿಗೆ ಮಾಜಿ ಸಚಿವ ಕಾಂಗ್ರೇಸ್ ಮುಖಂಡ ಕಿಮ್ಮನೆ ರತ್ನಾಕರ್ ಸನ್ಮಾನಿಸಿದರು. | Kannada Prabha

ಸಾರಾಂಶ

ಆಟದಲ್ಲಿ ಸೋಲುತ್ತೇನೋ, ಗೆಲ್ಲುತ್ತೇನೋ ಎಂಬ ಚಿಂತೆ ಸಲ್ಲದು. ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಸಿಕ್ಕ ಅವಕಾಶಗಳನ್ನು ಗೆಲುವಿನತ್ತ ಕೊಂಡೊಯ್ಯಬೇಕು ಎಂದು ರಿಪ್ಪನ್‌ಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆಕ್ರೀಡಾಪಟುಗಳು ಸೋಲು-ಗೆಲುವಿನ ಬಗ್ಗೆ ಚಿಂತಿಸದೇ ಭಾಗವಹಿಸುವ ಮನೋಭಾವನೆ ಬೆಳಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಹೇಳಿದರು. ಇಲ್ಲಿಗೆ ಸಮೀಪದ ಕೋಡೂರು ಗ್ರಾಮದಲ್ಲಿ ಫ್ರೆಂಡ್ಸ್ ಮಲೆನಾಡು ಆಟಗಾರ ಲೀಗ್ ಮಾದರಿಯ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಗೋಡು ರತ್ನಾಕರ್ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಕ್ರೀಡೆಯು ಪ್ರತಿಯೊಬ್ಬರಲ್ಲಿಯೂ ಸಾಮರ್ಥ್ಯ ಮತ್ತು ಸಮಾನತೆ ಸಂಕೇತವಾಗಿ ಕಾರ್ಯನಿರ್ವಹಿಸುತ್ತಿದೆ. ಯುವಕರಲ್ಲಿ ಸಹೋದರತ್ವವನ್ನು ಬೆಳಸಲು ಕ್ರೀಡೆ ಉತ್ತಮ ಸಾಧನವಾಗಿದೆ. ಜನಸೇವಕರಿಗೆ ಆಧಿಕಾರಾವಧಿಯಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳು ದೊರಕುತ್ತವೆ. ಅದನ್ನು ಸಮರ್ಥವಾಗಿ ನಿರ್ವಹಿಸುವ ಮನೋಭಾವನೆ ಮುಖ್ಯವಾಗಿದೆ. ಆ ಕಾರಣ ಜಿಪಂ ಸದಸ್ಯರಾಗಿ ಸತತ 4 ಬಾರಿ ಗೆಲುವು ಸಾಧಿಸುವುದರೊಂದಿಗೆ ಜನಮನ್ನಣೆ ಗಳಿಸುವಲ್ಲಿ ಕಲಗೋಡು ರತ್ನಾಕರ್ ಯಶಸ್ವಿ ನಾಯಕ ಆಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದರು.

ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಡಾ.ಚಿಕ್ಕಕೊಮರಿಗೌಡ ದತ್ತಿ ಪ್ರಶಸ್ತಿಗೆ ಭಾಜನರಾದ ಕಲಗೋಡು ರತ್ನಾಕರ್ ಅವರನ್ನು ಕೋಡೂರು ಗ್ರಾಮಸ್ಥರು, ಫ್ರೆಂಡ್ಸ್ ಮಲೆನಾಡು ಆಟಗಾರ ಲೀಗ್ ಸಂಸ್ಥೆಯವರು ಸನ್ಮಾಸಿ, ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಕಲಗೋಡು ರತ್ನಾಕರ್ ಮಾತನಾಡಿ, ತಾಪಂ ಚುನಾವಣೆಯಲ್ಲಿ ಗೆದ್ದ ನಂತರ ಹಿಂದೆ ನೋಡದೇ ಮುಂದೆ ಬರುವಂತೆ ಮಾಡಿರುವ ಕ್ಷೇತ್ರದ ಮತದಾರ ಋಣವನ್ನು ಎಂದಿಗೂ ಮರೆಯುವಂತಿಲ್ಲ. ಆ ಕಾರಣ ಸಹಾಯ ಬಯಸಿ ಬಂದವರಿಗೆ ಕ್ಷಣವೂ ವಿಳಂಬ ಮಾಡದೇ ಅವರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ಈಗಾಗಲೇ ಶಿಕ್ಷಣ ಸಚಿವರು ಕೆಪಿಎಸ್ ಸ್ಕೂಲ್ ನೀಡುವ ಘೋಷಣೆ ಮಾಡಿದ್ದು, ಅದನ್ನು ಕೋಡೂರಿನಲ್ಲಿ ಆರಂಭಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಆಸ್ಪತ್ರೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೀಗೆ ಅಭಿವೃದ್ಧಿಯನ್ನು ಮಾಡಿರುವ ತೃಪ್ತಿ ನನಗಿದೆ ಎಂದರು.

ತಾಪಂ ಮಾಜಿ ಸದಸ್ಯ ಬಿ.ಜೆ.ಚಂದ್ರಮೌಳಿಗೌಡ, ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ ಕಲಗೋಡು, ಉಪಾಧ್ಯಕ್ಷ ಸುಧಾಕರ್, ಸದಸ್ಯ ಜೈಪ್ರಕಾಶ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ವೈ.ಜಯಂತ್, ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ವೇದಾಂತ್‍ಗೌಡ, ರಾಮಪ್ಪ, ಮನ್ನಾಡ್‍ ಬೇಕರಿ ಪ್ರದೀಪ್, ರಂಜಿತ್, ವಿಕಾಸ್, ಪುರುಷೋತ್ತಮ, ಅಮರನಾಥ ಶೆಟ್ಟಿ, ಕೃಷಿ ಪತ್ತಿನ ಸಹಕಾರ ಸಂಘದ ಸುಬ್ಬಣ್ಣ, ವಾಸುದೇವ ಇನ್ನಿತರರು ಹಾಜರಿದ್ದರು. - - - -8ಆರ್.ಪಿಟಿ1ಪಿ: ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಕಲಗೋಡು ರತ್ನಾಕರ್ ಅವರನ್ನು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಸನ್ಮಾನಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌