- ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ದೌಡು । ತುರ್ತು ದುರಸ್ತಿಗೆ ಹಣ ಬಿಡುಗಡೆಗೆ ನೀರಾವರಿ ನಿಗಮ ಎಂ.ಡಿ.ಗೆ ಒತ್ತಾಯ
ತಾಲೂಕಿನ ಕುರ್ಕಿ ಗ್ರಾಮದಲ್ಲಿ ಮಂಗಳವಾರ ಭದ್ರಾ ಕಾಲುವೆ ಸೇತುವೆ ಒಂದಿಷ್ಟು ಭಾಗ ಕುಸಿದಿದ್ದು, ವಿಚಾರ ತಿಳಿಯುತ್ತಿದ್ದಂತೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳ ಸಮೇತ ಭೇಟಿ ನೀಡಿ, ಪರಿಶೀಲಿಸಿದರು.
ಶಾಸಕರು ಮಾತನಾಡಿ, ಭದ್ರಾ ಜಲಾಶಯದಿಂದ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಈಗಾಗಲೇ ನೀರು ಹರಿಸಲಾಗಿದೆ. 2 ದಿನಗಳಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಕುರ್ಕಿ ಗ್ರಾಮದ ಬಳಿ ಭದ್ರಾ ಕಾಲುವೆಯ ಜಂಕ್ಷನ್ ಸಮೀಪ ಹರಿಹರ ಮತ್ತು ಹರಪನಹಳ್ಳಿ ಭಾಗಕ್ಕೆ ನೀರು ಬಿಡುವ ಗೇಟ್ ಬಳಿ 6/3ನೇ ಭದ್ರಾ ಕಾಲುವೆ ಸೇತುವೆ ಕುಸಿದಿದೆ. ತಕ್ಷಣವೇ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.ನಿಗಮ ವ್ಯವಸ್ಥಾಪಕರಿಗೆ ಫೋನ್:
ಕಬ್ಬೂರು, ರಾಮಗೊಂಡನಹಳ್ಳಿ ಬಳಿಯ ಸೇತುವೆಯೂ ಕಿತ್ತುಹೋಗಿದೆ. ಹೊನ್ನೂರು ಬಳಿ ಟೂಬ್ ಕಿತ್ತು ಜಮೀನುಗಳಿಗೆ ನೀರು ನುಗ್ಗಿದೆ. ಇದೇ ರೀತಿ ಮಾಯಕೊಂಡ ಕ್ಷೇತ್ರದ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕಾಲುವೆಗಳು ಮತ್ತು ಸೇತುವೆಗಳು ಶಿಥಿಲಗೊಂಡಿರುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಈಗಾಗಲೇ ನಿಗಮಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ನೀರಾವರಿ ಇಲಾಖೆ ಎಇಇ ಮನೋಜ್, ಇಇ ಮಂಜುನಾಥ, ಎಂಜಿನಿಯರ್ ಸತೀಶ, ಗ್ರಾಮಸ್ಥರಾದ ನಂದ್ಯಪ್ಪ, ವೀರೇಂದ್ರಾಚಾರ್ಯ, ಶಿವಜ್ಜ, ಮರುಳಸಿದ್ದಪ್ಪ, ಹಾಲೇಶ, ರಾಮಗೊಂಡಹಳ್ಳಿ ಮಲ್ಲಿಕಾರ್ಜುನ ಇನ್ನಿತರರು ಇದ್ದರು.
ಬಾಕ್ಸ್ * ಮನೆ ಕುಸಿತ, ಗಾಯಾಳುಗಳ ಭೇಟಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕು ಚಿಕ್ಕಕುರುಬರಹಳ್ಳಿ ಗ್ರಾಮದಲ್ಲಿ 2 ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆ ಬಿದ್ದಿದ್ದರಿಂದ ನಾಗಪ್ಪ (40) ಎಂಬವರ ಕಾಲು, ಪತ್ನಿ ಅಕ್ಷತಾ (30) ಅವರ ಕೈ ಹಾಗೂ 10 ವರ್ಷದ ಮಗಳ ಕೈ-ಕಾಲು ಮುರಿದಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದು ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ದಾವಣಗೆರೆ ತಾಲೂಕು ಕುರ್ಕಿ ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಯ 6/3ನೇ ಸೇತುವೆ ಕುಸಿದುಬಿದ್ದ ಸ್ಥಳಕ್ಕೆ ಶಾಸಕ ಬಸವಂತಪ್ಪ ಅವರು ಅಧಿಕಾರಿಗಳು, ಸ್ಥಳೀಯರ ಜೊತೆಗೆ ಭೇಟಿ ನೀಡಿ, ಪರಿಶೀಲಿಸಿದರು. -20ಕೆಡಿವಿಜಿ4, 5: